Advertisement

ಕಾಡಾನೆ ಕಾಟದಿಂದ ಹೈರಾಣಾದ ಮೂಡಿಗೆರೆ ರೈತರು; ಕಾಫಿ, ಬಾಳೆ, ಅಡಿಕೆ ತೋಟಗಳಿಗೆ ಹಾನಿ

02:44 PM Jul 30, 2023 | Team Udayavani |

ಚಿಕ್ಕಮಗಳೂರು: ತೀವ್ರ ಮಳೆಯಿಂದ ಕಂಗೆಟ್ಟಿಂದ ಮಲೆನಾಡ ರೈತರು ಇದೀಗ ಕಾಡಾನೆ ಕಾಟಕ್ಕೆ ಹೈರಾಣಾಗಿದ್ದಾರೆ. ಮೂಡಿಗೆರೆ ತಾಲೂಕಿನ ಸಾರಗೋಡು, ಕುಂದೂರು ಗ್ರಾಮಗಳಲ್ಲಿ 60ಕ್ಕೂ ಹೆಚ್ಚು ರೈತರ ತೋಟಗಳಲ್ಲಿ ಕಾಡಾನೆಗಳು ದಾಂಗುಡಿ ಇಟ್ಟಿದ್ದು ರೈತರ ತಲೆನೋವಿಗೆ ಕಾರಣವಾಗಿದೆ.

Advertisement

ಕಾಡಾನೆ ದಾಳಿಗೆ ಕಾಫಿ ತೋಟಗಳ ನಾಶವಾಗದೆ. ಇದರ ಜೊತೆಗೆ ಮೆಣಸು, ಬಾಳೆ, ಏಲಕ್ಕಿ, ಅಡಿಕೆ ಬೆಳೆಗಳಿಗೆ ಹಾನಿಯಾಗಿದೆ. 20ಕ್ಕೂ ಹೆಚ್ಚೆರುವ ಕಾಡಾನೆ ಹಿಂಡಿನಿಂದ ತೋಟಗಳ ಮೇಲೆ ನಿರಂತರ ದಾಳಿಯಾಗುತ್ತಿದೆ. ತೋಟದ ಬೆಳೆಗಳನ್ನು ತುಳಿದು ನಾಶ ಮಾಡಿವೆ.

ಪದೇ-ಪದೇ ಆನೆಗಳು ತೋಟಗಳಿಗೆ ಲಗ್ಗೆ ಇಡುತ್ತಿದ್ದರೂ ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಬಾರದ ಕಾರಣ ರೈತರು ಆಕ್ರೋಶ ಹೊರಹಾಕಿದ್ದಾರೆ. ಸ್ಥಳೀಯ ಶಾಸಕರ ಗಮನಕ್ಕೆ ತಂದರೂ ಪ್ರಯೋಜನವಿಲ್ಲ, ಲಕ್ಷಾಂತರ ರೂಪಾಯಿ ನಷ್ಟವಾಗುತ್ತಿದೆ, ನಮಗೆ ಪರಿಹಾರ ಒದಗಿಸಬೇಕು ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next