Advertisement

ಚಿಕ್ಕಮಗಳೂರಲ್ಲಿ ಮಾಜಿ ದೋಸ್ತಿಗಳ ಕಾದಾಟ

05:08 PM Apr 30, 2023 | Team Udayavani |

ಚಿಕ್ಕಮಗಳೂರು:ಕಾಫಿನಾಡು ಚಿಕ್ಕಮಗಳೂರು ಕ್ಷೇತ್ರ ಈ ಬಾರಿ ಮಾಜಿ ಗೆಳೆಯ’ರ ಕದನದಿಂದ ಹೈವೋಲ್ಟೆಜ್‌ ಕ್ಷೇತ್ರಗಳಲ್ಲಿ ಒಂದಾಗಿದೆ.

Advertisement

ಸತತ ನಾಲ್ಕು ಬಾರಿ ಗೆಲುವು ಸಾಧಿ ಸಿ ವಿವಿಧ ಇಲಾಖೆ ಮಂತ್ರಿಯಾಗಿ ಸದ್ಯ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿರುವ ಸಿ.ಟಿ. ರವಿ ವಿರುದ್ಧ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಎಚ್‌.ಡಿ. ತಮ್ಮಯ್ಯ ಈ ಬಾರಿ ಸೆಡ್ಡು ಹೊಡೆದಿದ್ದು ಕಾಂಗ್ರೆಸ್‌ ಟಿಕೆಟ್‌ ಗಿಟ್ಟಿಸಿ ಪ್ರತಿಸ್ಪರ್ಧಿಯಾಗಿದ್ದಾರೆ. ಈ ಮಾಜಿ ದೋಸ್ತಿಗಳ ಕದನದಿಂದ ಚಿಕ್ಕಮಗಳೂರು ಕ್ಷೇತ್ರ ರಾಜ್ಯದ ಗಮನ ಸೆಳೆದಿದೆ.

ಕಾಂಗ್ರೆಸ್‌ನ ಸಗೀರ್‌ ಅಹಮದ್‌ ವಿರುದ್ಧ ಒಮ್ಮೆ ಸೋತಿರುವ ಸಿ.ಟಿ. ರವಿ ಬಳಿ ಮತ್ತೆಂದೂ ಸೋಲು ಸುಳಿದಿಲ್ಲ. ಈ ಬಾರಿ ಐದನೇ ಗೆಲುವಿನ ನಿರೀಕ್ಷೆಯಲ್ಲಿದ್ದು ಮಾಜಿ ಆಪ್ತನ ವಿರುದ್ಧ ಸೆಣಸಬೇಕಾಗಿದೆ. ಎಚ್‌.ಡಿ. ತಮ್ಮಯ್ಯ ಬಿಜೆಪಿ ಟಿಕೆಟ್‌ಗೆ ಬೇಡಿಕೆ ಇಟ್ಟಿದ್ದರು. ಆದರೆ, ಟಿಕೆಟ್‌ ಸಿಗುವ ಯಾವ ಲಕ್ಷಣವೂ ಕಾಣದ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಕದ ತಟ್ಟಿ ಕೊನೆಗೆ ಎಲ್ಲ ಆಕಾಂಕ್ಷಿಗಳನ್ನೂ ಹಿಂದಿಕ್ಕಿ ಟಿಕೆಟ್‌ ಗಿಟ್ಟಿಸುವಲ್ಲಿಯೂ ಯಶಸ್ವಿಯಾಗಿದ್ದು, ಆಪ್ತನ ವಿರುದ್ಧವೇ ತೊಡೆ ತಟ್ಟಿದ್ದಾರೆ.

ಮತ್ತೊಮ್ಮೆ ಗೆಲುವಿಗೆ ಪಣ:
ಸಿ.ಟಿ.ರವಿ ಗರಡಿಯಲ್ಲೇ ಪಳಗಿರುವ ಎಚ್‌.ಡಿ. ತಮ್ಮಯ್ಯ, ಸಿ.ಟಿ. ರವಿಯವರ ಚುನಾವಣಾ ಅಸ್ತ್ರಗಳನ್ನು ಕರಗತ ಮಾಡಿಕೊಂಡಿದ್ದು ಅವರ ವಿರುದ್ಧ ಪ್ರಯೋಗಕ್ಕೂ ಮುಂದಾಗಿದ್ದಾರೆ. ಸಿ.ಟಿ. ರವಿ ಒಕ್ಕಲಿಗ ಸಮುದಾಯವನ್ನು ಪ್ರತಿನಿಧಿ ಸುತ್ತಿದ್ದು, ಕ್ಷೇತ್ರದಲ್ಲಿ ಸಮುದಾಯದ ಪ್ರಾಬಲ್ಯ ಇಲ್ಲದಿದ್ದರೂ ತಮ್ಮ ಮಾತಿನ ಶೈಲಿಯಿಂದ ಎಲ್ಲರನ್ನೂ ಸೆಳೆದುಕೊಳ್ಳುವ ಶಕ್ತಿ ಪ್ರತಿ ಚುನಾವಣೆಯಲ್ಲೂ ಅವರಿಗೆ ವರವಾಗಿದೆ. ಐದು ಚುನಾವಣೆ ಎದುರಿಸಿರುವ ಅನುಭವ, ಕ್ಷೇತ್ರದಲ್ಲಿನ ಅಭಿವೃದ್ಧಿ ಕೆಲಸ, ಹಿಂದುತ್ವದ ಅಜೆಂಡಾ, ಪಕ್ಷ ಸಂಘಟನಾ ಶಕ್ತಿ ಈ ಚುನಾವಣೆಯಲ್ಲಿ ಕೈ ಹಿಡಿಯಲಿದೆ ಎಂಬ ವಿಶ್ವಾಸದಲ್ಲಿದ್ದಾರೆ. ಎರಡು ದಶಕಗಳಿಂದ ಶಾಸಕರಾಗಿರುವ ಸಿ.ಟಿ. ರವಿ, ಕ್ಷೇತ್ರದ ಅಭಿವೃದ್ಧಿಯಲ್ಲಿ ಸ್ವಲ್ಪ ಹಿನ್ನಡೆ ಸಾ ಧಿಸಿದ್ದು, ಅಲ್ಲದೇ ಸಮುದಾಯದ ಬಲ ಅಷ್ಟಾಗ ಇಲ್ಲದಿರುವುದು, ಕೆಲವೊಮ್ಮೆ ರಾಜ್ಯದ ಪ್ರಮುಖ ನಾಯಕರ ಬಗ್ಗೆ ಮಾತನಾಡಿದ್ದು, ಲಿಂಗಾಯತ ಶಾಸಕ ಕೂಗು ಕ್ಷೇತ್ರದಲ್ಲಿ ಎದ್ದಿರುವುದು ಸಿ.ಟಿ. ರವಿಗೆ ಹಿನ್ನಡೆಯಾಗಬಲ್ಲವು ಎನ್ನಲಾಗುತ್ತಿದೆ.

ಚೊಚ್ಚಲ ಕದನ:
ಸಿ.ಟಿ. ರವಿ ಪ್ರತಿಸ್ಪರ್ಧಿಯಾಗಿರುವ ಎಚ್‌.ಡಿ. ತಮ್ಮಯ್ಯ ಪ್ರಬಲ ಲಿಂಗಾಯತ ಸಮುದಾಯ ಪ್ರತಿನಿಧಿ ಸುತ್ತಿದ್ದು, ಕಳೆದ ಮೂರು ದಶಕಗಳಿಂದ ಕ್ಷೇತ್ರದಲ್ಲಿ ಸಮುದಾಯದ ಶಾಸಕರು ಇಲ್ಲದಿರುವುದು, ಬಿಜೆಪಿಯಲ್ಲಿ ಟಿಕೆಟ್‌ ದಕ್ಕದಿರುವ ಅನುಕಂಪ, ಬದಲಾವಣೆ ಕೂಗು ಇವರಿಗೆ ಪ್ಲಸ್‌ ಆಗಲಿದೆ ಎಂಬ ಮಾತುಗಳು ಹರಿದಾಡುತ್ತಿವೆ.
ಎಚ್‌.ಡಿ. ತಮ್ಮಯ್ಯ ಬಿಜೆಪಿಯಲ್ಲಿ ಪಳಗಿದ್ದು, ಟಿಕೆಟ್‌ಗಾಗಿಯೇ ಕಾಂಗ್ರೆಸ್‌ಗೆ ವಲಸೆ ಬಂದವರು ಎಂಬ ಹಣೆಪಟ್ಟಿ ಇದೆ. ಇದೇ ಮೊದಲ ಬಾರಿ ವಿಧಾನಸಭೆ ಚುನಾವಣೆ ಕಣಕ್ಕಿಳಿದಿದ್ದು, ಅನುಭವದ ಕೊರತೆ ಮತ್ತು ಸಿ.ಟಿ. ರವಿ ಚುನಾವಣೆ ತಂತ್ರಗಾರಿಕೆ ತಡೆದುಕೊಳ್ಳುವ ಶಕ್ತಿ. ಕಾಂಗ್ರೆಸ್‌ ಕಾರ್ಯಕರ್ತರನ್ನು ಒಗ್ಗೂಡಿಸುವುದು ಹಾಗೂ ಲಿಂಗಾಯತ ಸಮುದಾಯದ ಮತಗಳನ್ನು ಸೆಳೆಯುವ ದೊಡ್ಡ ಸವಾಲು ಇವರ ಮುಂದಿದೆ.

Advertisement

ಜೆಡಿಎಸ್‌ನಿಂದ ಬಿ.ಎಂ. ತಿಮ್ಮಶೆಟ್ಟಿ ಕಣದಲ್ಲಿದ್ದರೂ ಇಬ್ಬರಿಗೂ ಭಾರೀ ಸ್ಪರ್ಧೆಯೊಡ್ಡುವ ಯಾವ ಲಕ್ಷಣಗಳೂ ಕಾಣುತ್ತಿಲ್ಲ. ಜೆಡಿಎಸ್‌ ಮುಖಂಡ ಎಸ್‌.ಎಲ್‌. ಭೋಜೇಗೌಡ ಕಾಂಗ್ರೆಸ್‌ಗೆ ಮತ ನೀಡುವಂತೆ ಮನವಿ ಮಾಡಿದ್ದು, ಜೆಡಿಎಸ್‌ಗೆ ದೊಡ್ಡ ಆಘಾತ ನೀಡಿರುವುದಲ್ಲದೆ, ಕಾಂಗ್ರೆಸ್‌ಗೆ ಪ್ಲಸ್‌ ಆಗಲಿದೆ. ಜೆಡಿಎಸ್‌ ಕಣದಲ್ಲಿದ್ದರೂ ಲೆಕ್ಕಕಿಲ್ಲದಂತಾಗಿದೆ. ಹೀಗಾಗಿ ಒಂದು ಕಾಲದ ಆಪ್ತರಿಬ್ಬರ ಹೋರಾಟಕ್ಕೆ ಅಖಾಡಾ ಸಿದ್ಧವಾಗಿದೆ.

ಜಾತಿ ಲೆಕ್ಕಾಚಾರ
ಲಿಂಗಾಯತರು-35,000
ಕುರುಬ-27,000
ಒಕ್ಕಲಿಗ-15,000
ಮುಸ್ಲಿಂ-20,000
ಬ್ರಾಹ್ಮಣ-5,000
ಎಸ್‌ಸಿ, ಎಸ್‌ಟಿ-50,000
ಇತರೆ-40,000

2018ರ ಫಲಿತಾಂಶ
ಸಿ.ಟಿ.ರವಿ (ಬಿಜೆಪಿ)-70,863
ಬಿ.ಎಲ್‌. ಶಂಕರ್‌ (ಕಾಂಗ್ರೆಸ್‌)-44549
ಬಿ.ಎಚ್‌. ಹರೀಶ್‌ (ಜೆಡಿಎಸ್‌)-38,317

28ಸಿಕೆಎಂ1
ಸಿ.ಟಿ.ರವಿ
28ಸಿಕೆಎಂ1ಎ
ಎಚ್‌.ಡಿ.ತಮ್ಮಯ್ಯ
28ಸಿಕೆಎಂ1ಬಿ
ಬಿ.ಎಂ.ತಿಮ್ಮಶೆಟ್ಟಿ

-ಸಂದೀಪ ಜಿ.ಎನ್‌. ಶೇಡ್ಗಾರ್‌

Advertisement

Udayavani is now on Telegram. Click here to join our channel and stay updated with the latest news.

Next