Advertisement

ಟ್ವಿಟ್ಟರ್ ನಿಂದ ಮತ್ತೆ ಬ್ರೇಕ್ ಪಡೆಯಲಿದ್ದಾರೆ ಟೆಸ್ಲಾ, ಸ್ಪೇಸ್‌ ಎಕ್ಸ್ ಸಿಇಒ ಮಸ್ಕ್

12:04 PM Feb 03, 2021 | Team Udayavani |

ನವ ದೆಹಲಿ : ಟ್ವಿಟ್ಟರ್ ನಿಂದ ಸ್ವಲ್ಪ ದಿನಗಳ ಕಾಲ ವಿರಾಮ ತೆಗೆದುಕೊಳ್ಳಲಿದ್ದೇನೆ ಎಂದು ಎಲೋನ್ ಮಸ್ಕ್ ಅವರು ಹೇಳಿದ್ದಾರೆ.

Advertisement

ಮೈಕ್ರೋ ಬ್ಲಾಗಿಂಗ್ ಪ್ಲಾಟ್‌ ಫಾರ್ಮ್ ಮೂಲಕ ಅವರ ಮುಂದಿನ ಯೋಜನೆಗಳ ಬಗ್ಗೆ ಪ್ರಕಟಣೆಗಳನ್ನು ತಿಳಿಸಲಾಗುತ್ತದೆ ಎಂದು ಕೂಡ ಅವರು ತಿಳಿಸಿದ್ದಾರೆ.

ಓದಿ : ಹೊಸ ಹುಡುಗನ ಲವ್ಲಿ ಸ್ಟೋರಿ

“Off Twitter for a while” ಎಂದು ತನ್ನ 44.8 ಮಿಲಿಯನ್ ಅನುಯಾಯಿಗಳಿಗೆ(ಫಾಲೋವರ್ಸ್) ಮಾಡಿದ ಟ್ವೀಟ್‌ ನಲ್ಲಿ, ಮಸ್ಕ್ ಹೇಳಿಕೊಂಡಿದ್ದಾರೆ.

Advertisement

ಜೂನ್ 2020 ರಲ್ಲಿ ಯೂ ಕೂಡ ಮಸ್ಕ್ ಇದೇ ನಿರ್ಧಾರವನ್ನು ತೆಗೆದುಕೊಂಡಿದ್ದರು. ಈಗ ಮತ್ತೆ ಟೆಸ್ಲಾ ಮತ್ತು ಸ್ಪೇಸ್‌ ಎಕ್ಸ್ ಸಿಇಒ ಮಸ್ಕ್ ಮಾಡಿರುವ ಟ್ವೀಟ್ ಕೂಡ ಕಳೆದ ಜೂನ್ ನಲ್ಲಿ ಮಾಡಿದ ಟ್ವೀಟನ್ನು ಪುನರಾವರ್ತಿಸುವಂತಿದೆ.

2020 ರಲ್ಲಿ ಮಸ್ಕ್ ಅವರ ನಿವ್ವಳ ಸಂಪತ್ತು 8 128.9 ಬಿಲಿಯನ್ ಏರಿಕೆಯಾಗಿತ್ತು, ಆ ಮೂಲಕ ಮಸ್ಕ್,  ಅಮೆಜಾನ್ ಸ್ಥಾಪಕ ಮತ್ತು ಸಿಇಒ ಜೆಫ್ ಬೆಜೋಸ್ ಅವರನ್ನು ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಗಳ ಪಟ್ಟಿಯಿಂದ ಕೆಳಗಿಳಿಸಿದ್ದಾರೆ.

ಈ ಹಿಂದೆ “Just deleted my Twitter account.” ಎಂದು ಕಳೆದ  ಜೂನ್‌ ನಲ್ಲಿ ಮಸ್ಕ್ ಟ್ವೀಟ್ ಮಾಡಿದ್ದರು, ಆದರೆ ಅವರು ಕೆಲವು ಹೊತ್ತಲ್ಲಿ ಮತ್ತೆ ಟ್ವೀಟ್ಟರ್ ಗೆ ಎಂಟ್ರಿ ಕೊಟ್ಟಿದ್ದರು.

ಓದಿ : ಪೋಸ್ಟರ್‌ನಲ್ಲಿ ಹಾಫ್ ಹೀರೋಯಿನ್‌: ಸ್ಯಾಂಡಲ್‌ವುಡ್‌ಗೆ ಮತ್ತೂಬ್ಬಳು ಮಲೆಯಾಳಿ ಚೆಲುವೆ

 

Advertisement

Udayavani is now on Telegram. Click here to join our channel and stay updated with the latest news.

Next