ಹುಣಸೂರು: ಗುರುಪುರ ಟಿಬೇಟ್ ಕ್ಯಾಂಪಿನಲ್ಲಿ ದಾಂಧಲೆ ನಡೆಸಿ. ಕಲ್ಲೇಟಿಗೆ ಹೆದರಿ ಅರಣ್ಯ ಸೇರಿಕೊಂಡಿದ್ದ ಸಲಗವು ಗುರುಪುರ ಪಕ್ಕದ ಭಾರತ ವಾಡಿ ಗ್ರಾಮದಲ್ಲಿ ಶನಿವಾರ ಬೆಳಿಗ್ಗೆ ಸಲಗವು ಸಾಕಷ್ಟು ದಾಂಧಲೆ ನಡೆಸಿದೆ.
ಶನಿವಾರ ಮುಂಜಾನೆ ಆರು ಗಂಟೆಗೆ ಸಮಯದಲ್ಲಿ ಭಾರತವಾಡಿಯ ಗಿರೀಶ್ ಎಂಬುವರ ತೋಟಕ್ಕೆ ನುಗ್ಗಿ ದಾಂಧಲೆ ನಡೆಸಿತ್ತಲ್ಲದೆ. ನಂತರ ಶಶಿಕಲಾ ರಾಮಣ್ಣ ಎಂಬವರ ಜಮೀನಿನಲ್ಲಿ ಶುಂಠಿ .ಕುಂಬಳ ಬೆಳೆಗಳನ್ನು ತಿಂದು, ತುಳಿದು ನಾಶಪಡಿಸಿದೆ.
ಮಳೆ ಕಡಿಮೆಯಾಗುತ್ತಿದ್ದಂತೆ ಮನೆಗಳಿಂದ ಅಲ್ಲದೆ ಅರಣ್ಯದಂಚಿನ ವೀರನಹೊಸಳ್ಳಿ ಗ್ರಾಮದಲ್ಲಿ ಚೌಡಮ್ಮ ಎಂಬುವರ ಕೊಟ್ಟಿಗೆಯನ್ನು ಮತ್ತು ಮನೆಯ ಮುಂಬಾಗದ ವಸಾರಿನ ಹೆಂಚುಗಳನ್ನು ಕೆಡವಿ ಹಾಕಿದೆ ಕೊಟ್ಟಿಗೆಯನ್ನು ಕೆಡವಿದ ವೇಳೆ ಕೊಟ್ಟಿಗೆಯಲ್ಲಿ ಕಟ್ಟಿದ ಹಸುವಿಗೆ ಗಾಯಗಳಾಗಿದ್ದು .
ಆನಂತರ ಕಾಡಿಗೆ ಮರಳಲು ಅರಣ್ಯ ಇಲಾಖೆ ಸಿಬ್ಬಂದಿಗಳ ವಸತಿಗೃಹದತ್ತ ನುಗ್ಗಿರುವ ಸಲಗವು ಕಾಂಪೌಂಡ್ ಮತ್ತು ವಸತಿಗೃಹದ ಮೇಲ್ಚಾವಣಿಯನ್ನು ಬೀಳಿಸಿದೆ.
ವಿಷಯ ತಿಳಿದು ಹೆಚ್ಚಿನ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ ಸಲಗವನ್ನು ವೀರನಹೊಸಳ್ಳಿ ಮುಖ್ಯದ್ವಾರದ ಮೂಲಕ ಕಾಡಿಗೆ ಗಟ್ಟಲಾಯಿತು.
ಕಾರ್ಯಾಚರಣೆಯಲ್ಲಿ ವೀರನಹೊಸಹಳ್ಳಿ ಸುತ್ತಮುತ್ತಲ ಗ್ರಾಮಸ್ಥರು ಮತ್ತು ವೀರನಹೊಸಳ್ಳಿ ವಲಯ ಅರಣ್ಯಾಧಿಕಾರಿಗಳಾದ ಚಂದ್ರೇಶ್. ದ್ವಾರಕನಾಥ್ ಹಾಗೂ ಅರಣ್ಯ ಸಿಬ್ಬಂದಿಗಳು ಕಾರ್ಯಚರಣೆಯಲ್ಲಿ ಭಾಗವಹಿಸಿದ್ದರು.