Advertisement
53 ಅಭ್ಯರ್ಥಿಗಳ ಭವಿಷ್ಯ ನಿರ್ಧಾರಬಿಜೆಪಿ – 20, ಕಾಂಗ್ರೆಸ್ – 20 ಅಭ್ಯರ್ಥಿಗಳು, ಎಸ್‌ಡಿಪಿಐ – 2, ಜೆಡಿಎಸ್ – 1 ಹಾಗೂ 10 ಪಕ್ಷೇತರರು ಕಣದಲ್ಲಿದ್ದಾರೆ. ಬಿಜೆಪಿಗೆ ಎರಡು ಕ್ಷೇತ್ರಗಳಲ್ಲಿ, ಕಾಂಗ್ರೆಸ್‌ಗೆ ಮೂರು ಕಡೆ ಬಂಡಾಯದ ಬಿಸಿ ಇದೆ. ಹೀಗಾಗಿ ಎರಡು ಪಕ್ಷಗಳ ಅಭ್ಯರ್ಥಿಗಳ ಸೋಲು ಗೆಲುವಿನ ಮೇಲೆ ಈ ಬಂಡಾಯ ಪರಿಣಾಮ ಬೀರುವ ಸಾಧ್ಯತೆ ಇದೆ. 20 ವಾರ್ಡ್‌ಗಳ ಪೈಕಿ 12ರಲ್ಲಿ ನೇರ, 2ರಲ್ಲಿ ತ್ರಿಕೋನ, 2ರಲ್ಲಿ ಚತುಷ್ಕೋನ, 1ರಲ್ಲಿ ಆರು ಸ್ಪರ್ಧಿಗಳು ಅಖಾಡದಲ್ಲಿದ್ದಾರೆ.
ಬೆಳಗ್ಗೆ 8ರಿಂದ ಎನ್‌ಎಂಸಿ ಕಾಲೇಜಿನ ಕೊಠಡಿಯಲ್ಲಿ ಎಣಿಕೆ ಪ್ರಕ್ರಿಯೆ ಆರಂಭ ಗೊಳ್ಳಲಿದೆ. ಎರಡು ಟೇಬಲ್ಗಳಲ್ಲಿ 10 ಸುತ್ತಿನಲ್ಲಿ ಮತ ಎಣಿಕೆ ನಡೆಯಲಿದೆ. ಎಲ್ಲ ಅಭ್ಯರ್ಥಿಗಳಿಗೆ, ಏಜೆಂಟರುಗಳಿಗೆ ಪ್ರತ್ಯೇಕ ಕೊಠಡಿ ನಿಗದಿಪಡಿಸಲಾಗಿದೆ. ಪ್ರಥಮ ಸುತ್ತಿನಲ್ಲಿ ಒಂದು ಟೇಬಲ್ನಲ್ಲಿ ವಾರ್ಡ್-1 ಮತ್ತು ಎರಡನೆ ಟೇಬಲ್ನಲ್ಲಿ ವಾರ್ಡ್ -11ರ ಎಣಿಕೆ ನಡೆಯುತ್ತದೆ. ಇದರ ಮತ ಎಣಿಕೆ ಮುಗಿದ ಬಳಿಕ ಎರಡನೆ ಸುತ್ತಿನ ಅಭ್ಯರ್ಥಿಗಳಿಗೆ ಎಣಿಕೆ ಕೊಠಡಿಗೆ ಪ್ರವೇಶಿಸಲು ಅವಕಾಶ ನೀಡಲಾಗುತ್ತದೆ. ಹೀಗೆ ಒಟ್ಟು ಹತ್ತು ಹಂತಗಳಲ್ಲಿ 20 ವಾರ್ಡ್ ಅಭ್ಯರ್ಥಿಗಳ ಫಲಿತಾಂಶ ಪ್ರಕಟವಾಗುತ್ತದೆ.
ಅಭ್ಯರ್ಥಿ, ಏಜೆಂಟ್ ಪಾಸ್ ಕಡ್ಡಾಯ
ಪ್ರತಿ ವಾರ್ಡ್‌ನಲ್ಲಿ ಅಭ್ಯರ್ಥಿ ಮತ್ತು ಏಜೆಂಟ್‌ಗಳಿಗೆ ಎಣಿಕೆ ಕೊಠಡಿಯೊಳಗೆ ಪ್ರವೇಶಕ್ಕೆ ಅವಕಾಶವಿದೆ. ಈ ಇಬ್ಬರು ಚುನಾವಣ ಆಯೋಗ ನೀಡಿದ ಪಾಸ್ ಕಡ್ಡಾಯವಾಗಿ ಹೊಂದಿರಬೇಕು. ಮತ ಎಣಿಕೆ ಬೆಳಗ್ಗೆ 8 ಗಂಟೆಗೆ ಆರಂಭಗೊಳ್ಳಲಿದ್ದು, ಅಭ್ಯರ್ಥಿ, ಏಜೆಂಟ್ 7.30ಕ್ಕೆ ಕೇಂದ್ರದಲ್ಲಿ ಹಾಜರಿರಬೇಕು. ಎಣಿಕೆ ಸಂದರ್ಭ ಮೂವರು ಅಧಿಕಾರಿಗಳು ಸಹಿತ ಆರ್‌ಒ ಮತ್ತು ಪಿಆರ್‌ಒಗಳು ಇರುತ್ತಾರೆ. ಆರಂಭದಲ್ಲಿ ಅಂಚೆ ಮತಗಳ ಎಣಿಕೆ ನಡೆದು, ಆ ಬಳಿಕ ಅಭ್ಯರ್ಥಿ ಸಮ್ಮುಖದಲ್ಲಿ ಇವಿಎಂ ಮತ ಯಂತ್ರ ತೆರೆದು ಎಣಿಕೆ ನಡೆಸಲಾಗುತ್ತದೆ.
Related Articles
ಎಣಿಕೆ ಕೇಂದ್ರದ ಸುತ್ತಕಿನ 100 ಮೀ. ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದೆ. ಪಾಸ್ ಹೊಂದಿರುವ ಅಭ್ಯರ್ಥಿ, ಏಜೆಂಟ್, ಮತಗಟ್ಟೆ ಅಧಿಕಾರಿಗಳನ್ನು ಹೊರತುಪಡಿಸಿ ಉಳಿದವರಿಗೆ ಪ್ರವೇಶ ಇರುವುದಿಲ್ಲ. ವಿಜಯೋತ್ಸವಕ್ಕೂ ಅವಕಾಶ ಇಲ್ಲ ಎಂದು ಚುನಾವಣಾಧಿಕಾರಿಗಳು ‘ಉದಯವಾಣಿ’ಗೆ ತಿಳಿಸಿದ್ದಾರೆ.
Advertisement
5ರಿಂದ 10 ನಿಮಿಷ ಸಾಕು ಇವಿಎಂ ಆಗಿರುವ ಕಾರಣ ಪ್ರತಿ ವಾರ್ಡ್‌ನ ಫಲಿತಾಂಶ ಕೇವಲ 5ರಿಂದ 10 ನಿಮಿಷಗಳಲ್ಲಿ ಪ್ರಕಟವಾಗಲಿದೆ. ಮತ ಎಣಿಕೆ ಕೇಂದ್ರಕ್ಕೆ ಪ್ರತಿ ಸುತ್ತಿನಲ್ಲಿ ಎರಡು ವಾರ್ಡ್ ಅಭ್ಯರ್ಥಿಗಳಿಗೆ ಮಾತ್ರ ಪ್ರವೇಶ ಇರಲಿದೆ. ಬೆಳಗ್ಗೆ 10.30ರಿಂದ 11 ಗಂಟೆಯೊಳಗೆ ಸ್ಪಷ್ಟ ಚಿತ್ರಣ ದೊರೆಯಲಿದೆ. ಪ್ರತಿ ಹತ್ತು ನಿಮಿಷಕೊಮ್ಮೆ ವಾರ್ಡ್‌ನ ಫಲಿತಾಂಶ ದೊರೆಯಲಿದೆ.