Advertisement

ವಿಟ್ಲ ಕೊಳ್ನಾಡು: ಗಾಳಿ ಮಳೆಗೆ ಧರೆಗುರುಳಿದ ಏಳು ವಿದ್ಯುತ್ ಕಂಬಗಳು, ಸಂಚಾರ ಅಸ್ತವ್ಯಸ್ಥ

02:10 PM Aug 04, 2020 | keerthan |

ವಿಟ್ಲ: ಕೊಳ್ನಾಡು ಗ್ರಾಮದ ಕರೈಯಲ್ಲಿ ಮಂಗಳವಾರ ಬೆಳಗ್ಗೆ ಬೀಸಿದ ಭಾರೀ ಗಾಳಿ ಮಳೆಗೆ ಹಲವಾರು ಬೃಹತ್ ಮರಗಳು ವಿದ್ಯುತ್ ಕಂಬಗಳ ಮೇಲೆ ಬಿದ್ದು, ಹಲವು ಕಂಬಗಳು ಹಾಗೂ ಮರಗಳು ಉರುಳಿದ ಪರಿಣಾಮ ಸಂಚಾರಕ್ಕೆ ತೊಡಕಾಯಿತು.

Advertisement

ರಸ್ತೆ ಬದಿಯಲ್ಲಿರುವ ಮರಗಳು ವಿದ್ಯುತ್ ತಂತಿಯ ಮೇಲೆ ಉರುಳಿ ಬಿದ್ದಿದೆ. ಪರಿಣಾಮ ಏಳು ವಿದ್ಯುತ್ ಕಂಬಗಳು ಧರಾಶಾಯಿಯಾಗಿದೆ. ಇದರಿಂದ ವಿಟ್ಲ-ಸಾಲೆತ್ತೂರು ರಸ್ತೆಯಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿತ್ತು. ವಿಟ್ಲದಿಂದ ಸಾಲೆತ್ತೂರು, ಮುಡಿಪು, ದೇರಳಕಟ್ಟೆ ಕಡೆಗಳಿಗೆ ತೆರಳುವ ವಾಹನಗಳು ಸಾಲುಗಟ್ಟಿ ನಿಂತ ಘಟನೆ ನಡೆಯಿತು.

ಕೂಡಲೇ ಕಾರ್ಯಪ್ರವೃತ್ತರಾದ ಊರಿನ ನಾಗರಿಕರು, ಮರ ತುಂಡರಿಸುವ ಮಾಡುವ ಯಂತ್ರಗಳೊಂದಿಗೆ ಸತತ 1 ಗಂಟೆಗಳ ಪರಿಶ್ರಮದಿಂದ ಕಾರ್ಯಾಚರಣೆ ಯಶಸ್ವಿಯಾಗಿ ಪೂರ್ತಿಗೊಂಡಿದೆ.

ಘಟನಾ ಸ್ಥಳದಲ್ಲಿ ಸಾಮಾಜಿಕ ಕಾರ್ಯಕರ್ತ ಎಚ್.ಎಂ. ಖಾಲೀದ್ ಕೊಳ್ನಾಡು, ಅರೀಪ್ ಕರೈ,ಅಸೀಪ್ ಕರೈ,ಕರೀಂ ಬುರಾಕ್, ಸಂಶುದ್ದೀನ್, ಮುಸ್ತಫಾ, ರಝಕ್, ಅಸೀಕ್, ಹಾರೀಶ್, ಮೊದಲಾದ ಪ್ರಮುಖರು ರಸ್ತೆ ಸುಗಮ ಸಂಚಾರಕ್ಕೆ ಸಹಕರಿಸಿದ್ದರು.

Advertisement

ಸ್ಥಳಕ್ಕೆ ಮೆಸ್ಕಾಂ ಶಾಖಾಧಿಕಾರಿ ಪ್ರಸನ್ನ ಅವರು ಸಕಾಲದಲ್ಲಿ ಭೇಟಿ ನೀಡಿ ರಸ್ತೆ ತೆರವುಗೊಳಿಸಲು ಮಾರ್ಗದರ್ಶನ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next