Advertisement

ಎಟಿಎಂ ನಗದು ಕೊರತೆಗೆ ಚುನಾವಣೆ ಕಾರಣ?

06:00 AM Apr 22, 2018 | |

ಬೆಂಗಳೂರು/ಹೊಸದಿಲ್ಲಿ: ಕರ್ನಾಟಕ ವಿಧಾನಸಭೆ ಚುನಾವಣೆಗೂ ದೇಶದ ವಿವಿಧ ಭಾಗಗಳಲ್ಲಿ ಉಂಟಾಗಿದ್ದ ಎಟಿಎಂಗಳಲ್ಲಿನ ನಗದು ಕೊರತೆಗೂ ಸಂಬಂಧ ಇರುವ ಅಂಶವನ್ನು ಕೇಂದ್ರೀಯ ನೇರ ತೆರಿಗೆಗಳ ಮಂಡಳಿ (ಸಿಬಿಡಿಟಿ) ಪತ್ತೆ ಹಚ್ಚಿದೆ. ಇದರ ಹೊರತಾಗಿಯೂ ಈ ಮಾಹಿತಿಯನ್ನು ಮತ್ತಷ್ಟು ಖಚಿತಪಡಿಸುವ ನಿಟ್ಟಿನಲ್ಲಿ ತನಿಖೆ ನಡೆಸುವಂತೆ ಆದಾಯ ತೆರಿಗೆ ಇಲಾಖೆಯ ಕರ್ನಾಟಕ ಮತ್ತು ಗೋವಾ ವಿಭಾಗಕ್ಕೆ ಸೂಚಿಸಿದೆ.

Advertisement

ಚುನಾವಣೆ ಪ್ರಕಟವಾದ ದಿನದಿಂದ (ಮಾ. 27) ಇದುವರೆಗೆ ಆದಾಯ ತೆರಿಗೆ ಇಲಾಖೆ 4.13 ಕೋಟಿ ರೂ. ನಗದನ್ನು ವಶ
ಪಡಿಸಿಕೊಂಡಿದೆ. ಈ ಪೈಕಿ 2 ಸಾವಿರ ರೂ. ಮತ್ತು 500 ರೂ. ಮುಖಬೆಲೆಯ ನೋಟುಗಳೇ ಶೇ.97ರಷ್ಟಿವೆ. ಜತೆಗೆ 1.32 ಕೋಟಿ ರೂ. ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಶನಿವಾರ ದಿಲ್ಲಿಯಲ್ಲಿ ಸಿಬಿಡಿಟಿ ಮಾಹಿತಿ ನೀಡಿದೆ.

ಬೆಂಗಳೂರಿನಲ್ಲೇ ಹೆಚ್ಚು 
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನಗದು ವಶಪಡಿಸಿಕೊಳ್ಳಲಾಗಿದ್ದರೂ ಈ ಪಟ್ಟಿಯಲ್ಲಿ ಬೆಂಗಳೂರು ನಗರ ಮೊದಲ ಸ್ಥಾನದಲ್ಲಿದೆ. ಅಲ್ಲಿ 2.17 ಕೋಟಿ ರೂ. ನಗದು ವಶಕ್ಕೆ ಪಡೆಯಲಾಗಿದೆ. ಬಳ್ಳಾರಿಯಲ್ಲಿ 55 ಲಕ್ಷ ರೂ. ವಶಪಡಿಸಿಕೊಳ್ಳುವ ಮೂಲಕ ಎರಡನೇ ಸ್ಥಾನದಲ್ಲಿದೆ. ಮತದಾರರಿಗೆ ನೀಡಲು ಉದ್ದೇಶಿಸ ಲಾಗಿತ್ತು ಎಂದು ಹೇಳಲಾಗಿರುವ 9.51 ಕೋಟಿ ರೂ. ಮೌಲ್ಯದ ವಿವಿಧ ಗೃಹೋಪ ಯೋಗಿ ವಸ್ತುಗಳನ್ನೂ ಐ.ಟಿ. ಇಲಾಖೆ ಪತ್ತೆಹಚ್ಚಿದೆ. ಅವುಗಳನ್ನು ಮೈಸೂರಿನ ಗೋದಾಮಿನಲ್ಲಿ ಇರಿಸಲಾಗಿತ್ತು. ಈ ಬಗ್ಗೆ ಮೈಸೂರು ಜಿಲ್ಲಾ ಚುನಾವಣಾಧಿಕಾರಿಯ ಗಮನಕ್ಕೆ ತಂದು, ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದು ಸಿಬಿಡಿಟಿ ಹೇಳಿದೆ.

ಗಸ್ತು ಬಿಗಿ 
ಕರ್ನಾಟಕದ ವಿವಿಧ ವಿಮಾನ ನಿಲ್ದಾಣಗಳ ಜತೆಗೆ, ಗೋವಾದ ಏರ್‌ಪೋರ್ಟ್‌ಗಳಲ್ಲಿಯೂ ತಪಾಸಣೆ ಬಿಗಿಗೊಳಿಸಲಾಗಿದೆ. ಜತೆಗೆ 24 ಗಂಟೆಗಳ ಕಾಲ ದೂರು ಸ್ವೀಕರಿಸುವ ವ್ಯವಸ್ಥೆಯನ್ನು ಆದಾಯ ತೆರಿಗೆ ಬೆಂಗಳೂರಿನಲ್ಲಿ ಮಾಡಿದೆ ಎಂದಿದೆ ಸಿಬಿಡಿಟಿ. ಆದಾಯ ತೆರಿಗೆ ಇಲಾಖೆ ಸಹಾಯವಾಣಿ ಕೇಂದ್ರ ಟೋಲ್‌ ಫ್ರೀ ನಂ.: 18004252115,
cleankarnatakaelection @incometax.gov.in

ಪತ್ತೆಯಾದ ಗಂಟು
4.13 ಕೋಟಿ ರೂ. ವಶಪಡಿಸಿಕೊಂಡ ಒಟ್ಟು  ನಗದು
4.52 ಕಿಲೋ ಗ್ರಾಂ ವಶಪಡಿಸಿಕೊಂಡ ಒಟ್ಟು  ಚಿನ್ನಾಭರಣ
1.32 ಕೋಟಿ ರೂ.ವಶಪಡಿಸಿಕೊಂಡ ಆಭರಣ ಮೌಲ್ಯ

Advertisement

ಹೆಚ್ಚು ನಗದು ವಶಪಡಿಸಿಕೊಂಡ ಸ್ಥಳಗಳು
2.17 ಕೋಟಿ ರೂ. ಬೆಂಗಳೂರು ನಗರ
55 ಲಕ್ಷ ರೂ. ಬಳ್ಳಾರಿ

Advertisement

Udayavani is now on Telegram. Click here to join our channel and stay updated with the latest news.

Next