Advertisement

ಅನಿವಾಸಿ ಭಾರತೀಯರಿಗೆ ವಿದ್ಯುನ್ಮಾನ ಮತ ಅವಕಾಶ

01:21 AM Dec 02, 2020 | mahesh |

ಹೊಸದಿಲ್ಲಿ: ಮುಂದಿನ ಎಪ್ರಿಲ್‌- ಮೇನಲ್ಲಿ ಐದು ರಾಜ್ಯಗಳ ವಿಧಾನಸಭೆ ಚುನಾವಣೆಗಳು ನಡೆಯಲಿರುವಂತೆಯೇ ಚುನಾವಣ ಆಯೋಗ ಅರ್ಹ ಅನಿವಾಸಿ ಭಾರತೀಯರಿಗೆ ವಿದ್ಯುನ್ಮಾನ ಅಂಚೆ ಮತ ವ್ಯವಸ್ಥೆ (ಇಟಿಪಿ ಬಿಎಸ್‌) ನೀಡುವ ಬಗ್ಗೆ ಪ್ರಸ್ತಾವ ಮಾಡಿದೆ.

Advertisement

ನ.27ರಂದು ಕೇಂದ್ರ ಸರಕಾರದ ಕಾನೂನು ಸಚಿವಾಲಯದ ಶಾಸಕಾಂಗ ವಿಭಾಗದ ಕಾರ್ಯದರ್ಶಿಗೆ ಬರೆದಿರುವ ಪತ್ರದಲ್ಲಿ ಈ ಅಂಶವನ್ನು ಪ್ರಸ್ತಾವ ಮಾಡಲಾಗಿದೆ. ಆಡಳಿತಾ ತ್ಮಕವಾಗಿ ಮತ್ತು ತಾಂತ್ರಿಕವಾಗಿ ವಿದ್ಯುನ್ಮಾನ ಚಾಲಿತ ಅಂಚೆ ಮತ ವ್ಯವಸ್ಥೆ ನೀಡಲು ಆಯೋಗ ಸಿದ್ಧವಾಗಿದೆ. ವಿದೇಶಗಳಲ್ಲಿ ನೆಲೆಸಿರುವ ಹಲ ವಾರು ಭಾರತೀಯರೂ ಈ ವ್ಯವಸ್ಥೆ ಜಾರಿ ಮಾಡಬೇಕು ಎಂದು ಮನವಿ ಮಾಡಿದ್ದಾರೆ.

ಮತ ಚಲಾವಣೆಗಾಗಿಯೇ ದೇಶಕ್ಕೆ ಬರು ವುದು ದುಬಾರಿಯಾಗುವುದರಿಂದ ಅಂಚೆ ಮತ ವ್ಯವಸ್ಥೆ ಮೂಲಕ ಹಕ್ಕು ಚಲಾಯಿಸಲು ಅವಕಾಶ ಮಾಡಿಕೊಡಬೇಕು ಎಂದು ಕೋರಿಕೆ ಸಲ್ಲಿಕೆಯಾಗಿದೆ. ಮಾಹಿತಿಗಳ ಪ್ರಕಾರ 10 ಸಾವಿರದಿಂದ 12 ಸಾವಿರ ಮಂದಿ ಹಿಂದಿನ ಚುನಾವಣೆಗಳ ಅವಧಿಯಲ್ಲಿ ಅಂಚೆ ಮತ ವ್ಯವಸ್ಥೆ ಬಳಕೆ ಮಾಡಿಕೊಂಡಿದ್ದಾರೆ.

ಇಟಿಬಿಎಸ್‌ ಎಂದರೇನು?
ವಿದೇಶಗಳಲ್ಲಿರುವ ಭಾರತ ಮೂಲದ ವ್ಯಕ್ತಿಗೆ ಅಂಚೆ ಮತಪತ್ರವನ್ನು ವಿದ್ಯುನ್ಮಾನ ಮಾಧ್ಯಮದ ಮೂಲಕ ಕಳುಹಿಸಲಾಗುತ್ತದೆ.

ಅದನ್ನು ಡೌನ್‌ಲೋಡ್‌ ಮಾಡಿ ಕೊಂಡು ಮತ ಚಲಾಯಿಸಿದ ಬಳಿಕ ವಿಶೇಷ ರೀತಿಯ ಲಕೋಟೆಯಲ್ಲಿ ಅದನ್ನು ಹಾಕಿ ಸಂಬಂಧಿಸಿದ ಮತ ಕ್ಷೇತ್ರದ ಚುನಾವಣಧಿಕಾರಿಗೆ ಎಣಿಕೆಯ ದಿನ ಬೆಳಗ್ಗೆ 8 ಗಂಟೆ ಮೊದಲು ಕಳುಹಿಸಿಕೊಡಬೇಕು.

Advertisement

2016ರ ಅಕ್ಟೋಬರ್‌ನಲ್ಲಿ ಚುನಾವಣೆ ನಡೆಸುವ ನಿಯಮಗಳ ಕಾಯ್ದೆ 1961ಕ್ಕೆ ತಿದ್ದುಪಡಿ ತಂದು ಅದನ್ನು ಜಾರಿಗೊಳಿಸಲಾಗಿತ್ತು.

ಇತರ ದೇಶಗಳಲ್ಲಿರುವ ಮತದಾರರು ನಿಗದಿತ ಮತಕ್ಷೇತ್ರದ ಅಧಿಕಾರಿಗೆ ಹಕ್ಕು ಚಲಾಯಿಸುವ ಬಗ್ಗೆ ಮೊದಲೇ ಕೋರಿಕೆ ಸಲ್ಲಿಸಬೇಕು. ಅವರು ಅದನ್ನು ಪರಿಶೀಲಿಸಿ ವಿದ್ಯುನ್ಮಾನ ಮಾಧ್ಯಮದ ಮೂಲಕ ಮತಪತ್ರ ಕಳುಹಿಸುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next