ಚಿಂಚೋಳಿ: ತಾಲೂಕಿನಲ್ಲಿ ಗುಣಮಟ್ಟದ ವಿದ್ಯುತ್ಗಾಗಿ ಮತ್ತು ವಿದ್ಯುತ್ಗೆ ಸಂಬಂ ಧಿಸಿದಂತೆ ಅವಘಡಗಳನ್ನು ಸೂಕ್ತವಾಗಿ ನಿರ್ವಹಿಸುವ ದೃಷ್ಟಿಯಿಂದ ವಿದ್ಯುತ್ ಪರಿವರ್ತಕಗಳನ್ನು ಸುರಕ್ಷಿತವಾಗಿ ಇಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಚಿಂಚೋಳಿ ಜೆಸ್ಕಾಂ ಉಪ-ವಿಭಾಗದ ಎಇಇ ಉಮೇಶ ಗೋಳಾ ತಿಳಿಸಿದ್ದಾರೆ.
ಗುಲಬರ್ಗಾ ವಿದ್ಯುತ್ ಸರಬರಾಜು ಕಂಪನಿಯ ಕಾರ್ಯ ಮತ್ತು ಪಾಲನಾ ಉಪ-ವಿಭಾಗದಲ್ಲಿ ಬರುವ ವಿದ್ಯುತ್ ಪರಿವರ್ತಕಗಳ ಸುರಕ್ಷಾ ಅಭಿಯಾನಕ್ಕೆ ಚಾಲನೆ ನೀಡಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಸಾರ್ವಜನಿಕರು, ಪಾದಚಾರಿಗಳು ಓಡಾಡುವ ರಸ್ತೆಯಲ್ಲಿ ಇರುವ ಪರಿವರ್ತಕಗಳನ್ನು ಬದಲಾಯಿಸುವುದು, ಗಿಡಗಂಟಿಗಳನ್ನು ಕಿತ್ತು ಶುಚಿಗೊಳಿಸುವುದು. ಹಳೆಯ ಅರ್ಥಿಂಗ್ ನವೀಕರಿಸುವ ಕಾರ್ಯ ಪ್ರಾರಂಭಿಸಲಾಗಿದೆ. ಈಗಾಗಲೇ ಎಲ್ಲ ವಿದ್ಯುತ್ ಪರಿವರ್ತಕಗಳನ್ನು ನಿರ್ವಹಿಸಲಾಗಿದೆ. ವಿದ್ಯುತ್ ಪರಿವರ್ತಕಗಳ ಸುತ್ತ ಕಸ ಎಸೆಯಬಾರದು, ದನಕರು, ಮಕ್ಕಳು ಪರಿವರ್ತಕ ಬಳಿ ಹೋಗದಂತೆ ಪಾಲಕರು ಎಚ್ಚರಿಕೆ ವಹಿಸಬೇಕು ಎಂದು ಹೇಳಿದರು.
ಜೆಸ್ಕಾಂ ಸಿಬ್ಬಂದಿಗಳಾದ ರಾಜಕುಮಾರ ಶೇರಿಕಾರ, ಪ್ರಭಾರ ಶಾಖಾ ಧಿಕಾರಿ ಸೈಯದ್ ಸಿದ್ಧಿಕಿ, ಶರಣಪ್ಪ ಕೊಡದಾಳ, ಮಂಜುನಾಥ, ಚಂದ್ರಶೇಖರ, ಹಣಮಪ್ಪ, ನಾರಾಯಣ, ಶ್ರೀಕಾಂತ, ಸುರೇಶ, ಸೋಮಶೇಖರ, ಶ್ರೀಶೈಲ, ಅಂಕುಶ ಇದ್ದರು.