Advertisement

ಆನೆ ದಾಳಿ: ಗಾಯಾಳುಗಳ ಸ್ಥಿತಿ ಗಂಭೀರ

10:23 AM May 02, 2019 | Suhan S |

ಮಾಲೂರು: ಪಟ್ಟಣ ಸಮೀಪದಲ್ಲೇ ಎರಡು ಮೂರು ದಿನಗಳಿಂದ ಬೀಡು ಬಿಟ್ಟಿದ್ದ ಕಾಡಾನೆಗಳ ಹಿಂಡು ಬುಧವಾರ ಯುವಕರಿಬ್ಬರನ್ನು ಗಂಭೀರವಾಗಿ ಗಾಯಗೊಳಿಸಿರುವ ಘಟನೆ ತಾಲೂಕಿನ ಅರಳೇರಿ ಸಮೀಪ ಸಂಭವಿಸಿದೆ. ತಾಲೂಕಿನ ಕಾಟೇರಿ ಸೊಣ್ಣಹಳ್ಳಿಯರಾಜಪ್ಪ(25) ಹಾಗೂ ರವಿ(24) ಗಾಯಾಳುಗಳು. ಇಬ್ಬರನ್ನೂ ಚಿಕಿತ್ಸೆಗಾಗಿ ಕೋಲಾರದ ಎಸ್‌ಎನ್‌ಆರ್‌ ಆಸ್ಪತ್ರೆಗೆ ದಾಖಲಿಸಲಾಗಿದೆ.

Advertisement

ವಾರದಿಂದ ತಾಲೂಕಿನ ಗಡಿಭಾಗದಲ್ಲಿ ಕಾಣಿಸಿಕೊಂಡಿದ್ದ ಕಾಡಾನೆಗಳ ಗುಂಪನ್ನು ಅರಣ್ಯ ಇಲಾಖೆ ಸಿಬ್ಬಂದಿ ಕಾಡಿಗೆ ಓಡಿಸಲು ಹರಸಾಹಸ ಪಡುತ್ತಿದ್ದು, ಇದೀಗ ಪಟ್ಟಣ ಸಮೀಪಕ್ಕೆ ಆಗಮಿಸಿ, ಜನರಲ್ಲಿ ಆತಂಕ ಮೂಡಿಸಿವೆ.

ಪಟ್ಟಣದಿಂದ 8 ಕಿ.ಮೀ. ಇರುವ ಕುಡಿಯ ನೂರು ಗ್ರಾಮದ ಬಳಿ ಮಂಗಳವಾರ ಕಾಣಿಸಿಕೊಂಡಿದ್ದ ಗುಂಪು ಬುಧವಾರ ಬೆಳಗ್ಗೆ ಪಟ್ಟಣದ ಹೊಂದಿಕೊಂಡಿರುವ ಅರಳೇರಿ ಗ್ರಾಮದ ಬಳಿಯ ಮಾವಿನ ತೋಟದಲ್ಲಿ ಪ್ರತ್ಯೇಕವಾಗಿವೆ.

ಆನೆಗಳು ಬಂದಿರುವ ಸುದ್ದಿ ತಿಳಿದು ಸ್ಥಳಕ್ಕೆ ದಾವಿಸಿದ ಯುವಕರು ಮೊಬೈಲ್‌ನಲ್ಲಿ ಫೋಟೋ ತೆಗೆಯಲು ಮುಗಿಬಿದ್ದಿದ್ದಾರೆ. ಈ ವೇಳೆ ಆನೆ ಬಳಿಗೆ ಬಂದಿದ್ದ ಕಾಟೇರಿ ಸೊಣ್ಣಹಳ್ಳಿಯ ರಾಜಪ್ಪ ಮತ್ತು ರವಿ ಅವರನ್ನು ಸೊಂಡಲಿನಿಂದ ಬಡಿದು ಗಂಭೀರವಾಗಿ ಗಾಯಗೊಳಿಸಿವೆ.

ಪಟ್ಟಣಕ್ಕೆ ನುಗ್ಗುವ ಸಾಧ್ಯತೆ: ಎರಡು ವರ್ಷಗಳ ಹಿಂದೆ ಅರಳೇರಿ ಸುತ್ತಮತ್ತಲಿನ ಗ್ರಾಮಗಳಲ್ಲಿ ಕಾಣಿಸಿಕೊಂಡಿದ್ದ ಕಾಡಾನೆಗಳ ಗುಂಪನ್ನು ಬನ್ನೇರುಘಟ್ಟದಿಂದ ಬಂದ ಅರಣ್ಯ ಸಿಬ್ಬಂದಿ ಯಶಸ್ವಿಯಾಗಿ ಕಾಡಿಗೆ ಕಳುಹಿಸಿದ್ದರು. ಆದರೆ, ಈ ಬಾರಿ ವಾರವಾದ್ರೂ ಆನೆಗಳನ್ನು ಓಡಿಸಲು ಆಗಿಲ್ಲ. ಅಲ್ಲದೆ, ಗುರುವಾರ ಪಟ್ಟಣಕ್ಕೂ ನುಗ್ಗುವ ಸಾಧ್ಯತೆ ಇದೆ.

Advertisement

ಜನ ತಡೆಯುವುದಕ್ಕೆ ಕಷ್ಟ: ಕಾಡಾನೆಗಳು ಗ್ರಾಮಕ್ಕೆ ಬಂದಿರುವ ಸುದ್ದಿ ತಿಳಿದು ಜನ ತಂಡೋಪ ತಂಡವಾಗಿ ಆಗಮಿಸುತ್ತಿದ್ದಾರೆ. ಇದ ರಿಂದ ಆನೆ ಓಡಿಸುವ ಕಾರ್ಯಾಚರಣೆಗೆ ಅಡ್ಡಿ ಯಾಗಿದೆ. ಸಾರ್ವಜನಿಕರನ್ನು ನಿಯಂತ್ರಿಸಲು ಪೊಲೀಸರು, ಅರಣ್ಯ ಸಿಬ್ಬಂದಿ ಪ್ರಾಯಾಸ ಪಡು ತ್ತಿದ್ದು, ಸಹಕಾರ ನೀಡುವಂತೆ ಮನವಿ ಮಾಡುತ್ತಿದ್ದಾರೆ. ಪರಿಸ್ಥಿತಿ ಗಂಭೀರವಾಗಿರುವ ಕಾರಣ ವಲಯ ಅರಣ್ಯಾಧಿಕಾರಿ ಧನಲಕ್ಷ್ಮೀ ಹರೀಶ್‌ ಸ್ಥಳದಲ್ಲಿಯೇ ಬೀಡುಬಿಟ್ಟಿದ್ದು, ಗುರುವಾರದ ಒಳಗೆ ಆನೆಗಳನ್ನು ಕಾಡಿಗೆ ಓಡಿಸಲು ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡಿರುವುದಾಗಿ ತಿಳಿಸಿದ್ದಾರೆ. ನೀಲಗಿರಿ ತೋಪು, ಮಾವಿನ ತೋಟಗಳಲ್ಲಿ ಇರುವ ಆನೆಗಳ ಬಳಿ ಹೋಗದಂತೆ ಜನರಿಗೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next