Advertisement

Election Result: ಜನತಾ ಜನಾರ್ದನನ ಪ್ರೀತಿಗೆ ನಾನು ತಲೆ ಬಾಗುವೆ: ಮೋದಿ

12:27 AM Jun 05, 2024 | Team Udayavani |

ಹೊಸದಿಲ್ಲಿ: ಸತತ ಮೂರನೇ ಬಾರಿಗೆ ದೇಶದ ಜನತೆ ಎನ್‌ಡಿಎ ಮೇಲೆ ನಂಬಿಕೆ ಇರಿಸಿದ್ದಾರೆ. 1962ರ ಬಳಿಕ ಇದೇ ಮೊದಲ ಬಾರಿಗೆ ಒಂದೇ ಸರಕಾರ ಮೂರನೇ ಬಾರಿಯೂ ಅಧಿಕಾರಕ್ಕೆ ಏರುತ್ತಿದೆ. “ಜನತಾ ಜನಾರ್ದನನ’ ಈ ಪ್ರೀತಿಗೆ ನಾನು ತಲೆಬಾಗುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

Advertisement

ಲೋಕಸಭೆ ಚುನಾವಣೆಯ ಫ‌ಲಿತಾಂಶ ಪ್ರಕಟವಾದ ಬೆನ್ನಲ್ಲೇ ಬಿಜೆಪಿ ಕೇಂದ್ರ ಕಚೇರಿಯಲ್ಲಿ ದೇಶವನ್ನುದ್ದೇಶಿಸಿ ಮೋದಿ ಮಾತನಾಡಿದರು. ಈ ವೇಳೆ “ಪ್ರಜಾಪ್ರಭುತ್ವದ ಈ ಗೆಲುವು ಸಂವಿಧಾನದ ಮೇಲಿನ ನಂಬಿಕೆಯನ್ನು ಸಾಬೀತು ಪಡಿಸಿದೆ. ಸಂವಿಧಾನವು ನಮ್ಮ ಪಾಲಿಗೆ ಮಾರ್ಗ ದರ್ಶನ ತೋರುವ ಬೆಳಕಾಗಿದೆ’ ಎಂದಿದ್ದಾರೆ. ಜತೆಗೆ ಮೂರನೇ ಅವಧಿಯಲ್ಲಿ ನಮ್ಮ ಸರಕಾರದ ಮಹತ್ತರ ನಿರ್ಧಾರಗಳ ಮೂಲಕ ಹೊಸ ಅಧ್ಯಾಯವನ್ನು ದೇಶ ಕಾಣಲಿದೆ. ಇದು ಮೋದಿಯ ಗ್ಯಾರಂಟಿ ಎಂದಿದ್ದಾರೆ.

ಕಳೆದ 10 ವರ್ಷಗಳಲ್ಲಿ ಜನರ ಆಶೋತ್ತರಗಳನ್ನು ಈಡೇರಿಸಲು ನಮ್ಮ ಸರಕಾರ ಮಾಡಿದ ಉತ್ತಮ ಕಾರ್ಯಗಳು ಮುಂದುವರಿಯಲಿದ್ದು, ಭ್ರಷ್ಟಾಚಾರದ ವಿರುದ್ಧದ ಹೋರಾಟ ಇನ್ನೂ ಕಠಿನಗೊಳಿಸುತ್ತೇವೆ. ಈ ಬಾರಿಯ ಅಧಿಕಾರಾವಧಿ ಸಂಪೂರ್ಣವಾಗಿ ಭ್ರಷ್ಟಾ ಚಾರವನ್ನು ಕಿತ್ತೂಗೆಯಲು ಬಳಕೆಯಾಗುತ್ತದೆ ಎಂದು ಭರವಸೆ ನೀಡಿದ್ದಾರೆ.

ಮೈತ್ರಿ ಪಕ್ಷಗಳಿಗೆ ಪಿಎಂ ಧನ್ಯವಾದ: ಎನ್‌ಡಿಎ ಗೆಲುವಿಗೆ ಶ್ರಮಿಸಿದ ಎಲ್ಲ ಮೈತ್ರಿ ಪಕ್ಷಗಳಿಗೂ ಪಿಎಂ ಧನ್ಯವಾದ ಹೇಳಿದ್ದಾರೆ. ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು, ಬಿಹಾರ ಸಿಎಂ ನಿತೀಶ್‌ ಕುಮಾರ್‌ ಅವರಿಗೂ ಧನ್ಯವಾದ ತಿಳಿಸಿದ್ದಾರೆ. ಇದೇ ವೇಳೆ ಒಡಿಶಾದ ಗೆಲುವಿನ  ಬಗ್ಗೆ ಮಾತನಾಡಿ,  ಅಲ್ಲಿನ ಜನತೆ ಉತ್ತಮ ಆಡಳಿತದ ಮೇಲೆ ನಂಬಿಕೆ ಇರಿಸಿ ಈ ಗೆಲುವನ್ನು ನೀಡಿದ್ದಾರೆ ಎಂದು ಪ್ರಶಂಸಿಸಿದ್ದಾರೆ. ಇದೇ ವೇಳೆ ಬಿಜೆಪಿ ಕಾರ್ಯಕರ್ತರ ಶ್ರಮವನ್ನೂ ಶ್ಲಾ ಸಿ ಧನ್ಯವಾದ ತಿಳಿಸಿದ್ದಾರೆ.

ಎಲ್ಲ ಒಟ್ಟಾದರೂ ಬಿಜೆಪಿಗೆ ಸಮವಾಗಲಿಲ್ಲ

Advertisement

ಬಿಜೆಪಿಯನ್ನು ಮಣಿಸಲು ವಿರೋಧಿಗಳೆಲ್ಲ ಒಟ್ಟುಗೂಡಿದರು. ಆದರೂ ಬಿಜೆಪಿ ಗೆದ್ದಷ್ಟು ಸ್ಥಾನಗಳನ್ನು ಅವರೆಲ್ಲರೂ ಒಟ್ಟಾಗಿಯೂ ಗೆಲ್ಲಲು ಸಾಧ್ಯವಾಗಲಿಲ್ಲ. ಇನ್ನು ಜಮ್ಮು-ಕಾಶ್ಮೀರದ ಲ್ಲಂತೂ ವಿಶ್ವದ ಮುಂದೆ ದೇಶದ ಮಾನಹಾನಿ ಮಾಡಲು ಯತ್ನಿಸುತ್ತಿದ್ದ ದೇಶ ವಿರೋಧಿಗಳಿಗೆ ಪ್ರಜೆಗಳು ಅವರ ಕೃತ್ಯಗಳ ಪ್ರತಿಬಿಂಬದ ಕನ್ನಡಿ ಯನ್ನು ತೋರಿದ್ದಾರೆ ಎಂದು ಮೋದಿ ಹೇಳಿದ್ದಾರೆ.

ಮೋದಿ ಹೇಳಿದ್ದು

ಮೂರನೇ ಅವಧಿ ಭ್ರಷ್ಟಾಚಾರ ಕಿತ್ತೂಗೆಯಲು ಮೀಸಲು

ಸಂವಿಧಾನವೇ ಅಭಿವೃದ್ಧಿಯ ಮಾರ್ಗತೋರುವ ಬೆಳಕು

ದೇಶವಿರೋಧಿಗಳಿಗೆ ಕನ್ನಡಿ ತೋರಿದ ಕಣಿವೆ ಜನರು

ವಿರೋಧಿಗಳು ಒಟ್ಟಾದರೂ ಬಿಜೆಪಿಗೆ ಸಮವಾಗಲಿಲ್ಲ

Advertisement

Udayavani is now on Telegram. Click here to join our channel and stay updated with the latest news.

Next