ನವದೆಹಲಿ: ಕೇಂದ್ರ ಸರ್ಕಾರ ಮತ್ತು ದೆಹಲಿ ಆಮ್ ಆದ್ಮಿ ಸರ್ಕಾರದ ನಡುವೆ ಮತ್ತೂಂದು ಸುತ್ತಿನ ಗಲಾಟೆ ಆರಂಭವಾಗಿದೆ. ಸೋಮವಾರದಿಂದ ದೆಹಲಿಯ 46 ಲಕ್ಷ ಜನರು ಹೆಚ್ಚುವರಿ ವಿದ್ಯುತ್ ಬಿಲ್ಲನ್ನು ಪಾವತಿಸಬೇಕಾಗುತ್ತದೆ. ಇವರಿಗೆ ನೀಡಬೇಕಾಗಿದ್ದ ಸಬ್ಸಿಡಿ ಹಣದ ಫೈಲ್‌ಗೆ ರಾಜ್ಯಪಾಲ ವಿ.ಕೆ.ಸಕ್ಸೇನಾ ಇನ್ನೂ ಸಹಿ ಹಾಕಿಲ್ಲದಿರುವುದೇ ಇದಕ್ಕೆ ಕಾರಣ ಎಂದು ದೆಹಲಿಯ ನೂತನ ಇಂಧನ ಸಚಿವೆ ಆತಿಷಿ ಹೇಳಿದ್ದಾರೆ.
ಸಕ್ಸೇನರೊಂದಿಗೆ ಸಭೆ ನಡೆಸಲು ನಾನು ಈಗಾಗಲೇ ಸಮಯ ಕೇಳಿದ್ದೇನೆ, ಅವರಿನ್ನೂ ಅದಕ್ಕೆ ಪ್ರತಿಕ್ರಿಯಿಸಿಲ್ಲ. ಈ ಹಿನ್ನೆಲೆಯಲ್ಲಿ 46 ಲಕ್ಷ ಜನರಿಗೆ ನೀಡುತ್ತಿದ್ದ ವಿದ್ಯುತ್ ಸಬ್ಸಿಡಿ ಶುಕ್ರವಾರದಿಂದಲೇ ಸ್ಥಗಿತಗೊಳ್ಳುತ್ತದೆ. ಸೋಮವಾರದಿಂದ ಹೆಚ್ಚುವರಿ ಮೊತ್ತ ಪಾವತಿಸಬೇಕಾಗುತ್ತದೆ ಎಂದು ಆತಿಷಿ ಹೇಳಿದ್ದಾರೆ. ದೆಹಲಿ ಸರ್ಕಾರ ಈಗಾಗಲೇ 2023-24ರ ಅವಧಿಗೆ ಸಬ್ಸಿಡಿ ನೀಡುವುದಕ್ಕೆ ಅನುಮತಿ ನೀಡಿದೆ. ಆದರೆ ಇದಕ್ಕೆ ರಾಜ್ಯಪಾಲರು ಸಹಿಹಾಕಿಲ್ಲ ಎಂದು ಆತಿಷಿ ಕಿಡಿಕಾರಿದ್ದಾರೆ.