Advertisement

Assembly Election; ಸೆಪ್ಟೆಂಬರ್‌ನಲ್ಲಿ ಜಮ್ಮು-ಕಾಶ್ಮೀರ ಚುನಾವಣೆ: ಕೇಂದ್ರ ಸಚಿವ

12:46 AM Aug 06, 2024 | Team Udayavani |

ಆರ್‌ಎಸ್‌ ಪುರ: ಇದೇ ಸೆಪ್ಟಂಬರ್‌ನಲ್ಲಿ ಜಮ್ಮು-ಕಾಶ್ಮೀರ ವಿಧಾನಸಭೆ ಚುನಾ ವಣೆ ನಡೆಯಲಿದೆ ಎಂದು ಕೇಂದ್ರ ಸಚಿವ ಜಿ.ಕಿಶನ್‌ ರೆಡ್ಡಿ ಸೋಮವಾರ ಹೇಳಿದ್ದಾರೆ. ಈ ಮೂಲಕ ಕಣಿವೆ ರಾಜ್ಯ ದಲ್ಲಿ ಸದ್ಯ ದಲ್ಲೇ ಚುನಾವಣೆ ನಡೆಯುವುದು ಖಾತ್ರಿ ಯಾದಂತಾಗಿದೆ.

Advertisement

370ನೇ ವಿಧಿಯನ್ನು ರದ್ದುಗೊಳಿಸಿ 5 ವರ್ಷ ಪೂರ್ಣಗೊಂಡ ಹಿನ್ನೆಲೆ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಮಾತನಾ ಡಿ, “ಇದೇ ಸೆಪ್ಟಂಬರ್‌ನಲ್ಲಿ ಜಮ್ಮು -ಕಾಶ್ಮೀರ ವಿಧಾನ ಸಭೆ ಚುನಾವಣೆ ನಡೆಯಲಿದೆ. ಕೇಂದ್ರಾಡಳಿತ ಪ್ರದೇಶದ ಅಭಿವೃದ್ಧಿಯ ವೇಗವನ್ನು ಕಾಪಾಡಿಕೊ ಳ್ಳಲು ಹಾಗೂ ಭಯೋತ್ಪಾದನೆಯನ್ನು ಬೇರು ಸಹಿತ ಕಿತ್ತು ಹಾಕಲು ಮತದಾರರು ಬಿಜೆಪಿಯನ್ನು ಅಧಿಕಾರಕ್ಕೆ ತರಬೇಕು’ ಎಂದು ಮನವಿ ಮಾಡಿದ್ದಾರೆ.

ಜಮ್ಮು-ಕಾಶ್ಮೀರದಲ್ಲಿ ಬಿಜೆಪಿಯ ಚುನಾವಣ ಉಸ್ತುವಾರಿಯೂ ಆಗಿರುವ ಕಿಶನ್‌, 370ನೇ ವಿಧಿ ರದ್ದಾದ ಬಳಿಕ ಕಳೆದ 5 ವರ್ಷಗಳಲ್ಲಿ ಜಮ್ಮು ಕಾಶ್ಮೀರ ದಲ್ಲಿ ಪಾಕಿಸ್ಥಾನ ಹಾಗೂ ಅದರ ಗುಪ್ತಚರ ಸಂಸ್ಥೆ ಐಎಸ್‌ಐನ ಚಟುವಟಿಕೆ ಇಳಿಮುಖವಾಗಿವೆ ಎಂದೂ ಹೇಳಿದ್ದಾರೆ.

ಇದೇ ವೇಳೆ ಕಾಂಗ್ರೆಸ್‌, ಎನ್‌ಸಿ ವಿರುದ್ಧ ಟೀಕಾಪ್ರಹಾರ ನಡೆಸಿದ ರೆಡ್ಡಿ, ಪಾಕಿಸ್ಥಾನ ಬೆಂಬಲಿತ ಭಯೋತ್ಪಾದನೆ ಯ ಮೂಲಕ ಜಮ್ಮು-ಕಾಶ್ಮೀರದಲ್ಲಿ “ಸಾವು ಹಾಗೂ ವಿನಾಶ’ ತಂದೊಡ್ಡಿದ್ದ 370ನೇ ವಿಧಿಯನ್ನು ಮತ್ತೆ ಜಾರಿ ಮಾಡುವ ಬಗ್ಗೆ ವಿಪಕ್ಷಗಳು ಹೇಳುತ್ತಿವೆ. ಬಿಜೆಪಿ ಶಾಂತಿ ಸ್ಥಾಪನೆ ಹಾಗೂ ಅಭಿವೃದ್ಧಿ ಗಾಗಿ ಶ್ರಮಿಸುತ್ತಿದೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next