Advertisement

3389 ಅತಿಥಿ ಶಿಕ್ಷಕರ ತುರ್ತು ನೇಮಕ

01:19 AM Feb 10, 2019 | |

ಬೆಂಗಳೂರು: ರಾಜ್ಯದ ಪ್ರಾಥಮಿಕ ಶಾಲೆಯಲ್ಲಿ ಪದವೀಧರ ಶಿಕ್ಷಕರ ನೇಮಕಾತಿ ಸಂದರ್ಭದಲ್ಲಿ ಹುದ್ದೆ ಕಳೆದುಕೊಂಡ ಅತಿಥಿ ಶಿಕ್ಷಕರಿಗೆ ಅತಿ ಶೀಘ್ರದಲ್ಲಿ ಬೇರೆ ಶಾಲೆಯಲ್ಲಿ ನೇಮಕ ಮಾಡಿಕೊಳ್ಳುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಸೂಚಿಸಿದೆ.

Advertisement

ರಾಜ್ಯದಲ್ಲಿ ಖಾಲಿಯಿದ್ದ 10 ಸಾವಿರ ಪದವೀಧರ ಹುದ್ದೆಗಳಿಗೆ ಶೈಕ್ಷಣಿಕ ವರ್ಷದ ಆರಂಭದಲ್ಲಿ ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳಲಾಗಿತ್ತು. ಹತ್ತು ಸಾವಿರ ಪದವೀಧರ ಶಿಕ್ಷಕರ ಹುದ್ದೆಗಳಲ್ಲಿ 3389 ಹುದ್ದೆ ಈಗ ಭರ್ತಿಯಾಗಿದೆ. ಈ ಹುದ್ದೆಗಳಲ್ಲಿದ್ದ 3389 ಅತಿಥಿ ಶಿಕ್ಷಕರು ಈಗ ಉದ್ಯೋಗ ಕಳೆದುಕೊಂಡಿದ್ದಾರೆ. ಅವರೆಲ್ಲರಿಗೂ ಶೈಕ್ಷಣಿಕ ಹಿತದೃಷ್ಟಿಯಿಂದ ಆದಷ್ಟು ಬೇಗ ಬೇರೆ ಶಾಲೆಗಳಲ್ಲಿ ಅತಿಥಿ ಶಿಕ್ಷಕರನ್ನಾಗಿ ನೇಮಿಸಿಕೊಳ್ಳುವಂತೆ ಶಿಕ್ಷಣ ಇಲಾಖೆ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶಿಸಿದೆ.

2018-19ನೇ ಸಾಲಿನಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿನ ನೇಮಕಾತಿ ಅಧಿಸೂಚಿತ 10 ಸಾವಿರ ಪದವೀಧರ ಶಿಕ್ಷಕರಲ್ಲಿ 3389 ಶಿಕ್ಷಕರು ಆಯ್ಕೆಯಾಗಿದ್ದಾರೆ. ಹೀಗಾಗಿ, ಈ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ 3389 ಅತಿಥಿ ಶಿಕ್ಷಕರು ಹುದ್ದೆಯನ್ನು ತೆರವುಗೊಳಿಸಿದ್ದಾರೆ. ಶೈಕ್ಷಣಿಕ ಹಿತ ದೃಷ್ಟಿಯಿಂದ ಈಗಾಗಲೇ ಸೂಚಿಸಿರುವ 10 ಸಾವಿರ ಶಿಕ್ಷಕರ ಮಿತಿಯೊಳಗೆ ಖಾಲಿ ಇರುವ ಹುದ್ದೆಗೆ 3389 ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳುವಂತೆ ಇಲಾಖೆ ಆದೇಶ ಹೊರಡಿಸಿದೆ.

ಈಗಾಗಲೇ ಮಂಜೂರಾದ ಅನುದಾನದ ಮಿತಿಯೊಳಗೆ ಖರ್ಚನ್ನು ಭರಿಸುವ ಷರತ್ತಿನೊಂದಿಗೆ ಅತಿಥಿ ಶಿಕ್ಷಕರನ್ನು ಭರ್ತಿ ಮಾಡಿಕೊಳ್ಳಲು ಅನುಮತಿ ನೀಡಲಾಗಿದೆ. ಅತಿ ತುರ್ತಾಗಿ ನೇಮಕಾತಿ ಪ್ರಕ್ರಿಯೆ ನಡೆಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಹಾಗೂ ಮುಖ್ಯಶಿಕ್ಷಕರಿಗೆ ಸೂಚನೆ ನೀಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next