Advertisement

ಎಲಾನ್‌ ಮಸ್ಕ್ ಅಕ್ರಮ ಸಂಬಂಧ : “ವಾಲ್‌ ಸ್ಟ್ರೀಟ್‌ ಜರ್ನಲ್‌’ ವರದಿ

08:36 AM Jul 26, 2022 | Team Udayavani |

ವಾಷಿಂಗ್ಟನ್‌: ಟೆಸ್ಲಾ ಸಂಸ್ಥೆಯ ಸಂಸ್ಥಾಪಕ ಎಲಾನ್‌ ಮಸ್ಕ್ ಅವರು ಗೂಗಲ್‌ ಸಂಸ್ಥೆಯ ಸಹ ಸಂಸ್ಥಾಪಕ ಸೆರ್ಗೆ ಬ್ರಿನ್‌ ಅವರ ಪತ್ನಿ ನಿಕೋಲ್‌ ಶನಾಹನ್‌ ಅವರೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾರೆ ಎಂದು “ವಾಲ್‌ ಸ್ಟ್ರೀಟ್‌ ಜರ್ನಲ್‌’ ವರದಿ ಮಾಡಿದೆ.

Advertisement

ಇದೇ ಕಾರಣದಿಂದ ಬ್ರಿನ್‌ ಮತ್ತು ಮಸ್ಕ್ ಸ್ನೇಹ ಹಳಸಿದ್ದು, ಬ್ರಿನ್‌ ಪತ್ನಿ ನಿಕೋಲ್‌ಗೆ ವಿಚ್ಛೇದನ ನೀಡುತ್ತಿದ್ದಾರೆ. ಈ ವಿಚಾರವಾಗಿ ಮಸ್ಕ್ ಅವರು ಬ್ರಿನ್‌ ಬಳಿ ಕ್ಷಮೆಯಾಚಿಸಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.

ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ಎಲಾನ್‌ ಮಸ್ಕ್, “ಇದು ಸುಳ್ಳು. ಬ್ರಿನ್‌ ನನಗೆ ಆತ್ಮೀಯ ಸ್ನೇಹಿತ. ನಿನ್ನೆ ರಾತ್ರಿಯೂ ಇಬ್ಬರೂ ಪಾರ್ಟಿ ಮಾಡಿದ್ದೇವೆ. ನಿಕೋಲ್‌ರನ್ನು ನಾನು ಕಳೆದ 3 ವರ್ಷಗಳಲ್ಲಿ 2 ಬಾರಿ ಭೇಟಿ ಮಾಡಿದ್ದೇನಷ್ಟೇ’ ಎಂದು ಹೇಳಿದ್ದಾರೆ.

ಬ್ರಿನ್‌ ಅವರು ನಿಕೋಲ್‌ರಿಂದ ವಿಚ್ಛೇದನಕ್ಕೆ ಈ ವರ್ಷ ಜನವರಿಯಲ್ಲಿ ಅರ್ಜಿ ಸಲ್ಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next