Advertisement

ಪುಟ್ಟ ಬಾಲಕಿಯ ನೃತ್ಯವನ್ನು ಅನುಕರಿಸಿದ ಆನೆ…ವಿಡಿಯೋ ನೋಡಿ ಹೇಗಿದೆ ಹೇಳಿ

12:37 PM Sep 18, 2022 | Team Udayavani |

ಸಾಮಾಜಿಕ ಜಾಲತಾಣಗಳಲ್ಲಿ ಈವಾಗ ವೈರಲ್ ವಿಡಿಯೊಗಳದ್ದೇ ಕಾರುಬಾರು ದಿನ ಬೆಳಗಾದರೆ ಒಂದಿಲ್ಲೊಂದು ವೈರಲ್ ವಿಡಿಯೋಗಳು ಮೊಬೈಲ್ ಪರದೆಯಲ್ಲಿ ಕಾಣಸಿಗುತ್ತದೆ. ಕೆಲವೊಂದು ವೈರಲ್ ವಿಡಿಯೋಗಳು ಮನ ಮುಟ್ಟುವಂತಿರುತ್ತವೆ…

Advertisement

ಅಂತದ್ದೇ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಪುಟ್ಟ ಬಾಲಕಿಯೊಬ್ಬಳು ಆನೆಯ ಎದುರು ನಿಂತು ನೃತ್ಯ ಮಾಡುತ್ತಾಳೆ ಅದಕ್ಕೆ ಪ್ರತಿಯಾಗಿ ಆನೆಯೂ ಕೂಡಾ ತನ್ನ ಸೊಂಡಿಲು ಮತ್ತು ಕಿವಿಗಳನ್ನು ಅಲ್ಲಾಡಿಸುತ್ತಾ ಬಾಲಕಿ ಮಾಡಿದ ನೃತ್ಯವನ್ನೇ ಅನುಕರಿಸುವಂತೆ ಕಾಣುವ ವಿಡಿಯೋವೊಂದನ್ನು ಐಪಿಎಸ್ ಅಧಿಕಾರಿ ದೀಪಾಂಶು ಕಾಬ್ರಾ ತಮ್ಮ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೆ ‘ಯಾರು ಚೆನ್ನಾಗಿ ನೃತ್ಯ ಮಾಡಿದ್ದಾರೆ’ ಎಂಬ ಬರೆದುಕೊಂಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಆದ ಈ ವಿಡಿಯೋ ಬಾರಿ ಮೆಚ್ಚುಗೆ ವ್ಯಕ್ತವಾಗಿದೆ..

ಆರು ಸೆಕುಂಡುಗಳ ವಿಡಿಯೋದಲ್ಲಿ ಬಾಲಕಿ ಆನೆಯ ಎದುರು ನಿಂತು ನೃತ್ಯ ಮಾಡಿದ್ದಾಳೆ ಆ ಕೂಡಲೇ ಎದುರಿಗಿದ್ದ ಆನೆಯೂ ಬಾಲಕಿಯನ್ನೇ ನೋಡಿ ಸೊಂಡಿಲು ಮತ್ತು ಕಿವಿಗಳನ್ನು ಅಲ್ಲಾಡಿಸುತ್ತಾ ಬಾಲಕಿಯ ನೃತ್ಯಕ್ಕೆ ಸಾಥ್ ನೀಡಿದೆ…

ಐಪಿಎಸ್ ಅಧಿಕಾರಿ ದೀಪಾಂಶು ಕಾಬ್ರಾ ಹಂಚಿಕೊಂಡ ವಿಡಿಯೋ ಕ್ಕೆ ಬಾರಿ ಮೆಚ್ಚುಗೆ ವ್ಯಕ್ತಪಡಿಸಿದ ನೆಟ್ಟಿಗಳು ಇಬ್ಬರಿಗೂ ಶುಭ ಹಾರೈಸಿದ್ದಾರೆ ಅಲ್ಲದೆ ವಿಡಿಯೋ ಹಂಚಿಕೊಂಡ ಅಧಿಕಾರಿಗೂ ಧನ್ಯವಾದ ತಳಿಸಿದ್ದಾರೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next