Advertisement
ಈಜುಕೊಳ ಅಪಾರ್ಟ್‌ಮೆಂಟ್‌ನ ಕೊನೆಯ ಮಹಡಿಯ ರೂಫ್ನಲ್ಲಿದ್ದು, ಅದರ ಮೇಲೇ ಹೈಟೆನ್ಷನ್ ವಿದ್ಯುತ್ ಲೈನ್ಹಾದುಹೋಗಿದೆ. ಈಜುಕೊಳ ಸ್ವತ್ಛಗೊಳಿಸಲು ಉಮೇಶ್ ಕಬ್ಬಿಣದ ಹಿಡಿಕೆಯಿರುವ ಉಪಕರಣ ಬಳಸಿದ್ದರು. ಒಂದು ಹಂತದಲ್ಲಿ ಕೈಲಿದ್ದ ಪಕರಣವನ್ನು ಉಮೇಶ್ ಮೇಲಕ್ಕೆತ್ತಿದ್ದು, ಅದು ಹೈಟೆನ್ಷನ್ ವೈರ್‌ಗೆ ತಗುಲಿದೆ. ತಕ್ಷಣ ಉಮೇಶ್ ಮೈಯ್ಯಲ್ಲಿ ವಿದ್ಯುತ್ ಪ್ರವಹಿಸಿದೆ. ಪರಿಣಾಮ ಮುಖ, ಹೊಟ್ಟೆ, ತೊಡೆ ಸೇರಿದಂತೆ ದೇಹದ ಬಹುತೇಕ ಭಾಗದಲ್ಲಿ ಸುಟ್ಟ ಗಾಯಗಳಾಗಿವೆ.
ಹೈಟೆನ್ಷನ್ ವಿದ್ಯುತ್ ತಂತಿಗೆ ಉಮೇಶ್ ಕೈಲಿದ್ದ ಕಬ್ಬಿಣದ ಹಿಡಿಕೆಯ ಉಪಕರಣ ತಗುಲಿದೆ. ಪರಿಣಾಮ ಮೊದಲೇ ನೀರಿನಲ್ಲಿ ನಿಂತಿದ್ದ ಉಮೇಶ್ ಮೈಯ್ಯಲ್ಲಿ ವಿದ್ಯುತ್ ಪ್ರವಹಿಸಿದೆ. ಉಮೇಶ್ ಮೈಮೇಲಿದ್ದ ಬಟ್ಟೆಗಳು ಹರಿದು ಚಿಂದಿಯಾಗಿವೆ. ದೇಹದ ಬಹುತೇಕ ಭಾಗ ಸುಟ್ಟುಹೋಗಿದೆ. ಕೂಡಲೆ ನೆರವಿಗೆ ಬಂದ ಅಪಾರ್ಟ್‌ಮೆಂಟ್ ನಿವಾಸಿಗಳು, ಉಮೆಶ್‌ನನ್ನು ವೈಟ್‌ಫೀಲ್ಡ್‌ನ ವೈದೇಹಿ ಆಸ್ಪತ್ರೆಗೆ ದಾಖಲಿಸಿದ್ದಾರೆ. 45 ಪ್ಲ್ಯಾಟ್‌ಗಳಿರುವ ಎಸ್‌ಎಲ್‌ವಿ ಸನ್‌ಶೈನ್ ಅಪಾರ್ಟ್‌ಮೆಂಟ್‌ನಲ್ಲಿ 35 ಕುಟುಂಬಗಳು ವಾಸಿವಾಗಿವೆ. ನಿಯಮ ಉಲ್ಲಂ ಸಿ ಹೈಟೆನ್ಷನ್ ಲೈನ್‌ನ ಕೆಳಗೇ ಸಮುತ್ಛಯ ನಿರ್ಮಿಸಿರುವುದರಿಂದ ನಿವಾಸಿಗಳು ಭಯದಲ್ಲೇ ದಿನ ದೂಡುತ್ತಿದ್ದಾರೆ. ಲೈನ್ ತೆರವಿಗೆ ಅಥವಾ ಅದರಿಂದಾಗುವ ಅಪಾಯ ತಡೆಯಲು ಕ್ರಮ ಕೈಗೊಳ್ಳಿ ಎಂದು ಹೇಳಿದರೂ ಕಟ್ಟಡ ಮಾಲೀಕ ಕಿವಿ ಮೇಲೆ ಹಾಕಿಕೊಳ್ಳುತ್ತಿಲ್ಲ ಎಂದು ನಿವಾಸಿಗಳು ದೂರಿದ್ದಾರೆ.
Related Articles
ಪೂಲ್‌ನಿಂದ ಕೈಗೆಟುಕುವ ಅಂತರದಲ್ಲಿ ಹಾದು ಹೋಗಿರುವ ಹೈಟೆನ್ಷನ್ ಲೈನ್ ಮಹದೇವಪುರದ ಎಸ್‌ಎಲ್‌ವಿ ಸನ್‌ಶೈನ್ ಅಪಾರ್ಟ್‌ಮೆಂಟ್ ನಲ್ಲಿ ಘಟನೆ.
Advertisement