Advertisement

ಆನೆಗಳು ಯಶಸ್ವಿಯಾಗಿ ಜವಾಬ್ದಾರಿ ನಿರ್ವಹಿಸಿವೆ

01:11 PM Oct 18, 2021 | Team Udayavani |

ಮೈಸೂರು: ಈ ಬಾರಿಯ ದಸರಾ ಮಹೋತ್ಸವ ಯಶ ಸ್ವಿಯಾಗಿ ನೆರವೇರಿದ್ದು, ಆನೆಗಳು ತಮಗೆ ವಹಿಸಿದ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾ ಯಿಸಿವೆ ಎಂದು ಡಿಸಿಎಫ್ ಡಾ.ವಿ.ಕರಿಕಾಳನ್‌ ಹೇಳಿದರು.

Advertisement

ಅರಮನೆ ಆವರಣದಲ್ಲಿ ಭಾನುವಾರ ನಡೆದ ಗಜಪಡೆ ಬೀಳ್ಕೊಡುಗೆ ಸಮಾರಂಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲಾ ಆನೆಗಳು ಉತ್ತಮವಾಗಿ ತಮ್ಮ ಜವಾಬ್ದಾರಿ ನಿರ್ವಹಿಸಿವೆ. ಮಾವುತರು, ಕಾವಾಡಿಗಳಿಗೆ ಅರಮನೆ ಮಂಡಳಿ ವತಿ ಯಿಂದ ತಲಾ 10 ಸಾವಿರ ರೂ. ಗೌರವ ಧನ ನೀಡಲಾಗಿದೆ.

ಈ ಬಾರಿ 3 ಆನೆ ಶಿಬಿರಗಳಿಂದ ಒಟ್ಟು 8 ಆನೆ ಮೈಸೂರಿಗೆ ಬಂದಿದ್ದವು. ವಿಕ್ರಮ ಮತ್ತು ಲಕ್ಷ್ಮೀ ಆನೆ ಹೊರತು ಪಡಿಸಿ ಉಳಿದ 6 ಆನೆ ಜಂಬೂ ಸವಾರಿ ಮೆರವಣಿಗೆಯಲ್ಲಿ ಭಾಗಿಯಾಗಿವೆ ಎಂದರು. ಮೊದಲ ಬಾರಿ ಆಗಮಿಸಿದ್ದ ಅಶ್ವತ್ಥಾಮ ಭರವಸೆ ಮೂಡಿಸಿದ್ದಾನೆ.

ಅಭಿಮನ್ಯು ಸತತ 2ನೇ ಬಾರಿ ಚಿನ್ನದ ಅಂಬಾರಿ ಹೊತ್ತು ಸಾಗುವ ಮೂಲಕ ಸೈ ಎನಿಸಿಕೊಂಡಿದ್ದಾನೆ. ಕೊರೊನಾ ಹಿನ್ನೆಲೆ ಸರಳ ದಸರಾ ಆಚರಣೆ ಆದರೂ ಜಂಬೂಸವಾರಿ ಮೆರ ವಣಿಗೆ ಅದ್ದೂರಿತನದಿಂದ ಕೂಡಿತ್ತು. ಮುಂದಿನ ಬಾರಿ ಯಾವುದೇ ಅಡತಡೆ ಇಲ್ಲದೇ ಅದ್ದೂರಿ ಯಾಗಿ ದಸರಾ ನಡೆಯುವಂತಾಗಲಿ ಎಂದು ಹೇಳಿದರು.

ಇದನ್ನೂ ಓದಿ;- ಗೊಂಡ ಸಂಘರ್ಷ ಸಮಿತಿಯಿಂದ ಪ್ರತಿಭಟನೆ

Advertisement

ಅಭಿಮನ್ಯು ಆನೆ ಮಾವುತ ವಸಂತ ಮಾತನಾಡಿ, ಮೈಸೂರು ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುವುದೇ ಅದೃಷ್ಟವಾಗಿದೆ. ಅಭಿಮನ್ಯು ನನಗೆ ಸಿಕ್ಕಿರುವುದು, ನಾನು ಅಭಿಮನ್ಯುವಿಗೆ ಸಿಕ್ಕಿರುವುದು ಪುಣ್ಯ. ದಸರಾ ಮಹೋತ್ಸವದಲ್ಲಿ ಸತತ 2ನೇ ಬಾರಿ ಅಭಿಮನ್ಯುವನ್ನು ಮುನ್ನಡೆಸಿರುವುದು ನನ್ನ ಭಾಗ್ಯ ಎಂದು ಭಾವಿಸುತ್ತೇನೆ. ಇದಕ್ಕೆ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು, ತನ್ನ ಜತೆ ಇರುವ ಕಾವಾಡಿಗಳು ಮತ್ತು ಮಾವುತರು ಕಾರಣರಾಗಿದ್ದಾರೆ ಎಂದು ಹೇಳಿದರು. ಮೈಸೂರು ದಸರಾ ನಿರ್ವಿಘ್ನವಾಗಿ ನಡೆದಿದೆ ತಾಯಿ ಚಾಮುಂಡೇಶ್ವರಿ ದಯೆಯಿಂದ ಈ ಬಾರಿಯ ದಸರಾ ನಿರ್ವಿಘ್ನವಾಗಿ ನೆರವೇರಿದೆ.

ಜಂಬೂಸವಾರಿ ಮೆರವಣಿಗೆಯಲ್ಲಿ ಭಾಗಿಯಾದ ಗಜಪಡೆಗೆ ಸಂಪ್ರದಾಯಬದ್ಧವಾಗಿ ಪೂಜೆ ಸಲ್ಲಿಸಿ ಬೀಳ್ಕೊಡಲಾಗಿದೆ. ಆನೆಗಳು ಯಾವುದೇ ತೊಂದರೆ ಇಲ್ಲದೇ ಸ್ವಸ್ಥಾನ ಸೇರುವಂತೆ ಪ್ರಾರ್ಥಿಸಲಾಗಿದೆ. ಮುಂದಿನ ದಸರಾ ವೇಳೆಗೆಕೊರೊನಾ ಸಂಪೂರ್ಣವಾಗಿ ತೊಲಗಿ ವೈಭವದಿಂದ ದಸರಾ ನಡೆಯುವಂತಾಗಲಿ ಎಂದು ದೇವರನ್ನು ಬೇಡಿಕೊಳ್ಳಲಾಗಿದೆ ಎಂದು ಅರ್ಚಕ ಪ್ರಹ್ಲಾದ್‌ ರಾವ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next