Advertisement

ಆಗುಂಬೆಯಲ್ಲಿ ಮುಗಿಯದ ಕಾಡಾನೆ ಕಾಟ!

08:07 PM Jun 13, 2022 | Team Udayavani |

ತೀರ್ಥಹಳ್ಳಿ : ತಾಲೂಕಿನ ಆಗುಂಬೆಯಲ್ಲಿ ಕಾಡಾನೆಯೊಂದರ ಕಾಟ ಆರಂಭವಾಗಿ ಸರಿ ಸುಮಾರು ವರ್ಷಗಳೇ ಕಳೆಯುತ್ತ ಬಂದಿದೆ.  ಕಾಡಾನೆ ಇದೀಗ ವಾಟೆಹಳ್ಳದ ಸಮೀಪ ಪ್ರತ್ಯಕ್ಷವಾಗಿದ್ದು ಜನರಲ್ಲಿ ಆತಂಕ ಮನೆ ಮಾಡಿದೆ.

Advertisement

2018 ರಲ್ಲಿ ನಡು ರಸ್ತೆಯಲ್ಲಿಯೇ ಕಾಡಾನೆ ಓಡಾಡಿದ್ದ ದೃಶ್ಯವನ್ನು ವಾಹನ ಸವಾರರು ಸೆರೆಹಿಡಿದಿದ್ದರು. ನಂತರದಲ್ಲಿ ಕಾಡಾನೆಯು ಕಂಡರೂ ಊರಿನ ಸಮೀಪದವರೆಗೆ ಯಾವಾಗಲು ಬಂದಿರಲಿಲ್ಲ. ಇದೀಗ ಊರಿನ ಸಮೀಪದಲ್ಲಿಯೇ ಕಾಣಿಸಿಕೊಂಡಿರುವುದು ಜನರಲ್ಲಿ ಇನ್ನಷ್ಟು ಆತಂಕಕ್ಕೆ ಕಾರಣವಾಗಿದೆ.

ದೈವದ ಹರಕೆ ತೀರಿಸುವ ಪದ್ದತಿ ಈ ಭಾಗದಲ್ಲಿದ್ದು, ಕಾಡಾನೆಯಿಂದಾಗಿ ಜನರು ಅಲ್ಲಿಗೆ ಹೋಗುವುದಕ್ಕೂ ಕೂಡ  ಭಯ ಭೀತರಾಗಿದ್ದಾರೆ.  ಅರಣ್ಯ ಸಿಬ್ಬಂದಿಗೆ ಈ ಬಗ್ಗೆ ಹಲವು ಸಲ ಮನವಿ ಮಾಡಿದ್ದರೂ ಆನೆಯನ್ನು ಶಾಶ್ವತವಾಗಿ ಬೇರೆಡೆಗೆ ಸ್ಥಳಾಂತರ ಮಾಡುವ ಕೆಲಸ ಆಗುತ್ತಿಲ್ಲ ಎಂದು ಜನರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next