Advertisement

ಹುಣಸೂರು:  ಗುರುಪುರ ಸುತ್ತಮುತ್ತಲ ಗ್ರಾಮಗಳಲ್ಲಿ ಆನೆಗಳ ಹಾವಳಿ

03:03 PM Oct 04, 2021 | Team Udayavani |

ಹುಣಸೂರು: ನಾಗರಹೊಳೆ ಉದ್ಯಾನವದ ಸೊಳ್ಳೆಪುರ ಅರಣ್ಯ ಪ್ರದೇಶದಿಂದ ಮೇವನ್ನರಸಿ ಹೊರ ಬಂದ ಜೋಡಿ ಸಲಗ ಮುಂಜಾನೆಯಾದರೂ ಕಾಡಿಗೆ ಮರಳಲಾಗದೇ ಹುಣಸೂರು-ಎಚ್.ಡಿ.ಕೋಟೆ ಮುಖ್ಯ ರಸ್ತೆಯಲ್ಲೇ ಅಡ್ಡಾಡಿ, ಗ್ರಾಮಸ್ಥರಿಂದ ಅಟ್ಟಾಡಿಸಿಕೊಂಡು ಕೊನೆಗೂ ಕಾಡು ಸೇರಿಕೊಂಡೆವು.

Advertisement

ವೀರನಹೊಸಳ್ಳಿ ವನ್ಯಜೀವಿ ವಲಯದ ಸೊಳ್ಳೆಪುರ ಅರಣ್ಯ ಪ್ರದೇಶದಿಂದ ಹೊರ ಬಂದ ಜೋಡಿ ಸಲಗಗಳು ಕಾಡಂಚಿನ ಗ್ರಾಮಗಳಾದ ಗುರುಪುರ, ರಾಜೇಗೌಡನಹುಂಡಿ, ಅಣ್ಣೂರು, ಭೀಮನಹಳ್ಳಿ ಗ್ರಾಮಗಳ ರೈತರ ಜಮೀನುಗಳಿಗೆ ಲಗ್ಗೆ ಇಟ್ಟು ಬಾಳೆ, ಶುಂಠಿ, ಮುಸುಕಿನ ಜೋಳ ಸೇರಿದಂತೆ ಇತರೆ ಬೆಳೆಗಳನ್ನು ತಿಂದು ತುಳಿದು ನಾಶಪಡಿದ್ದು, ರಾತ್ರಿಯೇ ಕಾಡಿಗೆ ಸೇರಿ ಕೊಳ್ಳುವಲ್ಲಿ ವಿಫಲವಾಗಿ, ರಸ್ತೆ ಬದಿಯ ಜಮೀನಿನಲ್ಲಿ ಹಾಗೂ ರಸ್ತೆಯಲ್ಲೇ ಅಡ್ಡಾಡುತ್ತಿದ್ದದನ್ನು ಕಂಡ ಅಕ್ಕ-ಪಕ್ಕದ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿ ನಂತರ ಸಲಗಗಳನ್ನು ದನಗಳನ್ನ ಅಟ್ಟಾಡಿಸುವ ರೀತಿ ಅಟ್ಟಾಡಿಸಿದರು. ನಂತರ ಅರಣ್ಯ ಸಿಬ್ಬಂದಿಗಳ ನೆರವಿನೊಂದಿಗೆ ಓಡಿಸಿಕೊಂಡು ಬೆಳಿಗ್ಗೆ 8.30ರ ವೇಳೆಗೆ ಕಾಡು ಸೇರಿಸುವಲ್ಲಿ ಯಶಸ್ವಿಯಾದರು.

ಈ ಬಗ್ಗೆ ಆರ್‌ಎಫ್‌ಓ ನಮನ್ ನಾರಾಯಣ್ ನಾಯಕ ಆನೆಗಳು ಹೊರ ದಾಟಿರುವ ಬಗ್ಗೆ ಬೆಳಿಗ್ಗೆ 6.30ಕ್ಕೆ ಮಾಹಿತಿ ಬಂತು. ಸಿಬ್ಬಂದಿಗಳು ಕೂಡಲೇ ಸ್ಥಳಕ್ಕೆ ತೆರಳಿ ಗ್ರಾಮಸ್ಥರೊಂದಿಗೆ ಸೇರಿ ಉದ್ಯಾನ ಸೇರಿಸಿದ್ದಾರೆಂದು ಪತ್ರಿಕೆಗೆ ತಿಳಿಸಿದರು.

 

Advertisement

Udayavani is now on Telegram. Click here to join our channel and stay updated with the latest news.

Next