ಕೋಲಾರ: ವಿದ್ಯಾರ್ಥಿಗಳಿಗೆ ಪರೀಕ್ಷೆಗಳ ಬಗ್ಗೆ ಭಯ ಇರುವುದು ಸಹಜ. ಅವರಿಗೆ ಪರೀಕ್ಷೆ ಬಗ್ಗೆ ಸೂಕ್ತ ಸಲಹೆ ಹಾಗೂ ಮಾರ್ಗದರ್ಶನ ನೀಡಿ ಅರಿವು ಮೂಡಿಸಬೇಕೆಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್ ತಿಳಿಸಿದರು.
ಅಧಿಕಾರಿಗಳಿಗೆ ಸಲಹೆ: ಜಿಲ್ಲಾಧಿಕಾರಿಗಳ ಕಚೇರಿ ನ್ಯಾಯಾಂಗ ಸಭಾಂಗಣದಲ್ಲಿ ನಡೆದ ಯುವ ಸ್ಪಂದನ ಸಭೆಯಲ್ಲಿ ಮಾತನಾಡಿದರು. ಯುವಕರು ವಿವಿಧ ಕಾರಣಗಳಿಗಾಗಿ ತಮ್ಮ ಜೀವನದಲ್ಲಿ ಕೆಲ ವೊಮ್ಮೆ ಆತ್ಮಹತ್ಯೆ ಪ್ರಯತ್ನಕ್ಕೆ ಒಳಪಡು ವುದುಂಟು. ಇದರ ಬಗ್ಗೆ ಅರಿವು ಮೂಡಿಸಿ ಆತ್ಮಹತ್ಯೆ ಪ್ರಯತ್ನ ತಡೆಗಟ್ಟಲು ಸೂಕ್ತ ಸಲಹೆ ನೀಡಲು ಯುವ ಸ್ಪಂದನ ಅಧಿಕಾರಿಗಳಿಗೆ ಸೂಚಿಸಿದರು.
ನಗರ ಶಾಲೆಗಳಲ್ಲಿ ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಹಾಜರಾತಿ ಕಡಿಮೆ ಇದ್ದು, ಅಂತಹ ಶಾಲೆಗಳಿಗೆ ಖುದ್ದು ಭೇಟಿ ನೀಡಿ ಶಿಕ್ಷಣದ ಅರಿವು ಮೂಡಿಸಬೇಕು. ಎಸ್‌ಎಸ್‌ಎಲ್‌ಸಿಯಲ್ಲಿ ಉತ್ತಮ ಫಲಿತಾಂಶ ಪಡೆಯಲು ಸೂಕ್ತ ಮಾರ್ಗದರ್ಶನ ನೀಡಬೇಕು ಎಂದು ಹೇಳಿದರು.
ನಿಮ್ಹಾನ್ಸ್‌ನ ಪ್ರಧಾನ ಸಂಶೋಧಕ ಡಾ.ಪ್ರದೀಪ್, ದೈಹಿಕ ಆರೋಗ್ಯ, ಮಾನಸಿಕ ಆರೋಗ್ಯ, ಆಧ್ಯಾತ್ಮಿಕ ಆರೋಗ್ಯ, ಸಕಾರಾತ್ಮಕ ಚಿಂತನೆ, ವ್ಯಸನಿಗಳ ನಿರ್ವಹಿಸುವಿಕೆ, ಜೊತೆಗೆ ಶಿಕ್ಷಣ, ವ್ಯಕ್ತಿತ್ವ ಬೆಳವಣಿಗೆ, ಯುವಕರಿಗೆ ಸ್ವ ಅರಿವು, ಭಾವನೆ ನಿರ್ವಹಣೆ ಮತ್ತಿತರ ಬಗ್ಗೆ ತರಬೇತಿ ನೀಡಲಾಗುತ್ತದೆ. ಪಿಯುಸಿ ಮುಗಿದ ವಿದ್ಯಾರ್ಥಿಗಳಿಗೆ ಮುಂದಿನ ಶಿಕ್ಷಣಕ್ಕಾಗಿ ಸೂಕ್ತ ಸಲಹೆ-ಮಾರ್ಗದರ್ಶನ ನೀಡುತ್ತೇವೆಂದರು.
ಕ್ಷೇತ್ರ ಸಂಪರ್ಕಾಧಿಕಾರಿ ನಾಗರಾಜ್, ದೇಶದಲ್ಲೇ ಯುವಜನರಿಗಾಗಿ ಅನುಷ್ಠಾನಗೊಂಡ ಮೊಟ್ಟ ಮೊದಲ ಕಾರ್ಯಕ್ರಮವಾಗಿದ್ದು ರಾಜ್ಯದ 30 ಜಿಲ್ಲೆಗಳಲ್ಲಿ ಅನುಷ್ಠಾನಗೊಳಿಸಲಾಗಿದೆ ಎಂದು ತಿಳಿಸಿದರು. ಈ ಸಭೆಯಲ್ಲಿ ಯುವ ಸಬಲೀ ಕರಣ ಮತ್ತು ಕ್ರೀಡಾ ಇಲಾಖೆ ಸಹಾ ಯಕ ನಿರ್ದೇಶಕಿ ಗೀತಾ, ಮನೋ ವೈದ್ಯಾಧಿಕಾರಿ ಡಾ.ಪಾವನಿ, ಡಾ.ಜಗ ದೀಶ್, ದೈಹಿಕ ಶಿಕ್ಷಣಾಧಿಕಾರಿ ಮಂಜು ನಾಥ್ ಮತ್ತಿತರರು ಉಪಸ್ಥಿತರಿದ್ದರು.