ವಾಷಿಂಗ್ಟನ್: ಎನ್‌ಬಿಸಿ ಯುನಿವರ್ಸಲ್ ಕಂಪೆನಿಯ ಜಾಹೀರಾತು ವಿಭಾಗದ ಮುಖ್ಯಸ್ಥೆ ಆಗಿರುವ ಲಿಂಡಾ ಯಾಕರಿನೊ ಟ್ವಿಟರ್‌ನ ನೂತನ ಸಿಇಒ ಆಗಲಿದ್ದಾರೆ ಎಂದು ವರದಿಗಳು ತಿಳಿಸಿವೆ.
“ಟ್ವಿಟರ್‌ಗೆ ನೂತನ ಸಿಇಒ ಸಿಕ್ಕಿದ್ದಾರೆ’ ಎಂದು ಟ್ವಿಟರ್ ಮಾಲಕ ಎಲಾನ್ ಮಸ್ಕ್ ಗುರುವಾರ ಟ್ವೀಟ್ ಮಾಡಿದ್ದರು. ಆದರೆ ಹೆಸರನ್ನು ಬಹಿರಂಗಪಡಿಸಿರಲಿಲ್ಲ. ಲಿಂಡಾ ಅವರು ಒಂದು ದಶಕಕ್ಕೂ ಹೆಚ್ಚಿನ ಅವಧಿಯಿಂದ ಎನ್‌ಬಿಸಿ ಯುನಿವರ್ಸಲ್‌ನಲ್ಲಿ ಉದ್ಯೋಗ ಮಾಡುತ್ತಿದ್ದಾರೆ.
ಅಲ್ಲಿ ಅವರು ಜಾಹೀರಾತಿನ ಪರಿಣಾಮಕಾರಿತ್ವವನ್ನು ಅಳೆಯಲು ಉತ್ತಮ ಮಾರ್ಗಗಳನ್ನು ಕಂಡುಕೊಳ್ಳಲು ಇಂಡಸ್ಟ್ರಿ ಅಡ್ವೊಕೆಟ್ ಆಗಿದ್ದಾರೆ.
ಅಲ್ಲದೇ ಜಾಹೀರಾತು ವಿಭಾಗದ ಮುಖ್ಯಸ್ಥರಾಗಿದ್ದಾರೆ. ಇದಕ್ಕೂ ಮುನ್ನ ಅವರು ಟರ್ನರ್ ಎಂಟರ್‌ಟೇನ್ಮೆಂಟ್ ಕಂಪೆನಿಯಲ್ಲಿ 19 ವರ್ಷ ಕಾರ್ಯ ನಿರ್ವಹಿಸಿದ್ದಾರೆ. ಲಿಂಡಾ ಅವರು ಪೆನ್ ಸ್ಟೇಟ್ ವಿಶ್ವವಿದ್ಯಾನಿಲಯದಿಂದ ಲಿಬರಲ್ ಆರ್ಟ್ಸ್ ಮತ್ತು ದೂರಸಂಪರ್ಕ ವಿಷಯದಲ್ಲಿ ಪದವಿ ಪಡೆದಿದ್ದಾರೆ.