Advertisement

ಹೊದಲ –ಅರಳಾಪುರ ಗ್ರಾಮ ಪಂಚಾಯತ್ ನೂತನ ಉಪಾಧ್ಯಕ್ಷರಾಗಿ ಮಲ್ಲಿಕಾ ರಾಘವೇಂದ್ರ ಅವಿರೋಧ ಆಯ್ಕೆ

04:50 PM Sep 16, 2022 | Kavyashree |

ತೀರ್ಥಹಳ್ಳಿ: ಹೊದಲ ಅರಳಾಪುರ ಗ್ರಾಮ ಪಂಚಾಯತಿ ಕಛೇರಿಯಲ್ಲಿ  ಮೌಖಿಕ ಒಪ್ಪಂದದಂತೆ ಅನಿತಾ ಶ್ರೀದರ್ ಅವರಿಂದ ತೆರವಾದ ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ತೀರ್ಥಹಳ್ಳಿ ಗ್ರಾಮಾಂತರ ಕ್ಷೇತ್ರದಿಂದ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗ್ರಾಮ ಪಂಚಾಯತ್ ಸದಸ್ಯರಾಗಿ ಆಯ್ಕೆಯಾಗಿದ್ದ ಮಲ್ಲಿಕಾ ರಾಘವೇಂದ್ರ ಅವರು ಇಂದು‌ (ಸೆ.16) ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

Advertisement

ಚುನಾವಣಾಧಿಕಾರಿಯಾಗಿ ಕಾರ್ಯಪಾಲಕ ಅಭಿಯಂತರ ಅಣ್ಣಪ್ಪ ಚುನಾವಣಾ ಪ್ರಕ್ರಿಯೆಯನ್ನು ನೆರವೇರಿಸಿ, ಮಲ್ಲಿಕಾ ರಾಘವೇಂದ್ರ ಅವರೊಬ್ಬರೇ ಉಮೇದುವಾರಿಕೆ ಸಲ್ಲಿಸಿದ್ದರಿಂದ ಅವಿರೋಧ ಆಯ್ಕೆಯಾಗಿ ಮಲ್ಲಿಕಾ ರಾಘವೇಂದ್ರ ಅವರನ್ನು ಉಪಾಧ್ಯಕ್ಷರಾಗಿ ಘೋಷಣೆ ಮಾಡಿದರು.

ನಂತರ ನಡೆದ ಸಮಾರಂಭದಲ್ಲಿ ಮತನಾಡಿದ ಮಲ್ಲಿಕಾ ರಾಘವೇಂದ್ರ, ಸಭೆಯಲ್ಲಿ ಭಾಗವಹಿಸಿದ ಸರ್ವರಿಗೂ ಧನ್ಯವಾದಗಳನ್ನು ತಿಳಿಸಿ ಸರ್ವರ ಸಲಹೆ ಸಹಕಾರವನ್ನು ಬಯಸಿದರು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಅದ್ಯಕ್ಷೆ ಅಂಬಿಕಾ ಸಂತೋಷ್, ಸದಸ್ಯರಾದ ಕವಿತಾ ಶ್ರೀದರ್, ಅನಿತಾ ಶ್ರೀದರ್, ಹೊದಲ ದಿನೇಶ್, ಮಾಜಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಚಂದ್ರಶೇಖರ ಹೆಗ್ಡೆ, ವಿಶ್ವನಾಥ ಪ್ರಭು, ನಗರ ಬಿಜೆಪಿ ಯುವಮೋರ್ಚಾ ಅದ್ಯಕ್ಷ ಸಂತೋಷ್, ರಾಘವೇಂದ್ರ ಬದನೇಹಿತ್ಲು, ಆರ್ಯ ಈಡಿಗ ಸಮಾಜದ ನಿರ್ದೇಶಕರಾದ ತಲವಡಗ ಗಂಗಾಧರ್, ನಾಗಭೂಷಣ್ ಹೊದಲ, ಉದಯ ಆಚಾರ್ಯ, ಶ್ರೀದರ್ ಹುಣಿಸೇಬೈಲು, ಬದನೇಹಿತ್ಲು ನಾಗರಾಜ್, ಗಂಗಾಧರ ಇನ್ನಿತರ ಕಾರ್ಯಕರ್ತರು ಉಪಸ್ಥಿತರಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next