Advertisement
ಪಟ್ಟಣದ ಬುತ್ತಿ ಬಸವೇಶ್ವರ ನಗರದ ಪೊಲೀಸ್ ಠಾಣೆಯ ಹಿಂಭಾಗದ ಮಹಾಂತ ನಿವಾಸದಲ್ಲಿ ಸಿ.ಎಂ. ಹಿರೇಮಠ ಅವರು ಸ್ನಾನ ಮಾಡುವ ಸಂದರ್ಭ ಏಕಾಏಕಿ ದಟ್ಟ ಹೊಗೆ ಕಾಣಿಸಿಕೊಂಡಿದೆ. ಇದರಿಂದ ಗಾಬರಿಗೊಂಡ ಸಿಎಂ ಹಿರೇಮಠ ಕುಟುಂಬದವರು ಹೊರಗೆ ದೌಡಾಯಿಸಿದ್ದಾರೆ.
Related Articles
Advertisement
ನೋಡು ನೋಡುತ್ತಿದ್ದಂತೆ ಇಡೀ ಮನೆಯೊಳಗಿನಿಂದ ಹೊಗೆ ದಟ್ಟವಾಗಿ ಆವರಿಸಿದೆ. ಸ್ಥಳೀಯರು ಬಕೆಟ್, ಕೊಡಗಳಿಂದ ಬೆಂಕಿ ನಂದಿಸುವ ಹರಸಹಾಸಕ್ಕಿಳಿದರು. ದಟ್ಟ ಹೊಗೆಯಿಂದ ನಿಯಂತ್ರಣ ಸಾದ್ಯವಾಗಲಿಲ್ಲ, ನಂತರ ಕುಷ್ಟಗಿ ಅಗ್ನಿ ಶಾಮಕ ವಾಹನದ ಮೂಲಕ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದ್ದರಿಂದ ಬೆಂಕಿ ನಿಯಂತ್ರಿಸಲು ಸಾಧ್ಯವಾಯಿತು.
ಡ್ರಿಪ್ ಬಂಡಲ್, ಟಿವಿ, ಫ್ರಿಡ್ಜ್, ಪೀಠೋಪಕರಣ ಸಾಮಾಗ್ರಿ, ದಾಖಲೆಗಳು ಸುಟ್ಟು ಕರಕಲಾಗಿದ್ದು, ಸೇರಿದಂತೆ 1 ಕೋಟಿಗೂ ಅಧಿಕ ಹಾನಿ ಅಂದಾಜಿಸಲಾಗಿದೆ. ಅಲ್ಮೆರಾದಲ್ಲಿದ್ದ ನಗದು, ಬೆಳ್ಳಿ ಬಂಗಾರಕ್ಕೆ ಏನೂ ಆಗಿಲ್ಲ.
ಘಟನಾ ಸ್ಥಳಕ್ಕೆ ಸಿಪಿಐ ಯಶವಂತ ಬಿಸನಳ್ಳಿ, ಕ್ರೈಂ ಪಿಎಸೈ ಮಾನಪ್ಪ ವಾಲ್ಮೀಕಿ ಭೇಟಿ ನೀಡಿ ಪರಿಶೀಲಿಸಿದ್ದಾರೆ.