Advertisement

“ಎಲ್ಲಿದ್ದೆ ಇಲ್ಲಿ ತನಕ” ಸಿನಿಮಾದ ಟೈಟಲ್ ಹಾಡು ಬಿಡುಗಡೆ; ವಿಭಿನ್ನ ಲುಕ್ ನಲ್ಲಿ ಸೃಜನ್

10:03 AM Sep 18, 2019 | Nagendra Trasi |

ಬೆಂಗಳೂರು: ಟಾಕಿಂಗ್ ಸ್ಟಾರ್ ನಟ ಸೃಜನ್ ಲೋಕೇಶ್ ಹಾಗೂ ಬ್ಯೂಟಿ ಹರಿಪ್ರಿಯಾ ನಟಿಸಿರುವ “ಎಲ್ಲಿದ್ದೆ ಇಲ್ಲಿ ತನಕ” ಸಿನಿಮಾದ ಟೈಟಲ್ ಹಾಡು ಬಿಡುಗಡೆಗೊಂಡಿದ್ದು, ಯೂಟ್ಯೂಬ್ ನಲ್ಲಿ ಚಿತ್ರಪ್ರೇಮಿಗಳ ಗಮನ ಸೆಳೆದಿದೆ.

Advertisement

ಲೋಕೇಶ್ ಬ್ಯಾನರ್ ನಡಿಯಲ್ಲಿ ನಿರ್ಮಾಣವಾದ ಎಲ್ಲಿದ್ದೆ ಇಲ್ಲಿ ತನಕ ಸಿನಿಮಾದ ಟೀಸರ್ ಮತ್ತು ಟೈಟಲ್ ಟ್ರ್ಯಾಕ್ ಈಗಾಗಲೇ ಬಿಡುಗಡೆಗೊಳ್ಳುವ ಮೂಲಕ ಜನಪ್ರಿಯಗೊಂಡಿದೆ.

ಪ್ರೇಮ, ಹಾಸ್ಯ, ಆ್ಯಕ್ಷನ್ ಕಥೆಯನ್ನೊಳಗೊಂಡಿರುವ ಎಲ್ಲಿದ್ದೆ ಇಲ್ಲಿ ತನಕ ಸಿನಿಮಾ ಬಿಡುಗಡೆಗೆ ಸಿದ್ದವಾಗಿದೆ. ಇದೀಗ ರಿಲೀಸ್ ಆಗಿರುವ ಟೈಟಲ್ ಸಾಂಗ್ ನಲ್ಲಿ ನಾಯಕ ನಟ ಸೃಜನ್ ಲೋಕೇಶ್ ಹಾಗೂ ನಾಯಕಿ ಹರಿಪ್ರಿಯಾ ವಿಶೇಷ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ.

ಚಿತ್ರದಲ್ಲಿ ಸಾಧು ಕೋಕಿಲ, ರಾಧಿಕ ರಾವ್, ತಾರಾ ಅನುರಾಧ, ಅವಿನಾಶ್, ತಬಲಾ ನಾಣಿ ನಟಿಸಿದ್ದು, ಆಸ್ಟ್ರೇಲಿಯಾದಲ್ಲಿ ಚಿತ್ರೀಕರಣ ನಡೆದಿತ್ತು. ತೇಜಸ್ಸಿ ಸಿನಿಮಾ ನಿರ್ದೇಶಿಸಿದ್ದು, ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತವಿದೆ. ಹೆಚ್ ಸಿ ವೇಣು ಛಾಯಾಗ್ರಹಣ, ರಾಕೇಶ್ ಸಿಎ. ಚಿತ್ರಕ್ಕೆ ಸಂಭಾಷಣೆ ಬರೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next