Advertisement
ಇತರ ಬೆಳೆಗಳಿಗೆ ಹೋಲಿಸಿದರೆ ಇದಕ್ಕೆ ಆರೈಕೆ ಕಡಿಮೆ ಸಾಕು. ನೀರು, ಹಟ್ಟಿ ಗೊಬ್ಬರ, ಸುಡುಮಣ್ಣು, ತರಗೆಲೆ, ಮನೆಯಂಗಳದಲ್ಲಿರುವ ಕಸ, ಬೂದಿ ಗೊಬ್ಬರವನ್ನು ಬಳಸಿ ಸುಲಭವಾಗಿ ಬೆಳೆಯಬಹುದು. ಇತ್ತೀಚೆಗೆ ಮಾರುಕಟ್ಟೆಯಲ್ಲಿ ಇದಕ್ಕೆ ಬೇಡಿಕೆ ಹೆಚ್ಚುತ್ತಿದೆ.
ಸುವರ್ಣ ಗೆಡ್ಡೆಯ ಮೊಳಕೆ ಬರುವಂತ ಭಾಗವನ್ನು ಕತ್ತರಿಸಿ ತೆಗೆದು ಸಗಣಿ ನೀರಿನಲ್ಲಿ ಮುಳುಗಿಸಿ ಸ್ವಲ್ಪ ತರಗೆಲೆಯನ್ನು ಹರಡಿ ಅದರಲ್ಲಿ ಇರಿಸಬೇಕು. ಅದಕ್ಕೆ ಚೆನ್ನಾಗಿ ನೀರು ಚಿಮುಕಿಸಿ ಸೋಗೆ ಅಥವಾ ಒಣಗಿದ ಬಾಳೆಕೈಗಳಿಂದ ಮುಚ್ಚಿ. ಬಳಿಕ ಎರಡು ದಿನಗಳಿಗೊಮ್ಮೆ ಅಡಿಕೆ ಸಿಪ್ಪೆ ಅಥವಾ ತರಗೆಲೆಗಳಿಗೆ ಬೆಂಕಿ ಕೊಟ್ಟು ಹೊಗೆ ಹಾಕಬೇಕು. ಸುಮಾರು ಹದಿನೈದರಿಂದ ಇಪ್ಪತೈದು ದಿನಗಳಲ್ಲಿ ಗಿಡ ಚೆನ್ನಾಗಿ ಮೊಳಕೆ ಬರುತ್ತದೆ.
Related Articles
Advertisement
ತಳಿಊರಿನ ತಳಿಯಲ್ಲದೆ ತಿರುವನಂತಪುರದ ಸಿಟಿಆರ್‌ಐ ಅಭಿ ವೃದ್ಧಿಪಡಿಸಿದ “ಶ್ರೀಪದ್ಮ’ ಮತ್ತು ಹೈದರಾಬಾದ್‌ನ ಅಪಾವುನಲ್ಲಿ ಅಭಿವೃದ್ಧಿ ಪಡಿಸಿದ “ಗಜೇಂದ್ರ’ ತಳಿಗಳನ್ನು ಹೆಚ್ಚಾಗಿ ಬೆಳೆಯಲಾಗುತ್ತಿದೆ. ತೇವಾಂಶದಿಂದ ಕೂಡಿದ ಉಷ್ಣಪ್ರದೇಶದ ಬೆಳೆ ಇದಾಗಿದೆ. ಕೆಂಪು, ಕಪ್ಪು, ನೀರು ಇಂಗಿ ಹೋಗುವ ಮಣ್ಣು ಇದಕ್ಕೆ ಸೂಕ್ತ. ಉಪಯೋಗ
ಈ ಗೆಡ್ಡೆಯಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿದ್ದು, ಹೇರಳ ಪೌಷ್ಟಿಕಾಂಶಗಳನ್ನು ಹೊಂದಿದೆ. ಸರಿಯಾಗಿ ಬೇಯಿಸಿ ಪದಾರ್ಥ ಮಾಡಿದರೆ ತುರಿಕೆ ಇರುವುದಿಲ್ಲ. ಔಷಧೀಯ ಗುಣಗಳು ಅತ್ಯಧಿಕ ಪ್ರಮಾಣದಲ್ಲಿವೆ. ಇದರಲ್ಲಿ ಅಧಿಕ ನಾರಿನಂಶವಿರುವುದರಿಂದ ದೇಹದ ತೂಕ ಇಳಿಸಲು ಸಹಕರಿಸಿ, ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸುತ್ತದೆ. ಮಲಬದ್ಧತೆ ಸಮಸ್ಯೆ ನಿವಾರಿಸಿ, ಮೂಲವ್ಯಾಧಿ ತಡೆಯಲು ಪೂರಕ. ಮಹಿಳೆಯರಲ್ಲಿ ಹಾರ್ಮೋನು ಗಳನ್ನು ಸಮ ತೋಲನದಲ್ಲಿರಿಸಿ ಋತುಬಂಧದ ತೊಂದರೆಗಳನ್ನು ತಡೆಯಲು, ರಕ್ತ ಹೆಪ್ಪು ಗಟ್ಟು ವುದನ್ನು ನಿಯಂತ್ರಿಸಲು ವಿಟಮಿನ್ “ಬಿ6′ ಸಹಾಯ ಮಾಡುತ್ತದೆ. ಮಧು ಮೇಹಿಗಳಿಗೂ ಉತ್ತಮ. ತಂಪು ನೀಡುವ ಗುಣ ಹೊಂದಿದ್ದು, ರಕ್ತದೊತ್ತಡವನ್ನು ಕಡಿಮೆ ಗೊಳಿಸುತ್ತದೆ. ಆದರೆ ಆಸ್ತಮಾ, ಸೈನಸ್ ಮತ್ತು ಶೀತ ದೇಹ ಪ್ರಕೃತಿಯವರು ಇದರ ಸೇವನೆ ಅಷ್ಟೊಂದು ಸಂಮಜಸವಲ್ಲ. - ಗಣೇಶ ಕುಳಮರ್ವ