ಸ್ಯಾನ್‌ಫ್ರಾನ್ಸಿಸ್ಕೋ: ಟ್ವಿಟರ್ ಮಾಲಕ ಎಲಾನ್ ಮಸ್ಕ್ ತನ್ನ ಕಚೇರಿಯ ಬಾಡಿಗೆ ಪಾವತಿಸಲು ಸಾಧ್ಯವಾಗದೇ ಪರಿತಪಿಸುತ್ತಿರುವಾಗಲೇ ಮಂಗಳವಾರದಿಂದ ಟ್ವಿಟರ್‌ನಲ್ಲಿರುವ ಹಲವು ವಸ್ತುಗಳ ಹರಾಜು ಆರಂಭವಾಗಿದೆ.
Advertisement
ಪ್ರಸಿದ್ಧ ಬರ್ಡ್ ಲೋಗೋ, ಕಚೇರಿ ಬಳಕೆಯ ವಸ್ತುಗಳಾದ ವೈಟ್ ಬೋರ್ಡ್, ಡೆಸ್ಕ್ಗಳು, ಕೆಎನ್95 ಮಾಸ್ಕ್ ಗಳು ತುಂಬಿರುವ 100 ಬಾಕ್ಸ್‌ಗಳು, ವಿನ್ಯಾಸ ಹಾಗೂ ಚಿತ್ತಾರಗಳಿಂದ ಕೂಡಿರುವ ಕುರ್ಚಿಗಳು, ಕಾಫಿ ಟೇಬಲ್, ಕಾಫಿ ಮಷೀನ್, ಪ್ರಿಂಟಿಂಗ್ ಸಾಧನ, ಡಿಸೈನರ್ ಸೋಫಾ ಸಹಿತ ಒಟ್ಟು 631ಕ್ಕೂ ಅಧಿಕ ವಸ್ತುಗಳನ್ನು ಹರಾಜು ಹಾಕಲಾಗುತ್ತಿದೆ. ಕನಿಷ್ಠ ಮೊತ್ತವನ್ನು 25 ಡಾಲರ್ ಎಂದು ನಿಗದಿಪಡಿಸಲಾಗಿದೆ.