Advertisement
2017 ಡಿಸೆಂಬರ್ 31 ರಂದು ಪುಣೆಯ ಎಲ್ಗರ್ ಸಮಾವೇಶ ನಡೆದ ಭೀಮಾ ಕೊರೆಗಾಂವ್ ಹಿಂಸಾಚಾರಕ್ಕೆ ಸಂಬಂಧಿಸಿದಂತೆ 82 ವರ್ಷದ ವರವರ ರಾವ್ ಆರೋಪಿ ಆಗಿದ್ದರು. ವಿಚಾರಣೆಗಾಗಿ ಕಾಯುತ್ತಿದ್ದ ಅವರು ಆಗಸ್ಟ್ 28, 2018 ರಿಂದ ಬಂಧನದಲ್ಲಿದ್ದರು.
Related Articles
Advertisement
ರಾವ್ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಿದ ನಂತರ ತಕ್ಷಣ ಜಾಮೀನಿನ ಮೇಲೆ ಬಿಡುಗಡೆ ಮಾಡಬೇಕು ಎಂದು ನ್ಯಾಯಮೂರ್ತಿಗಳಾದ ಎಸ್ ಎಸ್ ಶಿಂಧೆ ಮತ್ತು ಮನೀಶ್ ಪಿಟಾಲೆ ಅವರ ನ್ಯಾಯಪೀಠ ನಿರ್ದೇಶಿಸಿತ್ತು.
ವರವರ ರಾವ್ ಅವರಿಗೆ ಮೆಡಿಕಲ್ ಜಾಮೀನು ನೀಡದಿದ್ದರೇ, ಮಾನವನ ಮೂಲಭೂತ ಹಕ್ಕುಗಳಾದ ಜೀವನ ಹಾಗೂ ಆರೋಗ್ಯ ರಕ್ಷಣೆ ನೀಡುವುದನ್ನು ಉಲ್ಲಂಘನೆ ಮಾಡಿದಂತಾಗುತ್ತದೆ ಎಂದು ಬಾಂಬೆ ಹೈಕೋರ್ಟ್ ಪ್ರತಿಪಾದಿಸಿದೆ.
ಓದಿ: ಪುದುಚೇರಿ ಅಧಿಕಾರ ಕಳೆದುಕೊಂಡ ಕಾಂಗ್ರೆಸ್, ಸಿಎಂ ನಾರಾಯಣಸ್ವಾಮಿ ರಾಜೀನಾಮೆ
ನ್ಯಾಯಾಲವು ಜಾಮೀನನ್ನು ಅನುಮತಿಸುವಾಗ, ಎನ್ ಐ ಎ ನ್ಯಾಯಾಲಯದ ವ್ಯಾಪ್ತಿಯಲ್ಲಿ ಕೆಲವು ಷರತ್ತುಗಳನ್ನು ವಿಧಿಸಿದೆ. ರಾವ್ ತಮ್ಮ ಪಾಸ್ ಪೋರ್ಟ್ ನ್ನು ಎನ್ ಐ ಎ ನ್ಯಾಯಾಲಕ್ಕೆ ಸಲ್ಲಿಸಬೇಕು ಹಾಗೂ ಭೀಮಾ ಕೊರೆಗಾಂವ್ ಪರಕರಣದ ಯಾವುದೇ ಆರೋಪಿಗಳನ್ನು ಸಂಪರ್ಕಿಸುವಂತಿಲ್ಲ ಎಂದು ಹೇಳಿದೆ.
ವರವರ ರಾವ್ 50,000 ರೂ ಮೊತ್ತದ ವೈಯಕ್ತಿಕ ಬಾಂಡ್ ನ್ನು ಸಲ್ಲಿಸಬೇಕು ಹಾಗೂ ಅಷ್ಟೇ ಮೊತ್ತದ ಎರಡು ಜಾಮೀನುಗಳನ್ನು ಸಲ್ಲಿಸಬೇಕಾಗಿದೆ.
ಓದಿ: ತೆಂಕಣದ ಗಾಳಿ ಬೀಸಿದ ಸಾಹಿತ್ಯ ಶ್ರೇಷ್ಠ ಪಂಜೆ ಮಂಗೇಶರಾಯ…!