Advertisement

ನಿಡ್ಲೆ, ರೆಂಜಿಲಾಡಿಯಲ್ಲಿ ಆನೆ ದಾಳಿ; ಕೃಷಿ ತೋಟ ಹಾನಿ

11:51 PM Aug 07, 2022 | Team Udayavani |

ಬೆಳ್ತಂಗಡಿ: ನಿಡ್ಲೆ ಗ್ರಾಮದ ಪಾರ್ಪಿಕಲ್ಲು ಜಯರಾಮ ಪಾಳಂದ್ಯೆ ಅವರ ತೋಟಕ್ಕೆ ಶನಿವಾರ ರಾತ್ರಿ ದಾಳಿ ನಡೆಸಿದ ಕಾಡಾನೆಗಳು ಒಂದು ತೆಂಗಿನ ಮರ, ಎರಡು ತೆಂಗಿನ ಸಸಿ ಹಾಗೂ 50ಕ್ಕಿಂತ ಅಧಿಕ ಫಲ ಬಿಟ್ಟ ಬಾಳೆಗಿಡಗಳನ್ನು ಧ್ವಂಸ ಮಾಡಿವೆ.

Advertisement

ಒಂದಕ್ಕಿಂತ ಅಧಿಕ ಆನೆ ಬಂದಿರುವುದು ಹೆಜ್ಜೆ ಗುರುತಿನಿಂದ ಕಂಡುಬಂದಿದೆ. 15 ದಿನಗಳ ಹಿಂದೆಯೂ ಇವರ ತೋಟಕ್ಕೆ ಕಾಡಾನೆ ದಾಳಿ ನಡೆಸಿ ಕೃಷಿ ಹಾನಿ ಮಾಡಿತ್ತು.

ಸುಬ್ರಹ್ಮಣ್ಯ: ಕಡಬ ತಾಲೂಕಿನ ರೆಂಜಿಲಾಡಿ ಗ್ರಾಮದ ಹೇರ ರಾಮಚಂದ್ರ, ಮೋಹಿನಿ ಅವರ ತೋಟಕ್ಕೆ ಶನಿವಾರ ರಾತ್ರಿ ಲಗ್ಗೆ ಇಟ್ಟ ಕಾಡಾನೆಗಳ ಹಿಂಡು ಅಡಿಕೆ, ಬಾಳೆ, ಗೇರು ಕೃಷಿಗೆ ಹಾನಿ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next