Advertisement

ನೆಗೆದ ಗೃಹ ಬಳಕೆ ವಸ್ತು ಮಾರಾಟ : ಜುಲೈ- ಸೆಪ್ಟಂಬರ್‌ ತ್ತೈಮಾಸಿಕದ ಬೆಳವಣಿಗೆ

12:06 AM Feb 19, 2021 | |

ಕೋಲ್ಕತಾ: ಲಾಕ್‌ಡೌನ್‌ ವೇಳೆಯಲ್ಲಿ ತೀರಾ ತಳಮಟ್ಟಕ್ಕೆ ಕುಸಿದಿದ್ದ ಗೃಹೋಪಯೋಗಿ ವಸ್ತುಗಳ ಮಾರಾಟವು ಅನ್‌ಲಾಕ್‌ ಅವಧಿಯಲ್ಲಿ ಏರಿಕೆ ಕಂಡು, ಮಾರುಕಟ್ಟೆಯಲ್ಲಿ ಸಂಭ್ರಮ ಹೆಚ್ಚಿಸಿದೆ.

Advertisement

ಜುಲೈಯಿಂದ ಸೆಪ್ಟಂಬರ್‌ ವರೆಗಿನ ದ್ವಿತೀಯ ತ್ತೈಮಾಸಿಕ ಅವಧಿಯಲ್ಲಿ ಟಿವಿ, ಎಸಿ, ಫ್ರಿಜ್‌, ವಾಷಿಂಗ್‌ ಮೆಷಿನ್‌ ಖರೀದಿ ಬಿರುಸಾಗಿತ್ತು ಎಂದು ಜಿಎಫ್ಕೆ ಇಂಡಿಯಾ ತನ್ನ ವರದಿಯಲ್ಲಿ ಹೇಳಿದೆ.

ಇದು ಹಬ್ಬದ ಋತುವಾಗಿದ್ದು, ಗ್ರಾಹಕರು ಮನೆ ವಸ್ತುಗಳನ್ನು ಮೇಲ್ದರ್ಜೆಗೇರಿಸಿಕೊಳ್ಳಲು ಮುಂದಾಗಿದ್ದರು ಎಂದು ವರದಿ ಹೇಳಿದೆ.

ತೃತೀಯ ತ್ರೈಮಾಸಿಕ ಮತ್ತಷ್ಟು ಹೆಚ್ಚಳ
ಅಕ್ಟೋಬರ್‌ -ಡಿಸೆಂಬರ್‌ನ ತೃತೀಯ ತ್ರೈಮಾಸಿಕದಲ್ಲಿ ಗೃಹೋಪಯೋಗಿ ವಸ್ತುಗಳ ಖರೀದಿಯಲ್ಲಿ ಇನ್ನೂ ಏರಿಕೆಯಾಗಿದೆ .ಈ ಅವಧಿಯಲ್ಲಿ ಎಸಿ ಮತ್ತು ಮೈಕ್ರೋವೇವ್‌ ಓವನ್‌ ವಿಭಾಗದಲ್ಲಿ ಶೇ. 49, ಫ್ರಿಜ್‌ ಶೇ. 25, ವಾಷಿಂಗ್‌ ಮೆಷಿನ್‌ ಶೇ. 31 ಮತ್ತು ಟಿವಿ ಖರೀದಿಯಲ್ಲಿ ಶೇ. 8ರಷ್ಟು ಏರಿಕೆಯಾಗಿದೆ. ಸ್ಮಾರ್ಟ್ಫೋನ್‌ ಖರೀದಿ ಶೇ. 8ರಷ್ಟು ಹೆಚ್ಚಳವಾಗಿದೆ. ಜುಲೈ-ಸೆಪ್ಟಂಬರ್‌ ಅವಧಿಯಲ್ಲಿ ಸ್ಮಾರ್ಟ್‌ಫೋನ್‌ ಖರೀದಿಯಲ್ಲಿ ಶೇ. 1ರಷ್ಟು ಮಾತ್ರ ಏರಿಕೆ ಕಂಡುಬಂದಿತ್ತು.

ಖರೀದಿಗೆ ಕಾರಣಗಳು
– ಮನೆಯ ಗೃಹೋಪಯೋಗಿ ವಸ್ತುಗಳನ್ನು ಮೇಲ್ದರ್ಜೆಗೇರಿಸಲು ಮುಂದಾಗಿದ್ದು.
– ಮನೆಗೆ ವಿಶಾಲ ಪರದೆಯ ಟಿವಿ ಖರೀದಿಗಾಗಿ ಮನಸ್ಸು ಮಾಡಿದ್ದು
– ಪ್ರೀಮಿಯಂ ಸ್ಮಾರ್ಟ್‌ಫೋನ್‌ಗಳು ದೀರ್ಘ‌ಕಾಲ ಬಾಳಿಕೆ ಬರುತ್ತವೆ ಎಂಬ ಕಾರಣ

Advertisement
Advertisement

Udayavani is now on Telegram. Click here to join our channel and stay updated with the latest news.

Next