Advertisement

ನಿಲುವಾಗಿಲು ಕೊಪ್ಪಲಿಗೆ ವಿದ್ಯುತ್‌ ಸಂಪರ್ಕ

03:27 PM Apr 07, 2020 | Suhan S |

ಹುಣಸೂರು: ಪ್ರಧಾನಿ ಕೋವಿಡ್ 19 ತಡೆಗಾಗಿ ದೀಪ ಬೆಳಗಿಸುವಂತೆ ಕರೆ ನೀಡಿದ್ದರು. ಅದೇ ದಿನ ದಲಿತ ಕಾಲೋನಿಯ ಮನೆಗಳಿಗೆ ಜ್ಯೋತಿ ಪ್ರಜ್ವಲಿಸಿದ್ದರಿಂದ ಇಲ್ಲಿನ ಕುಟುಂಬಗಳು ಸಂತಸಗೊಂಡಿದ್ದರು.

Advertisement

ನಿಲುವಾಗಿಲು ಕೊಪ್ಪಲಿನಲ್ಲಿ ಹಲವು ವರ್ಷಗಳಿಂದ ವಿದ್ಯುತ್‌ ಸಂಪರ್ಕವಿಲ್ಲದೆ ಪರಿತಪಿಸುತ್ತಿದ್ದ ಕುಟುಂಬದ ಮನೆಗಳಲ್ಲಿ ಶಾಸಕ ಎಚ್‌.ಪಿ.ಮಂಜುನಾಥ್‌ ಸ್ವಿಚ್‌ ಆನ್‌ ಮಾಡಿ ಜ್ಯೋತಿ ಪ್ರಜ್ವಲಿಸುವಂತೆ ಮಾಡಿ ದರು.ಈ ಕಾಲೋನಿ ಜನರು ವಿದ್ಯುತ್‌ ಸಂಪರ್ಕಕ್ಕಾಗಿ ಶಾಸಕರಲ್ಲಿ ಮನವಿ ಮಾಡಿದ್ದರು. ಚೆಸ್ಕಾಂ ಅಧಿಕಾರಿ ಗಳಿಗೆ ಸೂಚಿಸಿ, ಕಾಲೋನಿಯಲ್ಲಿ 9 ವಿದ್ಯುತ್‌ ಕಂಬಗಳನ್ನು ಅಳವಡಿಸಿ, ಹೊಸ ಲೈನ್‌ ಎಳೆದು, ಆರು ಮನೆ ಗಳಿಗೆ ವೈರಿಂಗ್‌ ಮಾಡಿಸಿ, ವಿದ್ಯುತ್‌ ಸಂಪರ್ಕ ಕಲ್ಪಿಸಿದ್ದಾರೆ.

ಬಹುದಿನದ ಬೇಡಿಕೆಯನ್ನು ಒಂದೇ ದಿನದಲ್ಲಿ ವಿದ್ಯುತ್‌ ಸಂಪರ್ಕ ಕಲ್ಪಿಸಲು ಶ್ರಮವಹಿಸಿದ ಚೆಸ್ಕಾಂ ಕಾರ್ಯ ನಿರ್ವಾಹಕ ಇಂಜಿನಿಯರ್‌ ಸುನಿಲ್‌ ಕುಮಾರ್‌, ಎ.ಇ.ಇ.ಸಿದ್ದಪ್ಪ, ಇಂಜಿನಿಯರ್‌ ಮಂಜುನಾಥ್‌, ಸಿಬ್ಬಂದಿ ಕಾರ್ಯವನ್ನು ಮೆಚ್ಚಿ, ಎಲ್ಲ ಮನೆಗಳಿಗೂ ವಿದ್ಯುತ್‌ ಸಂಪರ್ಕ ನೀಡುವಂತೆ ಅಧಿಕಾರಿಗಳಿಗೆ ಶಾಸಕ ಮಂಜುನಾಥ್‌ ಸೂಚಿಸಿದರು.ಈ ವೇಳೆ ಜಿಪಂ ಸದಸ್ಯೆ ಡಾ.ಪುಷ್ಪಾ ಅಮರ್‌ನಾಥ್‌, ನಗರಸಭೆ ಸದಸ್ಯ ಕೋಳಿಮಂಜು ಹಾಗೂ ಮುಖಂಡರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next