Advertisement
ಸಾಮಾನ್ಯವಾಗಿ ಐದು ವರ್ಷಗಳಿಗೊಮ್ಮೆ ದೇಶದ ಎಲ್ಲ ರಾಜ್ಯಗಳಲ್ಲಿ ಆನೆಗಣತಿ ನಡೆಸಲಾಗುತ್ತದೆ. ಆದರೆ ಈ ಬಾರಿ ದಕ್ಷಿಣ ರಾಜ್ಯಗಳ ಗಡಿ ಪ್ರದೇಶಗಳಲ್ಲಿ ಮಾತ್ರ ಆನೆಗಳ ಗಣತಿ ನಡೆಯುತ್ತಿದೆ. ಇದೇ ವರ್ಷದ ಮಾರ್ಚ್ ತಿಂಗಳಲ್ಲಿ ಬಂಡೀಪುರ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಕರ್ನಾಟಕ, ತಮಿಳುನಾಡು, ಕೇರಳ ರಾಜ್ಯಗಳ ಅಧಿಕಾರಿಗಳನ್ನು ಒಳಗೊಂಡ ಅಂತಾರಾಜ್ಯ ಸಮನ್ವಯ ಸಮಿತಿ ನಡೆಸಿದ ಸಭೆಯ ನಿರ್ಧಾರದಂತೆ ಈ ಗಣತಿ ನಡೆಸಲಾಗುತ್ತಿದೆ.
Related Articles
Advertisement
ಗಣತಿಯ ವಿಧಾನಮೇ 23ರಂದು ಮೊದಲ ದಿನ ನೇರ ಎಣಿಕೆ ಪದ್ಧತಿ, 24ರಂದು ಆನೆಗಳ ಲದ್ದಿಗಳ ಮೂಲಕ ಎಣಿಕೆ, 25ರಂದು ನೀರು ಕುಡಿಯಲು ಬರುವ ಜಾಗಗಳಲ್ಲಿ ಎಣಿಕೆ ಮೂಲಕ ಗಣತಿ ನಡೆಸಲಾಗುತ್ತದೆ. ತಂಡಗಳಲ್ಲಿ ಗಣತಿ ಎಣಿಕೆ ಕಾರ್ಯ ನಡೆಯಲಿದೆ. ಒಂದು ತಂಡ ನಿಗದಿತ ಪ್ರದೇಶದ 15 ಕಿ.ಮೀ. ದೂರವನ್ನು ಕಾಲ್ನಡಿಗೆ ಮೂಲಕ ಕ್ರಮಿಸಿ ಗಣತಿ ನಡೆಸುತ್ತದೆ. ಅರಣ್ಯ ಸಿಬಂದಿ ಈ ಗಣತಿ ಕಾರ್ಯದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಇವರಿಗೆ ಒಂದು ಸುತ್ತಿನ ತರಬೇತಿಯನ್ನೂ ನೀಡಲಾಗಿದೆ. ಬೆಳಿಗ್ಗೆ 6ರಿಂದ ಸಂಜೆ 6ರ ವರೆಗೆ ಗಣತಿ ಕಾರ್ಯ ನಡೆಯಲಿದೆ. ಆನೆಗಳ ವಯಸ್ಸು, ಲಿಂಗ, ದಂತ ಮತ್ತು ದಂತ ರಹಿತ ಗಂಡಾನೆ (ಮಕನ) ಸಂಖ್ಯೆಯನ್ನೂ ಈ ಗಣತಿ ಮೂಲಕ ನಿರ್ಣಯಿಸಲಾಗುತ್ತದೆ. 953 ಆನೆಗಳು ಸಂರಕ್ಷಿತ ಪ್ರದೇಶದಿಂದ ಹೊರಗೆ
ರಾಜ್ಯದಲ್ಲಿ ಆನೆಗಳು 14 ಸಂರಕ್ಷಿತ ಪ್ರದೇಶಗಳಲ್ಲಿ ಹಂಚಿ ಹೋಗಿವೆ. ಶೇ.82ರಷ್ಟು ಆನೆಗಳು ಈ ಸಂರಕ್ಷಿತ ಪ್ರದೇಶಗಳಲ್ಲಿ ವಾಸಿಸುತ್ತಿವೆ. ಶೇ.18ರಷ್ಟು ಆನೆಗಳು ಸಂರಕ್ಷಿತ ಅರಣ್ಯ ಪ್ರದೇಶಗಳಿಂದ ಹೊರಗಿವೆ. 2023ರ ಗಣತಿ ಪ್ರಕಾರ ಇಂಥ 953 ಆನೆಗಳಿವೆ. ಈ ಪ್ರದೇಶಗಳು ಆನೆಗಳ ಆವಾಸಕ್ಕೆ ಸುರಕ್ಷಿತವಾಗಿಲ್ಲ. ಕಳೆದ ಗಣತಿಯಲ್ಲಿ ಪತ್ತೆಯಾದ 6,395 ಆನೆಗಳ ಪೈಕಿ 161 ಆನೆಗಳು ಖಾಸಗಿಯವರ ಜಾಗಗಳಲ್ಲಿ (ಜಮೀನು, ಕಾಫಿ ಎಸ್ಟೇಟುಗಳಲ್ಲಿ) ಕಂಡು ಬಂದಿವೆ. ಇವುಗಳ ಸಂರಕ್ಷಣೆ ಅರಣ್ಯ ಇಲಾಖೆಗೆ ಸವಾಲಾಗಿದೆ. ಇವಲ್ಲದೆ, 792 ಆನೆಗಳು ಅರಣ್ಯ ಪ್ರದೇಶದಲ್ಲೆ ಇದ್ದರೂ, ಅವು ಸಾಂಪ್ರದಾಯಿಕ ಸಂರಕ್ಷಣ ವ್ಯಾಪ್ತಿಯಲ್ಲಿಲ್ಲ. ಆದರೂ ಇವು ಖಾಸಗಿ ಜಾಗಗಳಿಗೆ ಹೋಲಿಸಿದರೆ ಸುರಕ್ಷಿತವಾಗಿವೆ ಎಂದು ಗಣತಿಯ ವರದಿಯಲ್ಲಿ ತಿಳಿಸಲಾಗಿದೆ. ದಕ್ಷಿಣ ರಾಜ್ಯಗಳ ಆನೆಗಳ ಗಣತಿ ಕಾರ್ಯ ಮೇ 23ರಿಂದ ಆರಂಭವಾಗಲಿದೆ. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಸುಮಾರು 150 ಮಂದಿ ಅರಣ್ಯ ಸಿಬಂದಿ ಗಣತಿ ಕಾರ್ಯದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಈಗಾಗಲೇ ಅವರಿಗೆ ತರಬೇತಿಯನ್ನೂ ನೀಡಲಾಗಿದೆ.
-ಪ್ರಭಾಕರನ್,
ಅರಣ್ಯ ಸಂರಕ್ಷಣಾಧಿಕಾರಿ, ಬಂಡೀಪುರ – ಕೆ.ಎಸ್. ಬನಶಂಕರ ಆರಾಧ್ಯ