Advertisement

ನಗರ ಸ್ಥಳೀಯ ಸಂಸ್ಥೆಗಳ 11 ವಾರ್ಡ್‌ಗಳಿಗೆ ಚುನಾವಣೆ: ರಾಜ್ಯ ಚುನಾವಣಾ ಆಯೊಗ

08:56 PM Apr 29, 2022 | Team Udayavani |

ಬೆಂಗಳೂರು:ರಾಜ್ಯದ ಹಲವು ನಗರ ಸ್ಥಳೀಯ ಸಂಸ್ಥೆಗಳಲ್ಲಿ ವಿವಿಧ ಕಾರಣಗಳಿಗೆ ತೆರವುಗೊಂಡಿರುವ 11 ವಾರ್ಡ್‌ಗಳಿಗೆ ಮೇ 20 ರಂದು ಉಪ ಚುನಾವಣೆ ನಡೆಯಲಿದೆ.

Advertisement

ತುಮಕೂರು ಜಿಲ್ಲೆಯ ಶಿರಾ ನಗರಸಭೆಯ ಒಂದು ವಾರ್ಡ್‌, ಬೀದರ್‌ ಜಿಲ್ಲೆಯ ಬಸಲವಕಲ್ಯಾಣ ನಗರಸಭೆಯ ಒಂದು ವಾರ್ಡ್‌, ದಾವಣಗೆರೆ ಮಹಾನಗರ ಪಾಲಿಕೆಯ ಎರಡು ವಾರ್ಡ್‌, ಚೆನ್ನಗಿರಿ ಪುರಸಭೆಯ ಒಂದು ವಾರ್ಡ್‌, ಬೆಂಗಳೂರು ನಗರ ಜಿಲ್ಲೆಯ ಆನೇಕಲ್‌ ಪುರಸಭೆಯ ಮೂರು ವಾರ್ಡ್‌, ಹೊಳೇನರಸೀಪುರ, ಜೇವರ್ಗಿ, ಸಂಕೇಶ್ವರ ಪುರಸಭೆಗಳ ತಲಾ ಒಂದೊಂದು ವಾರ್ಡ್‌ 11 ವಾರ್ಡ್‌ಗಳಿಗೆ ರಾಜ್ಯ ಚುನಾವಣಾ ಆಯೊಗ ಚುನಾವಣೆ ಘೋಷಿಸಿದೆ.

ಮೇ 2 ರಂದು ಆಧಿಸೂಚನೆ ಹೊರಡಲಿದ್ದು ನಾಮಪತ್ರ ಸಲ್ಲಿಸಲು 9 ಕಡೆಯ ದಿನ. 10 ರಂದು ನಾಮಪತ್ರ ಪರಿಶೀಲನೆ, 11 ರಂದು ನಾಮಪತ್ರ ವಾಪಸ್‌ ಪಡೆಯಲು ಕಡೆಯ ದಿನ. ಮೇ 20 ರಂದು ಮತದಾನ ಮೇ.22 ರಂದು ಮತ ಎಣಿಕೆ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next