Advertisement

ದೆಹಲಿಯಲ್ಲಿ ತೀವ್ರ ವಿದ್ಯುತ್‌ ಮುಗ್ಗಟ್ಟು:

06:46 PM Oct 09, 2021 | |

ನವದೆಹಲಿ: ಟಾಟಾ ಪವರ್‌ ದೆಹಲಿ ಡಿಸ್ಟ್ರಿಬ್ಯೂಷನ್‌ ಲಿಮಿಟೆಡ್‌ ಕಂಪನಿಯು ತನ್ನ ಗ್ರಾಹಕರಿಗೆ ಅಕ್ಟೋಬರ್ 9 ಶನಿವಾರ  ಫೋನ್‌ ಮೆಸೇಜ್‌ ಒಂದನ್ನು ಕಳುಹಿಸಿ, ತಾಂತ್ರಿಕ ದೋಷ ಮತ್ತು ವಿದ್ಯುತ್‌ನ ಅಭಾವ ಉಂಟಾಗಿದ್ದು ಮಧ್ಯಾಹ್ನದ ನಂತರ ದೆಹಲಿಯ ಎಲ್ಲಾ ಗ್ರಾಹಕರು ವಿವೇಚನೆಯಿಂದ ವಿದ್ಯುತ್‌ ಬಳಸುವಂತೆ ಮನವಿ ಮಾಡಿತ್ತು.

Advertisement

ಪವರ್‌ ಡಿಸ್ಕಾಮ್‌ ಟಾಟಾ ಪವರ್‌ ಡಿಡಿಎಲ್‌ ಸಿಇಒ ಗಣೇಶ್‌ ಶ್ರೀನಿವಾಸ್‌ ಪ್ರಕಾರ ವಿದ್ಯತ್‌ ಉತ್ಪಾದಕ ಕಚ್ಚಾ ವಸ್ತುವಾದ ಕೋಲ್‌ನ ಕೊರತೆಯನ್ನು ದೇಶ ಎದುರಿಸುತ್ತಿದೆ. ಈ ಕಾರಣದಿಂದಾಗಿ ದೆಹಲಿ ಮತ್ತು ದೇಶದ ಕೆಲ ಪ್ರದೇಶಗಳಲ್ಲಿ ಅಕಾಲಿಕ ಮತ್ತು ಪುನರಾವರ್ತಿತ ರೀತಿಯಲ್ಲಿ‌ ವಿದ್ಯುತ್ ಲೋಡ್‌ ಶೆಡ್ಡಿಂಗ್‌ ಎದುರಿಸುವ ಸಾಧ್ಯತೆಗಳಿವೆ ಎಂದರು.

ಇದನ್ನೂ ಓದಿ;- ಕೆಲಸವನ್ನು ದೇವರ ಸೇವೆ ಎಂದು ಮಾಡಬೇಕು

20 ದಿನಗಳ ಬದಲಾಗಿ 1 ರಿಂದ ಎರಡು ದಿನಕ್ಕೆ ಬೇಕಾದಷ್ಟು ಕೋಲ್‌ ಮಾತ್ರ ಸಂಗ್ರಹವಿದೆ. ದೇಶದ ಇತರ ಕೋಲ್‌ ಆಧಾರಿತ ವಿದ್ಯುತ್‌ ಉತ್ಪಾದಕ ಘಟಕಗಳು ಮುಂದಿನ ದಿನಗಳಲ್ಲಿ ಈ ಸಮಸ್ಯೆಗಳನ್ನು ಎದುರಿಸ ಬೇಕಾಗುತ್ತವೆ ಎಂದು ಅಭಿಪ್ರಾಯ ಪಟ್ಟರು. ಈ ಸಮಸ್ಯೆಗಳನ್ನು ಕೇಂದ್ರ ಸರ್ಕಾರ ಮತ್ತು ಆಯಾ ಸಂಸ್ಥೆಗಳು ತಕ್ಷಣ ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದರು. ಮಧ್ಯಾಹ್ನ 2 ರಿಂದ 6ರ ವರೆಗೆ ಹೆಚ್ಚಿನ ಲೋಡ್‌ ಶೇಡ್ಡಿಂಗ್‌ ದೆಹಲಿ ಜನತೆ ಎದುರಿಸಬೇಕಾಗುತ್ತವೆ ಎಂದು ತಿಳಿಸಿದರು.

ಉಳಿದ ವಿದ್ಯುತ್‌ ಉತ್ಪಾದಕ ಕಂಪನಿಗಳಾದ ದೆಲ್ಲಿ ಇನ್ಪ್ರಾಸ್ಟ್ರಕ್ಚರ್‌ ಲಿಮಿಟೆಡ್‌, ಬಿಆರ್‌ಪಿಎಲ್‌ ಹಾಗು  ಬಿವೈಪಿಎಲ್‌ ಈ ಕಂಪನಿಗಳು ಕೂಡ ಇಂತಹ ಸಮಸ್ಯೆಗಳನ್ನು ಏದುರಿಸುತ್ತಿದ್ದು ಶೀಘ್ರದಲ್ಲಿಯೇ ಲೋಡ್‌ ಶೇಡ್ಡಿಂಗ್‌ ಬಗ್ಗೆ ಘೋಷಿಸುವ ಸಾಧ್ಯತೆಗಳಿವೆ. ದೇಶದ ಇತರ ಭಾಗದ ಜನರೂ ಕೂಡ ಈ ಸಮಸ್ಯೆಗಳನ್ನುಎದುರಿಸುವ ದಿನ ದೂರವಿಲ್ಲ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next