Advertisement

ಚಾ.ನಗರ: 8.4 ಲಕ್ಷ ಮತದಾರರು

02:47 PM Jan 07, 2023 | Team Udayavani |

ಚಾಮರಾಜನಗರ: ಭಾವಚಿತ್ರವಿರುವ ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಸಂಬಂಧ ಜ. 5ರಂದು ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದ್ದು, ಇದರ ಪ್ರಕಾರ ಜಿಲ್ಲೆಯಲ್ಲಿ 8,42,496 ಮತದಾರರಿದ್ದಾರೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಎಸ್‌. ಕಾತ್ಯಾಯಿನಿದೇವಿ ತಿಳಿಸಿದರು.

Advertisement

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಿನಾಂಕ: 01.01.2023ಕ್ಕೆ ಅರ್ಹತಾ ದಿನಾಂಕ ನಿಗದಿಪಡಿಸಿ ಭಾವಚಿತ್ರವಿರುವ ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಸಂಬಂಧ ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದೆ.

ಜಿಲ್ಲೆಯಲ್ಲಿ ಒಟ್ಟು 982 ಮತಗಟ್ಟೆಗಳಿವೆ. ಕರಡು ಮತದಾರರ ಪಟ್ಟಿಯಲ್ಲಿ 8,34,872 ಮತದಾರರಿದ್ದರು. ಹೆಚ್ಚುವರಿ ಮತದಾರರ ಸಂಖ್ಯೆ 7624 ಇದ್ದು ಅಂತಿಮ ಮತದಾರರ ಪಟ್ಟಿಯಲ್ಲಿ 8,42,496 ಮತದಾರರಿದ್ದಾರೆ ಎಂದರು.

ಪುನರ್‌ ವಿಂಗಡಣೆ ನಂತರ 253 ಮತಗಟ್ಟೆ: ಹನೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮತಗಟ್ಟೆಗಳ ಪುನರ್‌ ವಿಂಗಡಣೆ ಪೂರ್ವದಲ್ಲಿ 247 ಮತಗಟ್ಟೆಗಳಿದ್ದವು. ಪುನರ್‌ ವಿಂಗಡಣೆ ನಂತರ 253 ಮತಗಟ್ಟೆಗಳಿವೆ. ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮತಗಟ್ಟೆಗಳ ಪುನರ್‌ ವಿಂಗಡಣೆ ಪೂರ್ವದಲ್ಲಿ 243 ಮತ ಗಟ್ಟೆಗಳಿದ್ದವು. ಪುನರ್‌ ವಿಂಗಡಣೆ ನಂತರ 241 ಮತಗಟ್ಟೆಗಳಿವೆ. ಚಾಮರಾಜನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮತಗಟ್ಟೆಗಳ ಪುನರ್‌ ವಿಂಗಡಣೆ ಪೂರ್ವದಲ್ಲಿ 239 ಮತಗಟ್ಟೆಗಳಿದ್ದವು. ಪುನರ್‌ ವಿಂಗಡಣೆ ನಂತರ 239 ಮತಗಟ್ಟೆ ಗಳಿವೆ. ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮತಗಟ್ಟೆಗಳ ಪುನರ್‌ ವಿಂಗಡಣೆ ಪೂರ್ವದಲ್ಲಿ 251 ಮತಗಟ್ಟೆಗಳಿದ್ದವು. ಪುನರ್‌ ವಿಂಗಡಣೆ ನಂತರ 249 ಮತಗಟ್ಟೆಗಳಿವೆ ಎಂದು ವಿವರಿಸಿದರು.

ಅಂತಿಮ ಮತದಾರರ ಪಟ್ಟಿಯಲ್ಲಿ 2,14,597 ಮತದಾರರು: ಹನೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕರಡು ಮತದಾರರ ಪಟ್ಟಿಯಲ್ಲಿ 2,12,091 ಮತದಾರರಿದ್ದು, 2,506 ಹೆಚ್ಚುವರಿ ಮತದಾರರ ಸಂಖ್ಯೆಯಿದ್ದು, ಅಂತಿಮ ಮತದಾರರ ಪಟ್ಟಿಯಲ್ಲಿ 2,14,597 ಮತದಾರ ರಿದ್ದಾರೆ. ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕರಡು ಮತದಾರರ ಪಟ್ಟಿ ಯಲ್ಲಿ 2,11,134 ಮತದಾರರಿದ್ದು, 947 ಹೆಚ್ಚುವರಿ ಮತದಾರರ ಸಂಖ್ಯೆಯಿದ್ದು, ಅಂತಿಮ ಮತದಾರರ ಪಟ್ಟಿಯಲ್ಲಿ 2,12,081 ಮತದಾರರಿದ್ದಾರೆ. ಚಾಮರಾಜನಗರ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕರಡು ಮತದಾರರ ಪಟ್ಟಿಯಲ್ಲಿ 2,03,507 ಮತದಾರರಿದ್ದು, 1,869 ಹೆಚ್ಚುವರಿ ಮತದಾರರ ಸಂಖ್ಯೆಯಿದ್ದು, ಅಂತಿಮ ಮತದಾರರ ಪಟ್ಟಿಯಲ್ಲಿ 2,05,376 ಮತದಾರರಿದ್ದಾರೆ. ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕರಡು ಮತದಾರರ ಪಟ್ಟಿಯಲ್ಲಿ 2,08,140 ಮತದಾರರಿದ್ದು, 2302 ಹೆಚ್ಚುವರಿ ಮತದಾರರ ಸಂಖ್ಯೆಯಿದ್ದು, ಅಂತಿಮ ಮತದಾರರ ಪಟ್ಟಿಯಲ್ಲಿ 2,10,442 ಮತದಾರರಿದ್ದಾರೆ.

Advertisement

ಟೋಲ್‌ಫ್ರೀ ಸಂಖ್ಯೆ 1950ಕ್ಕೆ ಕರೆ ಮಾಡಿ : ಮತದಾರರ ಪಟ್ಟಿಯಲ್ಲಿ ಕೈಬಿಟ್ಟುಹೋಗಿರುವ ಮತದಾರರು ಮತ್ತು 18 ವರ್ಷ ಹಾಗೂ ಮೇಲ್ಪಟ್ಟ ಯುವ ಮತದಾರರ ಹೆಸರುಗಳನ್ನು ನಿರಂತರ ಪರಿಷ್ಕರಣೆ ಅವಧಿಯಲ್ಲಿ ಅರ್ಜಿ ಪಡೆದು, ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಲು ಕ್ರಮ ಕೈಗೊಳ್ಳಲಾಗುತ್ತದೆ. ಚುನಾವಣಾ ವಿಷಯಗಳಿಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಯವರ ಕಚೇರಿಯಲ್ಲಿ ಸ್ಥಾಪಿಸಲಾಗಿರುವ ಟೋಲ್‌‌ ಫ್ರೀ ಸಂಖ್ಯೆ 1950 ಅನ್ನು ಹಾಗೂ ಉಪ ವಿಭಾಗಾಧಿಕಾರಿಗಳ ಕಚೇರಿ ಮತ್ತು ಆಯಾ ತಾಲೂಕು ತಹಶೀಲ್ದಾರ್‌ ಕಚೇರಿಯಲ್ಲಿ ಸಂಪರ್ಕಿಸಿ ಮಾಹಿತಿ ಪಡೆಯಬಹುದಾಗಿದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಎಸ್‌. ಕಾತ್ಯಾಯಿನಿದೇವಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next