Advertisement

Mysore Elephants ಆನೆ ಮತ್ತು ಮಾವುತ ಭಾವನಾತ್ಮಕ ಸಂಬಂಧ

04:24 PM Oct 11, 2024 | Team Udayavani |

ವಿಶ್ವವಿಖ್ಯಾತ ಮೈಸೂರು ದಸರಾ ಎಂದಾಕ್ಷಣೆ ನೆನಪಾಗುವುದೇ ಚಿನ್ನದ ಅಂಬಾರಿ ಹೊತ್ತು ರಾಜ ಬೀದಿ ಯಲ್ಲಿ ಗಾಂಭೀರ್ಯದಿಂದ ಹೆಜ್ಜೆಯಿಡುವ ಅಂಬಾರಿ ಆನೆ ಮತ್ತು ಅದರೊಟ್ಟಿಗೆ ಸಾಹುವ ಗಜ ಪಡೆ. ಇಡೀ ದಸರಾದ ಸಾಂಸ್ಕೃತಿಕ ಮೆರುಗು ಎಂದೇ ಹೇಳುವ ಜಂಬೂ ಸವಾರಿ ಶಾಂತವಾಗಿ ಸಾಗಬೇಕಾದರೆ ಮಾವುತ ಇರಲೇಬೇಕು.

Advertisement

ದಸರಾ ಎಂದರೆ ಅಂಬಾರಿ, ಅಂಬಾರಿ ಎಂದರೆ ಆನೆ, ಆನೆ ಎಂದರೆ ಮಾವುತ ಎನ್ನುವುದು ಮುಖ್ಯ. ಮಾವುತನೇ ಇಡೀ ಜಂಬೂಸವಾರಿಯ ನಿಯಂತ್ರಕ ಶಕ್ತಿ ಹಾಗೂ ರೂವಾರಿಯೂ ಹೌದು. ಭೂಮಿಯ ಮೇಲೆನ ದೈತ್ಯ ಪ್ರಾಣಿಯಾದ ಆನೆಯನ್ನು ಪಳಗಿಸಿ ಅದರ ಮೇಲೆ ಸವಾರನಾಗಿ ಮೆರೆಯುವ ಈತನ ದಿಟ್ಟ ಧೈರ್ಯಗಳು ಮತ್ತು ಅದರೊಟ್ಟಿಗಿನ ಈತನ ಸಂವಹನದ ಭಾಷಾ ಕೈಂಕರ್ಯ ನಿಜಕ್ಕೂ ಶ್ಲಾಘನೀಯವಾದುದು.

ಜಂಬೂ ಸವಾರಿಗೆ ಎರಡು ತಿಂಗಳು ಮೊದಲೇ ಕಾಡಿ ನಿಂದ ನಾಡಿಗೆ ಆಗಮಿಸುವ ಗಜಪಡೆಯನ್ನು ಯಶಸ್ವಿಯಾಗಿ ನಿಯಂತ್ರಿಸುವ ಮತ್ತು ನಿರ್ವಹಿಸುವ ಮಾವುತ ಮತ್ತು ಕಾವಾಡಿ ಮಾತ್ರ ಎಲೆಮರೆಯ ಕಾಯಿ ಎಂದರೆ ತಪ್ಪಾಗಲಾರದು. ಆನೆ ಮೇಲಿನ ಅಂಬಾರಿಯಲ್ಲಿ ಚಿನ್ನಾಮೃತಳಾದ ತಾಯಿ ಚಾಮುಂಡಿಯನ್ನು ಕಣ್ತುಂಬಿಕೊಳ್ಳಲು ಜನಸಾಗರವೇ ನೆರೆದಿರುತ್ತದೆ. ಆದರೆ, ಕೆಲವರಿಗಷ್ಟೇ ಆನೆಯ ಮೂಕ ವೇದನೆ ಗೊತ್ತಾಗುವುದು. ಇಷ್ಟೆಲ್ಲಾ ಕಣ್ಣೆದುರಿಗೆ ಕಂಡವುಗಳಾದರೂ ಅದರೊಟ್ಟಿಗಿನ ಇಡೀ ಅಂಬಾರಿಯ ಮತ್ತು ಆನೆಯ ನಿಯಂತ್ರಣವನ್ನು ಅಚ್ಚುಕಟ್ಟಾಗಿ ನಿರ್ವಹಿಸುವ ಮಾವುತನು ಇಲ್ಲಿ ಮುಖ್ಯ ಎನ್ನುವುದನ್ನು ಮರೆಯುವಂತಿಲ್ಲ. ಒಟ್ಟು ದಸರಾ ಆಚರಣೆಯ ಕೇಂದ್ರಬಿಂದು ಜಂಬೂ ಸವಾರಿಯೇ ಆಗಿದ್ದರೂ, ಅದರ ನಿಯಂತ್ರಕ ಶಕ್ತಿ ಮಾವುತನ ಅಂಕುಶದಲ್ಲೇ ಅಡಗಿದೆ ಎಂಬುದುನ್ನು ನಾವು ಸ್ಮರಿಸಬೇಕಿದೆ.

ಗಿರಿಜನರು ಅಥವಾ ಬುಡಕಟ್ಟು ಜನರು ಕಾಡಿನ ವಾಸಿಗಳಾಗಿದ್ದರಿಂದಲೇ ವನ್ಯ ಪ್ರಾಣಿಗಳೊಂದಿಗೆ ಮಾತನಾಡುವ ಕಲೆ ರೂಢಿಸಿಕೊಂಡಿದ್ದಾರೆ. ಈ ಸಂವಹನ ಸಾಧನದಿಂದಲೇ ಅವುಗಳನ್ನು ಪಳಗಿಸಿ, ವುಗಳನ್ನು ಮಾತನಾಡಿಸುವ, ಅವುಗಳ ನೋವು, ಸಂಕಟ, ಸಂತೋಷಗಳೊಂದಿಗೆ ಪಾಲುದಾರನಾದ ಮಾವುತ ನಿಜಕ್ಕೂ ಅದೂºತ ಎನಿಸುವುದರಲ್ಲಿ ಸಂದೇಹವಿಲ್ಲ.

Advertisement

ಆನೆಯೊಂದಿಗೆ ಮಾತೃ ಪ್ರೇಮದ ನಂಟು

ಪ್ರತಿ ದಸರಾಕ್ಕೂ ನಾಗರಹೊಳೆ, ಬಂಡೀಪುರದ ಸಾಕಾನೆ ಶಿಬಿರಗಳಿಂದ ಆನೆಗಳು ಬರುತ್ತವೆ. ಇವುಗಳ ಜೊತೆಗೆ 14 ಮಾವುತರು ಮತ್ತು 14 ಮಂದಿ ಕಾವಾಡಿಗಳು ಹಾಗೂ ಇವರ ಜೊತೆ ಸಂಸಾರ, ಮಕ್ಕಳು ಸೇರಿ ಸುಮಾರು 150 ಜನರು ಬರುತ್ತಾರೆ. ಮಾವುತರು ಮತ್ತು ಕಾವಾಡಿಗಳು ಆನೆಯನ್ನು ಸಲಹುವ ಭಾವನಾ ಜೀವಿಗಳು. ಮಾವುತ ಆನೆಯನ್ನೇರುವ ಸವಾರನಾದರೆ, ಕಾವಾಡಿ ಸಹಚರನಾಗಿ ಜೊತೆಯಲ್ಲಿಯೇ ಕ್ಷೇಮಪಾಲನಾಗಿಯೇ ಇರುತ್ತಾನೆ. ಆನೆಯು ಸೌಮ್ಯವಾಗಿ ಹೆಜ್ಜೆ ಇಡಬೇಕಾದರೆ ಮಾವುತ ಮತ್ತು ಕಾವಾಡಿ ಚಾಲಕ ಮತ್ತು ನಿರ್ವಾಹಕರಾಗಿರುತ್ತಾರೆ. ಇಲ್ಲಿ ಇಬ್ಬರ ಹೊಂದಾಣಿಕೆಯೂ ಮುಖ್ಯವಾಗಿದ್ದು, ಇವರಿಬ್ಬರಿಗೂ ಆನೆಯೊಂದಿಗೆ ಮಾತೃಪ್ರೇಮದ ನಂಟಿರುವುದು ಗಮನಾರ್ಹ.

ಮಕ್ಕಳ ರೀತಿ ಪೋಷಿಸುವ ಮಾವುತರು

ಆನೆಗಳನ್ನು ಪಳಗಿಸುವ ಮಾವುತ ಮತ್ತು ಕಾವಾಡಿಗಳು ಅವುಗಳನ್ನು ತಮ್ಮ ಮಕ್ಕಳೆಂದೇ ಭಾವಿಸಿರುತ್ತಾರೆ. ಯಾರಾದರೂ ಆನೆಗಳಿಗೆ ಬೈದರೆ ಅವರು ನೊಂದುಕೊಳ್ಳುತ್ತಾರೆ, ದುಃಖೀತರಾಗುತ್ತಾರೆ ಎಂದರೆ ಆನೆ ಮತ್ತು ಅವರ ನಡುವಿನ ಸಂಬಂಧ ಎಂತಹದ್ದು ಎಂಬುದನ್ನು ಮನಗಾಣಬೇಕಿದೆ. ಪ್ರತಿದಿನ ಎರಡು ಬಾರಿ ಸ್ನಾನ, ವಿಶೇಷ ಫೋಜ ನ ಕೊಡುತ್ತಾರೆ. ಜತೆಯಲ್ಲಿಯೇ ಸ್ನೇಹಿತರಂತೆ ಮಾತನಾಡಿಕೊಳ್ಳುತ್ತಾರೆ. ಪ್ರಾಣಿಯ ಮೂಕವೇದನೆಗೆ ಬೆಲೆಕೊಡುತ್ತಾರೆ, ಸ್ಪಂದಿಸುತ್ತಾರೆ. ಇವರು ಕೂಗಿದರೆ ಆನೆಗಳು ಓಡಿ ಬರುತ್ತವೆ. ತಮಗೆ ಬೇಕು ಬೇಡಗಳನ್ನು ಆನೆಗಳು ಹೇಳಿಕೊಳ್ಳುತ್ತವೆ. ಮಾವುತರು ಮತ್ತು ಕವಾಡಿಗಳು ಆನೆಗಳು ಯಾಕೆ ಅಳುತ್ತವೆ ಎಂಬುದನ್ನು ಸುಲಭದಲ್ಲಿ ಅರ್ಥಮಾಡಿಕೊಳ್ಳುತ್ತಾರೆ. ಹೀಗೆ ಆನೆ ಮತ್ತು ಮಾವು ತರ ಸಂಬಂಧ ಎಂಥಹುದೆಂದರೆ ಯಾರ ಜಪ್ತಿಗೂ ಸಿಗದ ಮೌಲ್ಯವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next