Advertisement

“ಮಾನವನ ಕೂದಲಿಗಿಂತ 10 ಪಟ್ಟು ಸಣ್ಣದಿರುವ ಬ್ರೈನ್ ಮೆಷಿನ್” ಅಭಿವೃದ್ಧಿಯಲ್ಲಿ ಎಲೊನ್ ಮಸ್ಕ್.!

05:28 PM Feb 12, 2021 | Team Udayavani |

ನವ ದೆಹಲಿ : ಜಗತ್ತಿನಲ್ಲಿ ಮಹತ್ವಾಂಕ್ಷೆಯ ವ್ಯಕ್ತಿಗಳಲ್ಲಿ ಓರ್ವರಾದ ಎಲೋನ್ ಮಸ್ಕ್, ಜಗತ್ತಿನ ಅತ್ಯಂತ ಶ್ರೀಮಂತ ವ್ಯಕ್ತಿ. ಸದ್ಯ, ಎಲೆಕ್ಟ್ರಿಕ್ ಕಾರುಗಳು, ಬಾಹ್ಯಾಕಾಶ ಪರಿಶೋಧನೆ, ಪರಿಣಾಮಕಾರಿಯಾದ ಸಾರ್ವಜನಿಕ ಸಾರಿಗೆ, ಬ್ರೈನ್ ಮೆಷಿನ್ ಇಂಟರ್ ಫೇಸ್ ಅಭಿವೃದ್ಧಿ ಪಡಿಸುವಲ್ಲಿ ಏಕಕಾಲದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

Advertisement

ಕಳೆದ ವರ್ಷ, ಎಲೊನ್ ಮಸ್ಕ್ ಅವರ ನೇತೃತ್ವದ Neuralink ಕಂಪೆನಿ   ಬ್ರೈನ್ ಮೆಷಿನ್ ಇಂಟರ್ ಫೆಸ್ ನೊಂದಿಗೆ ವ್ಯವಹಿಸುವ ನಾಣ್ಯ ಗಾತ್ರದ ವೈಯರ್ ಲೆಸ್ ಇಂಪ್ಲಾಂಟ್ ಗಳನ್ನು ಹಂದಿಗಳ ಮೆದುಳಿಗಾಗಿ ಅಭಿವೃದ್ಧಿ ಪಡಿಸಿತ್ತು. ಈ ವರ್ಷ ಮಾನವನ ಮೆದುಳಿಗೆ ತಂತ್ರಜ್ಞಾನವನ್ನು ಅಳವಡಿಸುವ ಹೊಸ ತಂತ್ರಜ್ಞಾನವನ್ನು ಎದುರುಗಾಣುತ್ತಿದೆ.

ಓದಿ : “ಮೋಸ್ಟ್ ವೆಲ್ ಕಮ್” : ಲಕ್ಷ್ಮೀ ಹೆಬ್ಬಾಳ್ಕರ್ ಗೆ ರಮೇಶ್ ಜಾರಕಿಹೊಳಿ ಟಾಂಗ್

ಮಾನವನ ಕೂದಲಿಗೆ ಹೋಲಿಸಿದರೆ 10 ಪಟ್ಟು ಚಿಕ್ಕದಾಗಿರುವ ನ್ಯಾನೋ ಫ್ಲೆಕ್ಸಿಬಲ್ ಟ್ರೆಡ್ ಗಳನ್ನು ಹೊಂದಿರುವ ಇಂಪ್ಲಿಮೆಂಟ್ ಗಳು ಮೆದುಳಿಗೆ ಆದ ಇಂಜುರಿಗಳಿಗೆ ಚಿಕಿತ್ಸೆ ನೀಡಲು ಸಹಾಯ ಮಾಡುತ್ತದೆ.

ಈ ತಂತ್ರಜ್ಞಾನ ಇನ್ನೂ ಪ್ರಾಥಮಿಕ ಹಂತದಲ್ಲಿದ್ದು, ಕಂಪೆನಿ ಈಗಾಗಲೇ ಪ್ರಾಣಿಗಳ ಮೆದುಳಿಗೆ ಅಳವಡಿಸುವುದರ ಮೂಲಕ ತಂತ್ರಜ್ಞಾನವನ್ನು ಪ್ರಾಯೋಗಿಕ ಪರೀಕ್ಷೆಗೆ ಒಳಪಡಿಸುತ್ತಿದೆ. ಅದು ಸುಮಾರು ಶೇಕಡಾ 87 ರಷ್ಟು ಧನಾತ್ಮಕ ಫಲಿತಾಂಶವನ್ನು ನೀಡಿದೆ ಎಂದು ಕಂಪೆನಿ ಹೇಳಿಕೊಂಡಿದೆ.

Advertisement

ಬಹಳ ಪ್ರಮುಖವಾಗಿ ಪಾರ್ಶ್ವವಾಯುವಿಗೆ ಒಳಗಾದ ರೋಗಿಗಳಿಗಾಗಿ ಈ ವೈಯರ್ ಲೆಸ್ ಬ್ರೈನ್ ಮೆಷಿನ್ ನನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ಇದನ್ನು ಮಾನವನ ಮೆದುಳಿಗೆ ಅಳವಡಿಸುವುದರಿಂದ ಮಾನವನ ಆಲೋಚನೆಗಳು ಕ್ರಿಯೆಗಳಾಗಿ ಪರಿವರ್ತಿಸುತ್ತದೆ. ಈ ಬಗ್ಗೆ ಪ್ರಾಯೋಗಿಕ ಪರೀಕ್ಷೆ ನಡೆಸಿದ ಕಂಪೆನಿ ಯಶಸ್ವಿಯಾಗಿದೆ ಎಂದು ವರದಿಯಾಗಿದೆ.

ಮಾನವನ ಬಯಕೆಗಳನ್ನು ಸುಧಾರಿಸಲು ಈ ಇಂಪ್ಲಿಮೆಂಟ್ ಗಳು ಸಹಕರಿಸಲಿದೆ. ಉತ್ತಮ ಆಲೋಚನಾ ಪ್ರಕ್ರಿಯೆಯನ್ನು ಹೊಂದಿ ಉತ್ತಮ ಜೀವನ ನಡೆಸಲು ಇದು ಸಹಾಯ ಮಾಡುತ್ತದೆ. ಮಾನವನ ಮೆದುಳಿನಲ್ಲಿ ಬೇಕಾದಷ್ಟು ಆಲೋಚನೆಗಳು, ರಹಸ್ಯಗಳು ಇವೆ. ಆ ಎಲ್ಲಾ ಆಲೋಚನೆಗಳನ್ನು ಮತ್ತು ಸಬ್ ಕಾನ್ಶಿಯಸ್ ಯೋಚನೆಗಳನ್ನು ಗ್ರಹಿಸುವಷ್ಟು ತಂತ್ರಜ್ಞಾನವನ್ನು ಅಭಿವೃದ್ಧಿ ಹೊಂದಿಲ್ಲ ಎಂದು ಸ್ವತಃ ಕಂಪೆನಿ ಹೇಳುತ್ತದೆ.

ಈ ತಂತ್ರಜ್ಞಾನವು ಇನ್ನೂ ಅಭಿವೃದ್ಧಿ ಹಂತದಲ್ಲಿದೆ. ಆದರೇ, ಸಾಕಷ್ಟು ಕುತೂಹಲವನ್ನು ಹುಟ್ಟಿಸಿದ್ದಂತೂ ಸತ್ಯ.

ಓದಿ : ಯಾವುದಕ್ಕೂ ಅಂಜುವುದಿಲ್ಲ..ಒಂಟಿಸಲಗ ನಾನು: ಶೋಕಾಸ್ ನೋಟಿಸ್ ಸುದ್ದಿಗೆ ಯತ್ನಾಳ್ ಪ್ರತಿಕ್ರಿಯೆ

 

 

 

 

 

Advertisement

Udayavani is now on Telegram. Click here to join our channel and stay updated with the latest news.

Next