Advertisement

Electricity; ಮೇನಲ್ಲಿ ವಿದ್ಯುತ್‌ ಬಳಕೆ ಪ್ರಮಾಣ ಅಲ್ಪ ಏರಿಕೆ

08:46 PM Jun 01, 2023 | Team Udayavani |

ನವದೆಹಲಿ: ಮೇ ತಿಂಗಳಲ್ಲಿ ಸಾಮಾನ್ಯವಾಗಿ ಏರಿಕೆಯಾಗುತ್ತಿದ್ದ ವಿದ್ಯುತ್‌ ಬಳಕೆ ಪ್ರಮಾಣ ಈ ಬಾರಿ ಕೇವಲ ಶೇ.1.4ರ ಏರಿಕೆಯೊಂದಿಗೆ 136.56 ದಶಲಕ್ಷ ಯೂನಿಟ್‌ಗಳಷ್ಟು ಮಾತ್ರ ಬಳಕೆಯಾಗಿದೆ.

Advertisement

ಈ ಮೂಲಕ ಅಲ್ಪಪ್ರಮಾಣದ ಏರಿಕೆಯನ್ನಷ್ಟೇ ದಾಖಲಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಳೆದವರ್ಷ ಇದೇ ಅವಧಿಯಲ್ಲಿ ವಿದ್ಯುತ್‌ ಬಳಕೆ ಪ್ರಮಾಣ 135.15 ದಶಲಕ್ಷ ಯೂನಿಟ್‌ ಹಾಗೂ 2021ರ ಮೇನಲ್ಲಿ 108.80 ದಶಲಕ್ಷ ಯೂನಿಟ್‌ಗಳಷ್ಟಿತ್ತು.

ವರ್ಷದಿಂದ ವರ್ಷಕ್ಕೆ ತಾಪಮಾನ ಏರಿಕೆಯಾಗುತ್ತಿರುವುದರ ಹಿನ್ನೆಲೆ ಈ ಬಾರಿ ಬೇಸಿಗೆಯಲ್ಲಿ 229 ಗಿಗಾವ್ಯಾಟ್‌ ವಿದ್ಯುತ್‌ ಬಳಕೆಯಾಗಬಹುದೆಂದು ನಿರೀಕ್ಷಿಸಲಾಗಿತ್ತು.

ಆದರೆ, ಈ ಬಾರಿ ಬೇಸಿಗೆಯಲ್ಲಿ ಅಕಾಲಿಕ ಮಳೆಯಾಗಿರುವುದರಿಂದ ಜನರು ಕೂಲಿಂಗ್‌ ಅಪ್ಲೆ„ನ್ಸಸ್‌ಗಳನ್ನು ಆದಷ್ಟು ಕಡಿಮೆ ಪ್ರಮಾಣದಲ್ಲಿ ವಿದ್ಯುತ್‌ ಬಳಕೆ ಮಾಡಿದ್ದಾರೆ.

ಈ ಹಿನ್ನೆಲೆ ವಿದ್ಯುತ್‌ ಬಳಕೆ ಕೂಡ ಕಡಿಮೆಯಾಗಿದೆ. ಇನ್ನು ಮಾರ್ಚ್‌ ಹಾಗೂ ಏಪ್ರಿಲ್‌ನಲ್ಲಿಯೂ ಅಕಾಲಿಕ ಮಳೆಯಾಗಿರುವ ಹಿನ್ನೆಲೆ ವಿದ್ಯುತ್‌ ಬಳಕೆ ಮೇಲೆ ಪರಿಣಾಮ ಬೀರಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Advertisement

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next