ನವದೆಹಲಿ: 2021ರ ಡಿಸೆಂಬರ್‌ನಲ್ಲಿ ಕರ್ನಾಟಕದಲ್ಲಿ ಶೇ.9ರಷ್ಟು ವಿದ್ಯುತ್ ವಾಹನಗಳ ನೋಂದಣಿಯಾಗಿದೆ. ಈ ಬಗ್ಗೆ ಜೆಎಂಕೆ ರಿಸರ್ಚ್ ಆ್ಯಂಡ್ ಅನಾಲಿಟಿಕ್ಸ್ ನಡೆಸಿದ ಅಧ್ಯಯನದಲ್ಲಿ ದೃಢಪಟ್ಟಿದೆ.
ಉತ್ತರ ಪ್ರದೇಶದಲ್ಲಿ ಶೇ.23ರಷ್ಟು ಅಂದರೆ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ನೋಂದಣಿಯಾಗಿದೆ.
ಮಹಾರಾಷ್ಟ್ರದಲ್ಲಿ ಶೇ.13, ರಾಜಸ್ಥಾನ ಶೇ.8, ದೆಹಲಿ ಮತ್ತು ರಾಜಸ್ಥಾನ ತಲಾ ಶೇ.7ರಷ್ಟು ವಾಹನಗಳು ನೋಂದಣಿಯಾಗಿದೆ.
ಇನ್ನು ದೇಶವ್ಯಾಪಿ ಬಗ್ಗೆ ಹೇಳುವುದಿದ್ದರೆ 2021ರ ಡಿಸೆಂಬರ್‌ನಲ್ಲಿ ಶೇ.240 ಏರಿಕೆಯಾಗಿದೆ ಎಂದು ನಡೆಸಿದ ಅಧ್ಯಯನದಲ್ಲಿ ಅಭಿಪ್ರಾಯಪಡಲಾಗಿದೆ.
Related Articles
ಕಳೆದ ತಿಂಗಳಲ್ಲಿ ದೇಶದಲ್ಲಿ 50,866 ವಿದ್ಯುತ್ ಚಾಲಿತ ವಾಹನಗಳು ಮಾರಾಟವಾಗಿವೆ. 2020ರ ಡಿಸೆಂಬರ್ ಮತ್ತು 2021ರ ಡಿಸೆಂಬರ್‌ಗೆ ಹೋಲಿಕೆ ಮಾಡಿದರೆ ಒಟ್ಟಾರೆ ಮಾರಾಟ ಪ್ರಮಾಣ ಹೆಚ್ಚಾಗಿದೆ.
ಇದನ್ನೂ ಓದಿ:ನಿಷೇಧಾಜ್ಞೆ ಹೇರಿದರೆ ಇಬ್ಬರೇ ನಡೆಯುತ್ತೇವೆ: ಡಿಕೆಶಿ ತಿರುಗೇಟು
ನವೆಂಬರ್ 2021ರಲ್ಲಿ ಶೇ.21ರಷ್ಟು ವಿದ್ಯುತ್ ವಾಹನಗಳ ಸಂಖ್ಯೆ ಹೆಚ್ಚಾಗಿದೆ. ಅಂದರೆ 42,055 ವಾಹನಗಳು ಮಾರಾಟವಾಗಿವೆ ಎಂದು ವರದಿಯಲ್ಲಿ ಅಭಿಪ್ರಾಯಪಡಲಾಗಿದೆ.
2021ರ ಡಿಸೆಂಬರ್‌ನಲ್ಲಿ ದ್ವಿಚಕ್ರ, ತ್ರಿಚಕ್ರ ವಾಹನಗಳ ನೋಂದಣಿ ಶೇ.90.3 ಆಗಿದೆ.