Advertisement
ಡಿಕ್ಕಿ ಹೊಡೆದ ರಭಸಕ್ಕೆ ವಿದ್ಯುತ್ ಕಂಬ ತುಂಡಾಗಿದ್ದು ಅದೃಷ್ಟವಶಾತ್ ಟಿಟಿ ವಾಹನದಲ್ಲಿದ್ದ ಒಂಬತ್ತಕ್ಕೂ ಅಧಿಕ ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಪ್ರಯಾಣಿಕರು ಹಾಸನದಿಂದ ಶೃಂಗೇರಿ ಕಡೆಗೆ ತೆರಳುತ್ತಿದ್ದರು ಎನ್ನಲಾಗಿದೆ ಈ ವೇಳೆ ಮಳೆಯಿಂದ ರಸ್ತೆ ಕಾಣದೆ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ.
ಚಾರ್ಮಾಡಿ: ರಸ್ತೆಯಲ್ಲಿ ಭಾರಿ ಮಂಜು ಆವರಿಸಿದ್ದು ಈ ವೇಳೆ ರಸ್ತೆ ಮಧ್ಯದಲ್ಲಿ ಆನೆಯೊಂದು ಗೋಚರಿಸಿದೆ ಗಾಬರಿಗೊಂಡ ಬೊಲೆರೋ ಚಾಲಕ ಚರಂಡಿಗೆ ಇಳಿಸಿದ್ದಾನೆ. ಚಾರ್ಮಾಡಿ ಘಾಟಿಯ 8-9ನೇ ತಿರುವಿನ ಮಧ್ಯೆ ಘಟನೆ ನಡೆದಿದ್ದು ರಾತ್ರಿ ಹೊತ್ತು ದಟ್ಟ ಮಂಜು ಆವರಿಸಿದ ಪರಿಣಾಮ ಚಾಲಕನಿಗೆ ರಸ್ತೆ ಸರಿಯಾಗಿ ಗೋಚರವಾಗಲಿಲ್ಲ ಈ ವೇಳೆ ಏಕಾಏಕಿ ರಸ್ತೆ ಮಧ್ಯೆ ಆನೆಯೊಂದು ಕಂಡುಬಂದಿದೆ ಈ ವೇಳೆ ಜೀಪಿನಲ್ಲಿದ್ದವರು ಗಾಬರಿಗೊಂಡಿದ್ದಾರೆ ಅಲ್ಲದೆ ಆನೆಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ರಸ್ತೆ ಬದಿಯ ಚರಂಡಿಗೆ ಇಳಿದಿದೆ. ಜೀಪಿನಲ್ಲಿದ್ದವರ ಅದೃಷ್ಟ ಚೆನ್ನಾಗಿತ್ತು ಆನೆ ಜೀಪಿನಲ್ಲಿದ್ದವರ ಮೇಲೆ ದಾಳಿ ಮಾಡದೇ ಕಾಡಿನತ್ತ ಪ್ರಯಾಣ ಬೆಳೆಸಿದೆ. ಕಳೆದ 15 ದಿನಗಳಿಂದ ಚಾರ್ಮಾಡಿಯಲ್ಲಿ ಆನೆ ಸಂಚಾರ ಹೆಚ್ಚಾಗಿದ್ದುವಾಹನ ಸವಾರರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.
Related Articles
Advertisement