Advertisement

ಪ್ರವಾಸಿಗರಿಗೆ ಎಲೆಕ್ಟ್ರಿಕ್‌ ವಾಹನಗಳ ಸೇವೆ

12:17 PM Nov 15, 2017 | Team Udayavani |

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿಗೆ ಪ್ರತಿನಿತ್ಯವೂ ಆಗಮಿಸುವ ಪ್ರವಾಸಿಗರ ಅನುಕೂಲಕ್ಕಾಗಿ ಮಹೀಂದ್ರ ಎಲೆಕ್ಟ್ರಿಕ್‌ ಮತ್ತು ಝೂಂಕಾರ್‌ನಿಂದ ಎಲೆಕ್ಟ್ರಿಕ್‌ ವಾಹನಗಳ ಸೇವೆಗೆ ಜಿಲ್ಲಾಧಿಕಾರಿ ಡಿ.ರಂದೀಪ್‌ ಮಂಗಳವಾರ ಚಾಲನೆ ನೀಡಿದರು.

Advertisement

ಈಗಾಗಲೇ ಟ್ರಿಣ್‌ ಟ್ರಿಣ್‌ ಸೈಕಲ್‌ ಸೇವೆ ಮೂಲಕ ದೇಶದ ಗಮನ ಸೆಳೆದಿರುವ ಮೈಸೂರಿನಲ್ಲಿ ಮಹೀಂದ್ರ ಎಲೆಕ್ಟ್ರಿಕ್‌ ಮತ್ತು ಝೂಂ ಕಾರ್‌ನಿಂದ ಎಲೆಕ್ಟ್ರಿಕ್‌ ವಾಹನಗಳ ಸೇವೆ ಆರಂಭಿಸಲಾಗಿದೆ. ನೂತನ ಸೇವೆಯಲ್ಲಿ ಮಹೀಂದ್ರ ಕಂಪನಿಯ 20 ಇ29-ಪ್ಲಸ್‌ ವಾಹನಗಳು ನಗರದಲ್ಲಿ ಸಂಚರಿಸಲಿದ್ದು, ಮೈಸೂರಿಗರು ಮತ್ತು ನಗರಕ್ಕಾಗಮಿಸುವ ಪ್ರವಾಸಿಗರು ಬಾಡಿಗೆಗೆ ಪಡೆಯಬಹುದು.

ಝೂಂಕಾರ್‌ ಸಂಸ್ಥೆ ಸಹ ಸಂಸ್ಥಾಪಕ ಗ್ರೆಗ್‌ ಮೋರಾನ್‌, 2013ರಲ್ಲಿ ಝೂಂಕಾರ್‌ ಮೊದಲ ಬಾರಿಗೆ ಎಲೆಕ್ಟ್ರಿಕ್‌ ವಾಹನ ಪರಿಚಯಿಸಿದ್ದು, ಇದೀಗ ಸಾರ್ವಜನಿಕ ಬಳಕೆಯಂತಹ ಹಲವಾರು ಉಪಕ್ರಮ ಕೈಗೊಂಡಿರುವ ಮೈಸೂರಿನಲ್ಲಿ ಪರಿಚಯಿಸಲಾಗಿದೆ. ಸ್ವತ್ಛ ಮತ್ತು ಹಸಿರು ನಗರವನ್ನಾಗಿ ಮಾಡುವ ನಿಟ್ಟಿನಲ್ಲಿ ಅತ್ಯುತ್ತಮ ದರ್ಜೆಯ ಚಾರ್ಜಿಂಗ್‌ ಸೌಲಭ್ಯ ಕಲ್ಪಿಸಿದ್ದು ಆಸಕ್ತರು ನಗರದ ಕಂಟ್ರಿ ಇನ್‌ ಮತ್ತು ಗರುಡಾಮಾಲ್‌ನಲ್ಲಿ ಪಡೆಯಬಹುದಾಗಿದೆ.

ಇದಕ್ಕಾಗಿ ಎರಡೂ ಕಡೆಗಳಲ್ಲಿ ಪಾಸ್ಟ್‌ ಚಾರ್ಜಿಂಗ್‌ ಘಟಕಗಳನ್ನು ಸ್ಥಾಪಿಸಲಾಗಿದೆ. ಈ ಎರಡೂ ಕಡೆಗಳಲ್ಲಿ ಗ್ರಾಹಕರು ತಮ್ಮ ಎಲೆಕ್ಟ್ರಿಕ್‌ ವಾಹನಗಳಿಗೆ ಚಾರ್ಜ್‌ ಮಾಡಿಕೊಳ್ಳಬಹುದಾಗಿದೆ. ಅಲ್ಲದೇ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ಸ್ಥಳಗಳಲ್ಲಿ ಚಾರ್ಜಿಂಗ್‌ ಪಾಯಿಂಟ್‌ ಆರಂಭಿಸುವ ಉದ್ದೇಶವಿದ್ದು, ಇದೇ ಮಾದರಿಯ ಸೌಲಭ್ಯಗಳನ್ನು ಚಂಡೀಘಡ, ದೆಹಲಿ ಮತ್ತು ಹೈದ್ರಾಬಾದ್‌ ನಗರಗಳಲ್ಲೂ ಆರಂಭಿಸುವ ಉದ್ದೇಶ ಹೊಂದಲಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next