Advertisement

ಎಲಿಫೆಂಟಾ ಕೇವ್ಸ್‌ನ  ಶಿಲೆಶಿಲೆಗಳಲಿ ಸಂಗೀತದಲೆ 

06:25 AM Dec 31, 2017 | Team Udayavani |

ಮುಂಬೈಗೆ ಬಂದ ಮೇಲೆ ಆಚೆಗೂ ಈಚೆಗೂ ಕಡಲೇ. ಸೆಂಟ್ರಲ್‌ ಕಡೆಯಿಂದ ಕೊನೆಯ ಸ್ಟೇಷನ್‌ ವೀಟಿಯ ಸಮೀಪವಿರುವ ಇಂಡಿಯಾ ಗೇಟ್‌ನ ಬಳಿ ಒಂದಷ್ಟು ಹೊತ್ತು ಕೂತು, ಅÇÉೇ ಎದುರಿಗಿರುವ ತಾಜ್‌ಮಹಲ್‌ ನಮ್ಮವರಿಗೆ ತಂದಿಡುವ ನವಿರು ಭಾವಗಳನ್ನು ಹೃನ್ಮನಗಳಲ್ಲಿ ಹರಿಯಗೊಟ್ಟು, ನೂರುವರ್ಣದ ಕನಸುಗಳಿಗೆ ರೆಕ್ಕೆ ಕಟ್ಟಿ ಹಾರಿಬಿಡುವ ಸು-ಮನಸಿಗರಲ್ಲಿ ನಾನೂ ಒಬ್ಬಳು. ಪ್ರತಿ ಬಾರಿ ಹೋದಾಗಲೂ ಅಲ್ಲಿ ಕೆಲವರು ಕೈಯಲ್ಲಿ ಟಿಕೇಟ್‌ ಹಿಡಿದು ಎಲಿಫೆಂಟಾ ಕೇವ್ಸ್‌  ದೇಡ್‌ ಸೌ ರೂಪ್ಯಾ ರಿಟರ್ನ್ ಟಿಕೆಟ್‌ ಅಂತ ಬೊಬ್ಬಿಡುವಾಗ, ಈ ಅಗಾಧ ಕಡಲಾಚೆಗೆ ಸಂಜೆಯೊಳಗೆ ಹೋಗಿ ಬರುವಂತಹ ಊರಿದೆಯೇ? ಆ ಊರು ಹೇಗಿರಬಹುದು? ಒಮ್ಮೆ ನೋಡಬೇಕೆಂಬ ನನ್ನಾಸೆ ಈಡೇರಲು 16 ವರುಷಗಳೇ ಬೇಕಾಯ್ತು. ಅದಕ್ಕೆ ಸಮಯ ಕೂಡಿ ಬಂದು, ನನ್ನ ತಂಗಿ, ಅವಳ ಮಗಳು, ಸೋದರ ಮಾವನ ಪರಿವಾರದೊಂದಿಗೆ ಹೊರಟೆವು.

Advertisement

ವೀಟಿ ತಲುಪಿ, ಎಲಿಫೆಂಟಾ ಕೇವ್ಸ್‌ಗೆ ಹೊರಟು ನಿಂತ ಹಾಯಿಯನ್ನೇರಿದೆವು. ಉದರ್‌ ಸಬ್‌ ಜಗಾ ಗೂಮೆR ಪಾಂಚ್‌ ಬಜೆ ಕೆ ಅಂದರ್‌ ವಾಪಸ್‌ ಬೋಟ್‌ ಪೆ ಆಕರ್‌ ಬೈಟೆ° ಕಾ ಎಂದು ಇಲ್ಲಿ ಟಿಕೆಟ್‌ ಕೊಡುವಾಗಲೇ ಹೇಳುತ್ತಾರೆ. ಸಮುದ್ರದ ಮೇಲೆ ಸುಮಾರು ಒಂದು ಗಂಟೆಗಳ ಪ್ರಯಾಣ. ಬೀಸುವ ಗಾಳಿಯ ದಿಕ್ಕಿಗೆ ಎದುರಾಗಿ ಚಲಿಸುವ ಹಾಯಿಯೊಳಗೆ ಮೈಯೊಡ್ಡಿ ನಿಂತಾಗ ಎಷ್ಟೊಂದು ಹಿತ. ಸಮುದ್ರದÇÉೇ ಪರ್ಮನೆಂಟಾಗಿ ಠಿಕಾಣಿ ಹೂಡಿದೆಯೋ ಎಂಬಂತೆ ಕಾಣುವ ಮೈಲುದ್ದದ ಶಿಪ್‌, ಮತ್ತೆ ಕೆಲವು ದೂರದಲ್ಲಿ ಬಿಲ್ಲುಬಾಣ ಹೂಡಿ ನಿಂತ ತೆರದಲಿರುವವುಗಳು. ನೀರಿನ ಮೇಲೆ ನಡೆಯುವ ಹಕ್ಕಿಗಳ ಸಮೂಹ ಕಂಡಾಗ, ಅಂತಿರದೆ ನಾವೇಕೆ ಇಷ್ಟೊಂದು ಭಾರವೆಂದಾಗ ಮನಸ್ಸು, “ಉಸಿರಿಲ್ಲದಿರೆ ನೀ ಹುಲ್ಲು ಕಡ್ಡಿಯಂತೆ ಹಗುರ’ ಎನ್ನುತ್ತಿತ್ತು. 

ಸÇÉಾಪದಲಿ ಒಂದು ಗಂಟೆ ಕಳೆದು, ಕುತೂಹಲದಿಂದ ಕಾಯುತ್ತಿದ್ದ ಕಡಲಾಚೆಯೂರಾದ ಎಲಿಫೆಂಟಾ ಕೇವ್ಸ್‌ ತಲುಪಿದೆವು. ಹಾಯಿಯನ್ನು ನಿಲ್ಲಿಸಿ, ಹಗ್ಗದಿಂದ ಕಂಬಕ್ಕೆ ಬಿಗಿಯಾಗಿ ಕಟ್ಟಿದ ಮೇಲೆ, ಒಬ್ಬೊಬ್ಬರಾಗಿ ಇಳಿದು ಮೆಟ್ಟಿಲೇರಿದೆವು. ಇನ್ನು ಕಣ್ಣಳತೆಗೆ ನಿಲುಕುವಷ್ಟೇ ದೂರ ನಡೆದರಾಯ್ತು. ಅದೂ ಕಷ್ಟವೆನಿಸಿದರೆ, ಅÇÉೇ ಕೌಂಟರ್‌ನಲ್ಲಿ ಒಬ್ಬೊಬ್ಬರಿಗೆ ಹತ್ತು ರೂಪಾಯಿಯಂತೆ ಟಿಕೆಟ್‌ ಪಡೆದು ಮಿನಿ ಟ್ರೆçನ್‌ನಲ್ಲಿ ಹೋಗುವ ವ್ಯವಸ್ಥೆಯೂ ಅಲ್ಲಿತ್ತು. ದಾರಿಯ ಇಕ್ಕೆಲಗಳಲ್ಲಿ ಜಾತ್ರೆಯಲ್ಲಿರುವಂತೆ ಸಂತೆ. ಸಮುದ್ರದಡಿಯಲ್ಲಿ ಸಿಗುವಂಥ ನಾನಾ ತೆರನಾದ ಮಿಣುಕು ಮಣಿಗಳು, ಹೊಳಪು ಕಲ್ಲುಗಳು, ಕರಕುಶಲಕಲೆಯ ವಸ್ತುಗಳು, ಬಣ್ಣ ಬಣ್ಣದ ಬಟ್ಟೆ ಚೀಲಗಳು ಇವೆಲ್ಲವುಗಳಿಗೆ ಕಣ್ಣು ಹಾಯಿಸುತ್ತ ಏರುಮುಖವಾಗಿ ನಡೆದು, ಭಾರತೀಯರಿಗೆ 10 ರೂಪಾಯಿ, ವಿದೇಶಿಯರಿಗೆ 250 ರೂಪಾಯಿ ಎಂದು ಬರೆದಿರುವ ಕೌಂಟರ್‌ನಲ್ಲಿ ಗುಹೆಯೊಳಗಿನ ಪ್ರವೇಶಕ್ಕೆ ಟಿಕೆಟ್‌ ಪಡೆದುಕೊಂಡೆವು. 

ಗುಹೆಯ ಇತಿಹಾಸ ಮತ್ತು ಹೆಸರಿನ ಹಿನ್ನೆಲೆ
ಇತಿಹಾಸದಲ್ಲಿ ಇದರ ಉÇÉೇಖ ಮೊದಲು ಬರುವುದು ಕನ್ನಡಿಗನಾದ ಇಮ್ಮಡಿ ಪುಲಕೇಶಿಯು (609 – 642) ಕೊಂಕಣದ ಮೌರ್ಯರನ್ನು  ಕ್ರಿಸ್ತಶಕ 635ರಲ್ಲಿ ನೌಕಾಯುದ್ಧದಲ್ಲಿ ಸೋಲಿಸಿದ ಕುರಿತಾದ ಶಾಸನದಲ್ಲಿರುವಂತೆ, ಆಗ ಎಲಿಫೆಂಟಾವು ಕೊಂಕಣ ಮೌರ್ಯರ ರಾಜಧಾನಿಯಾಗಿ ಪುರಿ ಅಥವಾ ಪುರಿಕಾ ಎಂದು ಕರೆಯಲ್ಪಡುತ್ತಿತ್ತು. ಕೊಂಕಣ ಮೌರ್ಯರೇ ಈ ಗುಹಾ ದೇವಾಲಯಗಳನ್ನು ನಿರ್ಮಿಸಿದರೆಂದು ಅಭಿಪ್ರಾಯವಿದೆ. ಆದರೆ ಅವರಲ್ಲಿ ಅಷ್ಟು ಅಧಿಕಾರ, ಶ್ರೀಮಂತಿಕೆ, ತಂತ್ರಜ್ಞಾನ ಮತ್ತು ಮಾನವ ಸಂಪನ್ಮೂಲ ಇರುವುದು ಸಾಧ್ಯವಿರಲಿಲ್ಲವೆಂಬ ಇನ್ನೊಂದು ಅಭಿಪ್ರಾಯವಿದೆ. ಈ ಮೌರ್ಯರ ಜತೆಗೆ ಸಂಬಂಧ ಹೊಂದಿದ್ದ ಕಲಚೂರ್ಯರು (ಕ್ರಿ.ಶ. 5 ಹಾಗೂ 6 ನೆಯ ಶತಮಾನ) ಕೂಡಾ ಇದನ್ನು ನಿರ್ಮಿಸಿರಬಹುದು. ಈ ಎರಡೂ ಅರಸು ಮನೆತನಗಳು ಪಾಶುಪತ ಶೈವ ಧರ್ಮವನ್ನು ಅನುಸರಿಸುತ್ತಿದ್ದವರು. ಈ ಗುಹಾದೇವಾಲಯವೂ ಪಾಶುಪತ ಶೈವ ಸಂಪ್ರದಾಯದ್ದು. ಕನ್ನಡಿಗರಾದ ಬಾದಾಮಿಯ ಚಾಲುಕ್ಯರು ಈ ಎರಡೂ ರಾಜಮನೆತನಗಳನ್ನು ಸೋಲಿಸಿದ್ದರು. ಅವರೇ ಮುಖ್ಯ ಗುಹಾದೇವಾಲಯವನ್ನು ನಿರ್ಮಿಸಿದರೆಂದು ಕೂಡ ಕೆಲವು ಇತಿಹಾಸಜ್ಞರು ಅಭಿಪ್ರಾಯಪಡುತ್ತಾರೆ.

ಮಹಾರಾಷ್ಟ್ರದಲ್ಲಿರುವ ಬಹುತೇಕ ಗುಹಾಂತರ್ಗತ ದೇವಾಲಯಗಳನ್ನು  ಕರ್ನಾಟಕದ ಚಾಲುಕ್ಯರು ಅಥವಾ ರಾಷ್ಟ್ರಕೂಟ ಅರಸರು ಮಾಡಿರುವದಕ್ಕೆ ಸಾಕಷ್ಟು ಪುರಾವೆಗಳಿವೆ. ಈ ಭೂಭಾಗ ಅಂದು ಕನ್ನಡ ನಾಡಿನ ಭಾಗವಾಗಿತ್ತು ಇಲ್ಲಿಯ ಜನರ ಭಾಷೆ ಕನ್ನಡವಾಗಿತ್ತು. ಮಹಾರಾಷ್ಟ್ರದಲ್ಲಿ ಸಿಕ್ಕ 80% ಶಿಲಾಶಾಸನಗಳು ಕನ್ನಡ ಭಾಷೆ ಮತ್ತು ಕನ್ನಡ ಲಿಪಿಯಲ್ಲಿವೆ.

Advertisement

ಮಹಾರಾಷ್ಟ ಕನ್ನಡಿಗರ ಊರಾಗಿತ್ತು ಅನ್ನುವುದಕ್ಕೆ ಹೆಮ್ಮೆಯೆನಿಸುತ್ತಿದೆ. ಈ ಗುಹೆ ಏಳನೇ ಶತಮಾನದ ಚಾಲುಕ್ಯ ಅರಸ ಪುಲಕೇಶಿಯ ಕಾಲ¨ªೆಂದು, ಭಾರತೀಯ ಪುರಾತತ್ವ ಇಲಾಖೆಯ ನಾಮಫ‌ಲಕ ಇಲ್ಲಿದೆ. ಕೆಲವರು 9-13ನೇ ಶತಮಾನದ ಶಿಲಾಹಾರ ಕಾಲ¨ªೆಂದು ಹೇಳಿದರೆ, ಇನ್ನು ಕೆಲವರು ಮಾನ್ಯಕೇಟ ರಾಷ್ಟ್ರಕೂಟರ ಕಾಲ¨ªೆಂದು ಹೇಳುತ್ತಾರೆ. ಎಲಿಫೆಂಟಾ ಗುಹೆಯ ಮರಾಠಿ ಹೆಸರು ಘಾರಾಪುರಿ ಅಂದರೆ ಬೆಟ್ಟದಮೇಲಿನ ನಗರವೆಂಬುದು ಇದರ ಅರ್ಥ.

ಪುರಾಣಗಳಲ್ಲಿ ಇದನ್ನು ಧರ್ಮಪುರಿ ಎನ್ನಲಾಗಿದೆ. ಮುಂದೆ ಎಲಿಫೆಂಟಾ ದ್ವೀಪವನ್ನು ಮತ್ತೂಂದು ಚಾಲುಕ್ಯ ವಂಶದವರು ಆಳತೊಡಗಿದರು. ಅದರ ನಂತರ ಗುಜರಾತಿನ ಸುಲ್ತಾನರು ವಶಪಡಿಸಿಕೊಂಡರು. 1534 ರಲ್ಲಿ ಅದನ್ನು ಪೋರ್ಚುಗೀಸರು ವಶಪಡಿಸಿಕೊಂಡು ಆಳತೊಡಗಿದರು. ಆ ಗುಹೆಯ ದಾರಿಯ ಇಕ್ಕೆಲಗಳಲ್ಲಿ ಎರಡು ಆನೆಗಳ ಬೃಹತ್‌ ಶಿಲಾ ಪ್ರತಿಮೆಗಳಿದ್ದ ಕಾರಣ ಪೋರ್ಚುಗೀಸರು ಎಲಿಫೆಂಟಾ ಕೇವ್ಸ್‌ ಎಂದು ಕರೆದರು. ಬ್ರಿಟಿಷರ ಕಾಲದಲ್ಲಿಯೇ ಈ ಎರಡು ಪ್ರತಿಮೆಗಳನ್ನು ಅಲ್ಲಿಂದ ತಂದು, ಮುಂಬಯಿಯ ಜೀಜಾಬಾಯಿ ಉದ್ಯಾನವನದ ಎದುರುಗಡೆ ಇರಿಸಲಾಗಿದೆ. ಈಗ ಅದು ಸೊಂಡಿಲು ಮುರಿದ ಸ್ಥಿತಿಯಲ್ಲಿ ಇದೆ.

1661ರಲ್ಲಿ ಪೋರ್ಚುಗೀಸ್‌ ರಾಜಕುಮಾರಿಯನ್ನು ಇಂಗ್ಲೆಂಡಿನ ರಾಜಕುಮಾರನೊಡನೆ ಮದುವೆಯಾದ ಸಂದರ್ಭದಲ್ಲಿ ಪೋರ್ಚುಗೀಸರು ಎಲಿಫೆಂಟಾ ಗುಹೆಯನ್ನು ಇಂಗ್ಲಿಷರಿಗೆ ಉಡುಗೊರೆಯಾಗಿ ನೀಡಿದರಂತೆ. 1970ರಲ್ಲಿ ಇದನ್ನು ನವೀಕರಿಸಲಾಯಿತು. 1987ರಲ್ಲಿ ಎಲಿಫೆಂಟಾ ಗುಹೆಗಳು ವಿಶ್ವಸಂಸ್ಥೆಯ ಯುನೆಸ್ಕೋ ಪ್ರಾಚೀನ ಅವಶೇಷಗಳ ಪಟ್ಟಿಗೆ ಸೇರಿದವು.

– ಅನಿತಾ ಪಿ. ತಾಕೊಡೆ

Advertisement

Udayavani is now on Telegram. Click here to join our channel and stay updated with the latest news.

Next