Advertisement

‌Election: ಒಕ್ಕಲಿಗ ಸಂಘದ ಚುನಾವಣೆ; ಡಿ.ಕೆ.ಶಿವಕುಮಾರ್ ಬಣ ಮೇಲುಗೈ

09:44 PM Dec 15, 2024 | Team Udayavani |

ಬೆಂಗಳೂರು: ರಾಜ್ಯ ಒಕ್ಕಲಿಗರ ಸಂಘದಲ್ಲಿ ಬಣ ರಾಜಕೀಯ ಜೋರಾಗಿದ್ದು ರವಿವಾರ ನಡೆದ ಸಂಘದ ಚುನಾವಣೆಯಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಬಣ ಅಧಿಕಾರದ ಚುಕ್ಕಾಣಿ ಹಿಡಿಯುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಬಣಕ್ಕೆ ಸೋಲಾಗಿದೆ.

Advertisement

ಮುಂದಿನ 24 ತಿಂಗಳಿಗೆ ರಾಜ್ಯ ಒಕ್ಕಲಿಗ ಸಂಘದ ಅಧ್ಯಕ್ಷರಾಗಿ ಡಿ.ಕೆ.ಶಿ. ಬೆಂಬಲಿತ ಬಣದ ಬಿ. ಕೆಂಚಪ್ಪಗೌಡ ಕಾರ್ಯ ನಿರ್ವಹಿಸಲಿದ್ದಾರೆ. ಎಚ್‌.ಡಿ.ಕೆ. ಬೆಂಬಲದೊಂದಿಗೆ ಸ್ಪರ್ಧಿಸಿದ್ದ ಡಾ| ಅಂಜಿನಪ್ಪ ಅವರು ಕೆಂಚಪ್ಪ ಗೌಡ ಅವರ ವಿರುದ್ಧ ಸೋಲನುಭವಿಸಿದರು.

ಎಲ್‌. ಶ್ರೀನಿವಾಸ್‌, ಡಾ| ರೇಣುಕಾಪ್ರಸಾದ್‌ ಕೆ.ವಿ. ಉಪಾಧ್ಯಕ್ಷರಾಗಿ, ಟಿ. ಕೋನಪ್ಪ ರೆಡ್ಡಿ ಪ್ರಧಾನ ಕಾರ್ಯದರ್ಶಿಯಾಗಿ ಆರ್‌. ಹನುಮಂತರಾಯಪ್ಪ ಸಹಾಯಕ ಕಾರ್ಯದರ್ಶಿಯಾಗಿ ಮತ್ತು ಎನ್‌. ಬಾಲಕೃಷ್ಣ (ನೆಲ್ಲಿಗೆರೆ ಬಾಲು) ಖಜಾಂಚಿಯಾಗಿ ಆಯ್ಕೆಯಾಗಿದ್ದಾರೆ.

3 ವರ್ಷದಲ್ಲಿ ಐವರು ಅಧ್ಯಕ್ಷರು!
ವಿಶೇಷ ಅಂದರೆ 3 ವರ್ಷಗಳ ಆಡಳಿತ ಅವಧಿಯಲ್ಲಿ ಸಂಘ 5 ಅಧ್ಯಕ್ಷರನ್ನು ಕಂಡಿದೆ. ಆರಂಭದಲ್ಲಿ ಬಿ. ಕೆಂಚಪ್ಪ ಗೌಡ ಅಧ್ಯಕ್ಷರಾಗಿದ್ದರು. ಅನಂತರ ಅವರನ್ನು ಕೆಳಗಿಸಿ ಜೆಡಿಎಸ್‌ ಶಾಸಕ ಸಿ.ಎನ್‌. ಬಾಲಕೃಷ್ಣ ಅಧ್ಯಕ್ಷರಾದರು. ಇದಾದ ಅನಂತರ ನಡೆದ ಬೆಳವಣಿಗೆಯಲ್ಲಿ ಬಾಲಕೃಷ್ಣ ಅವರನ್ನು ಕೆಳಗಿಳಿಸಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಬಣದಲ್ಲಿ ಗುರುತಿಸಿಕೊಂಡಿರುವ ಬೆಂಗಳೂರು ನಗರ ಜಿಲ್ಲಾ ಪಂಚಾಯತ್‌ನ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್‌ ಮುಖಂಡ ಡಿ. ಹನುಮಂತಯ್ಯ ಅವರು ಸಂಘದ ಅಧ್ಯಕ್ಷರಾಗಿ ಅವಿರೋಧ ಆಯ್ಕೆ ಆಗಿದ್ದರು. ಕೊನೆಯಲ್ಲಿ ನಡೆದ ಬಣರಾಜಕೀಯದಲ್ಲಿ ಜೆಡಿಎಸ್‌ನ ಸಿ.ಎನ್‌. ಬಾಲಕೃಷ್ಣ ಮತ್ತೆ ಅಧ್ಯಕ್ಷರಾಗಿ ಅಧಿಕಾರ ಚುಕ್ಕಾಣಿ ಹಿಡಿದ್ದರು.

Advertisement

Udayavani is now on Telegram. Click here to join our channel and stay updated with the latest news.