Advertisement

ಇಲಿಯ ಬೋನನ್ನು ನೋಡಲು ಮರೆಯದಿರಿ

03:36 PM Apr 14, 2018 | |

ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ ಭಾರತೀಯ ಸಿನಿಮಾ ನಿರ್ದೇಶಕ ಅಡೂರ್‌ ಗೋಪಾಲಕೃಷ್ಣನ್‌ ಅವರ ಮಲಯಾಳಂ ಸಿನಿಮಾ “ಎಲಿಪಥಾಯಂ’ ಪ್ರದರ್ಶನ ನಗರದಲ್ಲಿ ಏರ್ಪಾಡಾಗಿದೆ. ಬ್ರಿಟಿಷ್‌ ಫಿಲಂ ಇನ್ಸ್‌ಟಿಟ್ಯೂಟ್‌, ಲಂಡನ್‌ ಫಿಲಂ ಫೆಸ್ಟಿವೆಲ್‌ ಇನ್ನೂ ಮುಂತಾದ ಅಂತಾರಾಷ್ಟ್ರೀಯ ಗೌರವಗಳಿಗೆ ಪಾತ್ರವಾದ ಈ ಸಿನಿಮಾ 1982ರಲ್ಲಿ ರಾಷ್ಟ್ರಪ್ರಶಸ್ತಿಗೂ ಪಾತ್ರವಾಗಿತ್ತು. ಜೀವನ ಪರ್ಯಂತ ಇಲಿ ಎಂದರೆ ಹೆದರುವ ಪುಕ್ಕೆಲ ಸ್ವಭಾವದ ಕಥಾನಾಯಕ ತನ್ನ ಜೀವನ ನಿರ್ವಹಣೆಗೆ ಸಹೋದರಿಯರನ್ನೇ ಅವಲಂಬಿಸಿದಾತ. ಈ ಕಾರಣಕ್ಕೆ ಮದುವೆಯಾಗದ ತಂಗಿಗೆ ವಯಸ್ಸಾಗುತ್ತಿದ್ದರೂ ಗಂಡು ನೋಡುವ ಗೊಡವೆಗೆ ಹೋಗಿಲ್ಲ. ಮದುವೆಯಾಗಿ ಗಂಡನ ಮನೆಗೆ ಹೋಗಿಬಿಟ್ಟರೆ ತನ್ನನ್ನು ನೋಡಿಕೊಳ್ಳುವವರಾರು ಎನ್ನುವ ಸ್ವಾರ್ಥ. ಆದರೆ ದೈವ ಬೇರೆಯದನ್ನೇ ಬಗೆಯುತ್ತದೆ. ಅತ್ಯುತ್ತಮ ಚೌಕಟ್ಟನ್ನು ಹೊಂದಿರುವ ಈ ಸಿನಿಮಾ ಅಡೂರರ ಕಲೆಗಾರಿಕೆಗೆ ಸಾಕ್ಷಿ. ಅಂದ ಹಾಗೆ “ಎಲಿಪಥಾಯಂ’ ಎಂದರೆ ಇಲಿ ಹಿಡಿಯುವ ಬೋನು ಎಂದರ್ಥ. ಕಾಟ ಕೊಡುತ್ತಿರುವ ಇಲಿಗಳನ್ನು ಬೋನಿನಲ್ಲಿ ಹಿಡಿಯಲು ಹೋಗುವುದರಿಂದ ಶುರುವಾಗಿ ನಾಯಕ ಬದುಕಿನ ಪಂಜರದೊಳಗೆ ತಾನೇ ಇಲಿಯಾಗಿ ಸೆರೆಸಿಕ್ಕಿಬೀಳುವುದು ಈ ಸಿನಿಮಾ ಕತೆ. 

Advertisement

ಎಲ್ಲಿ?: ಕೆ. ವಿ. ಸುಬ್ಬಣ್ಣ ಆಪ್ತ ರಂಗಮಂದಿರ, ಕುಮಾರಸ್ವಾಮಿ ಲೇಔಟ್‌ 
ಯಾವಾಗ?: ಏಪ್ರಿಲ್‌ 15, ಸಂಜೆ 5.30

Advertisement

Udayavani is now on Telegram. Click here to join our channel and stay updated with the latest news.

Next