Advertisement

ಯಳಂದೂರು: ವಸತಿ ಶಾಲೆಗೆ ನುಗ್ಗಿದ ಗಜರಾಜ; ವಿದ್ಯಾರ್ಥಿಗಳಲ್ಲಿ ಆತಂಕ

12:59 PM Jul 27, 2022 | Team Udayavani |

ಯಳಂದೂರು: ತಾಲ್ಲೂಕಿನ ಬಿಳಿಗಿರಿರಂಗನಬೆಟ್ಟದ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಗಜರಾಜ ನುಗ್ಗಿದ ಪರಿಣಾಮ ವಿದ್ಯಾರ್ಥಿಗಳು ಕೆಲಕಾಲ ಆತಂಕ ಗೊಂಡಿರುವ ಘಟನೆ ಬುಧವಾರ ಜರುಗಿದೆ.

Advertisement

ಮುಂಜಾನೆ ಇದ್ದಕ್ಕಿದ್ದಂತೆ ಗಜರಾಜನು ವಸತಿ ಶಾಲೆಯ ಕ್ಯಾಂಪಸ್ ನ ಒಳಕ್ಕೆ ನುಗ್ಗಿದೆ. ಈ ಸಂದರ್ಭದಲ್ಲಿ ಕೂಡಲೇ ಇಲ್ಲಿನ ಶಿಕ್ಷಕರು ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿಯನ್ನು ನೀಡಿದ್ದಾರೆ.

ಕೂಡಲೇ ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆಯ ಸಿಬ್ಬಂದಿ ಹರಸಾಹಸಪಟ್ಟು ಆನೆಯನ್ನು ಕ್ಯಾಂಪಸ್ ನ ಒಳಗಿಂದ ಕಾಡಿಗೆ ಓಡಿಸಲು ಯಶಸ್ವಿಯಾಗಿದ್ದಾರೆ. ನಂತರ ವಿದ್ಯಾರ್ಥಿಗಳು ನಿರಾಳರಾದರು.

ಇದನ್ನೂ ಓದಿ: ಚಿಕ್ಕಮಗಳೂರು: ಪ್ರವೀಣ್‌ ಹತ್ಯೆ ಖಂಡಿಸಿ ಸಾಮೂಹಿಕ ರಾಜೀನಾಮೆಗೆ ಮುಂದಾದ ಬಿಜೆಪಿ ಸದಸ್ಯರು

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next