Advertisement
ಇದರಲ್ಲಿ ಹೊಸದೇನಿಲ್ಲ ಎಂದು ಪ್ರತಿಪಾದಿಸಿದರು. 1997ರಲ್ಲಿ ಮೊದಲ ಬಾರಿಗೆ ವಿಧಾನಸಭೆಗೆ ಬಂದ ನಾನು ದೇಶದಲ್ಲೇ ಅತಿ ದೊಡ್ಡದಾದ ಉತ್ತರಹಳ್ಳಿ ವಿಧಾನಸಭೆ ಕ್ಷೇತ್ರ ಪ್ರತಿನಿಧಿಸಿದ್ದೆ. ನಂತರ ಪದ್ಮನಾಭನಗರ ಕ್ಷೇತ್ರ ಕಾರ್ಯ ಕ್ಷೇತ್ರ ವಾಗಿದೆ. ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಪಕ್ಷ ಕಟ್ಟಲು ಶ್ರಮಿಸಿ ದ್ದೇನೆ. ಬಿಜೆಪಿಯ ಭದ್ರಕೋಟೆ ಮಾಡಿದ್ದೇನೆ. ರಾಜಕೀ ಯವಾಗಿ ಬಿಜೆಪಿ ನನಗೆ ಎಲ್ಲವನ್ನೂ ಕೊಟ್ಟಿದೆ ಎಂದರು.
Related Articles
Advertisement
ಇದನ್ನೂ ಓದಿ:- 29ರಿಂದ ಕರ್ನಾಟಕ ಸಾಂಸ್ಕೃತಿಕ ಉತ್ಸವ
ಸಂಚಾರಿ ಕಲಿಕಾ ಕೇಂದ್ರಕ್ಕೆ ಚಾಲನೆ
ಬೆಂಗಳೂರು: ಶಾಲಾ ಶಿಕ್ಷಣದಿಂದ ಹೊರಗುಳಿದ ಮಕ್ಕಳನ್ನು ಮುಖ್ಯವಾಹಿನಿಗೆ ತರಲು ಅನುಕೂಲವಾಗುವ ಮಕ್ಕಳ ಸ್ನೇಹಿ ಸಂಚಾರಿ ಕಲಿಕಾ ಕೇಂದ್ರಕ್ಕೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹಾಗೂ ಕಂದಾಯ ಸಚಿವ ಆರ್.ಅಶೋಕ್ ಚಾಲನೆ ನೀಡಿದರು.
ವಲಸಿಗರು, ಕೊಳೆಗೇರಿ ಪ್ರದೇಶಗಳ ಮಕ್ಕಳಿಗೆ ಅಕ್ಷರ ಜ್ಞಾನ ನೀಡುವ, ಶಾಲಾ ಶಿಕ್ಷಣದಿಂದ ಹೊರಗುಳಿದ ಮಕ್ಕಳನ್ನು ಮರಳಿ ಶಾಲೆಗೆ ಕರೆತರಲು ಅನುಕೂಲ ಆಗುವಂತೆ ಸರ್ಕಾರೇತರ ಸಂಸ್ಥೆ ಸೇವ್ ದಿ ಚಿಲ್ಡ್ರನ್‌ನ ಮಕ್ಕಳ ಸ್ನೇಹಿ ಕಲಿಕಾ ಕೇಂದ್ರಕ್ಕೆ ವಿಧಾನಸೌಧ ದಲ್ಲಿ ಶುಕ್ರವಾರ ಚಾಲನೆ ನೀಡಿ ಮಾತನಾಡಿದ ಸಚಿವ ಬಿ.ಸಿ.ನಾಗೇಶ್, ಕೌಟುಂಬಿಕ ಸಮಸ್ಯೆ ಸೇರಿದಂತೆ ನಾನಾ ಕಾರಣಕ್ಕೆ ಮಕ್ಕಳು ಶಾಲಾ ಶಿಕ್ಷಣದಿಂದ ಹೊರಗುಳಿಯುತ್ತಿರುವ ಮಕ್ಕ ಳನ್ನು ಗುರುತಿಸಿ ಶಾಲೆಗೆ ಸೇರಿಸಬೇಕು. ವಲಸಿ ಗರ ಮಕ್ಕಳಿಗೆ ಕಲಿಕಾ ಸಾಮಗ್ರಿ ಒದಗಿಸಿ, ಅಕ್ಷರ ಜ್ಞಾನ ನೀಡುವ ಪ್ರಯತ್ನ ಸೇವ್ ದಿ ಚಿಲ್ಡ್ರನ್ ಸಂಸ್ಥೆ ಮಾಡುತ್ತಿದೆ ಎಂದರು.
ಸಂಚಾರಿ ಕಲಿಕಾ ಕೇಂದ್ರ: ಸೇವ್ ದಿ ಚಿಲ್ಡ್ರನ್ ಮಕ್ಕಳಲ್ಲಿ ಕಲಿಕಾ ಜಾಗೃತಿ ಮಿನಿಬಸ್ ವ್ಯವಸ್ಥೆ ಮಾಡಿದ್ದು, ಈ ಬಸ್‌ನಲ್ಲಿ ಪಠ್ಯಪುಸ್ತಕಗಳು, ಕಥೆ ಪುಸ್ತಕಗಳು, ನೋಟ್ ಬುಕ್, ಗಣಿತ, ವಿಜ್ಞಾನ ಸೇರಿದಂತೆ ಇನ್ನಿತರ ವಿಷಯಗಳ ಕಲಿಕಾ ಸಾಮಗ್ರಿಗಳು ಇರುತ್ತವೆ. ಮಕ್ಕಳ ಹುಟ್ಟು ಹಬ್ಬವನ್ನು ಆಚರಿಸಲು ಕೂಡ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಬಡವರು, ಕೊಳೆಗೇರಿ ಮಕ್ಕಳು ನೆಲೆಸಿರುವ ನಗರದ 30 ಪ್ರದೇಶ ಗಳಿಗೆ ತೆರಳುವ ಈ ಮೂರು ಮಿನಿ ಬಸ್ ಗಳು ಮಕ್ಕಳ ವ್ಯಾಸಂಗಕ್ಕೆ ಅಗತ್ಯವಾದ ಕಲಿಕಾ ಸಾಮಗ್ರಿಗಳನ್ನು ಒದಗಿಸಿ ಅಕ್ಷರಜ್ಞಾನ ನೀಡ ಲಿವೆ.
ಜತೆಗೆ ವೈಯಕ್ತಿಕ ಸ್ವತ್ಛತೆ, ನೈರ್ಮಲ್ಯ ಸೇರಿ ಇನ್ನಿತರ ಆರೋಗ್ಯ ವಿಚಾರಗಳ ಕುರಿತಾ ಗಿಯು ಮಕ್ಕಳಿಗೆ ಮಾಹಿತಿ ನೀಡಲಿದೆ. ಶಾಸಕ ಹರೀಶ್ ಪೂಂಜಾ, ಸಾಮೂಹಿಕ ಶಕ್ತಿಯ ನಿರ್ದೇಶಕಿ ಲಕ್ಷ್ಮೀ ಪಟ್ಟಾಭಿರಾಮನ್, ಸೇವ್ ದಿ ಚಿಲ್ಡ್ರನ್ ಸಂಸ್ಥೆಯ ಸಿಇಒ ಸುದರ್ಶನ್ ಸುಚಿ ಇದ್ದರು.
ಮೋದಿ ಟೀಕಿಸದಿದ್ರೆ ಕಾಂಗ್ರೆಸ್‌ಗೆ ತಿಂದ ಅನ್ನ ಜೀರ್ಣವಾಗಲ್ಲ-
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸದಿದ್ದರೆ, ಕಾಂಗ್ರೆಸ್‌ನವರಿಗೆ ತಿಂದ ಅನ್ನ ಜೀರ್ಣವಾಗುವುದಿಲ್ಲ. ಸಿದ್ದರಾಮಯ್ಯನವರು ಮೋದಿ ಅವರನ್ನು ಇದೇ ರೀತಿ ಟೀಕಿಸುತ್ತಿದ್ದರೆ ಅವರಿಗೆ ಮತ್ತಷ್ಟು ಕಳೆ ಬರುತ್ತದೆ ಎಂದು ಕಂದಾಯ ಸಚಿವ ಆರ್. ಅಶೋಕ್ ವ್ಯಂಗ್ಯವಾಡಿದರು.
ನಗರದ ರಾಷ್ಟ್ರೀಯ ಮಿಲಿಟರಿ ಸ್ಮಾರಕದಲ್ಲಿ “ಸುದರ್ಶನ ಭಾರತ ಪರಿಕ್ರಮ’ ಶುಕ್ರವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿ ದ ಅವರು, ಯಾವುದನ್ನು ಟೀಕಿಸಬೇಕು ಎಂಬುದರ ಪರಿಜ್ಞಾನ ಕೂಡ ಅವರಿಗಿಲ್ಲ. ಒಳ್ಳೆಯ ಕೆಲಸ ಮಾಡಿದಾಗ ಒಳ್ಳೆಯ ರೀತಿ ಯಲ್ಲಿ ಮಾತನಾಡಬೇಕು ಎಂದರು.
100 ಕೋಟಿ ಲಸಿಕೆ ನೀಡಿರುವುದಕ್ಕೆ ವಿಶ್ವ ಆರೋಗ್ಯ ಸಂಸ್ಥೆಯೇ ಅಭಿನಂದನೆ ಸಲ್ಲಿಸು ತ್ತಿದೆ. ಆದರೂ ಕಾಂಗ್ರೆಸ್‌ನವರು ಟೀಕೆ ಮಾಡುತ್ತಾರೆ. ವಿಶ್ವ ಆರೋಗ್ಯ ಸಂಸ್ಥೆಯೇ ಅಭಿನಂದನೆ ಸಲ್ಲಿಸಿದ ಮೇಲೆ ಬೇರೆ ಯಾರೇ ಟೀಕೆ ಮಾಡಿದರೂ ಪ್ರಯೋಜನವಿಲ್ಲ ಎಂದು ಹೇಳಿದರು. ಇದೇ ವೇಳೆ ಹುತಾತ್ಮ ಯೋಧ ಸಂದೀಪ್ ಉನ್ನಿಕೃಷ್ಣನ್ ಅವರ ತಂದೆ -ತಾಯಿ, ಹಾಕಿ ಆಟಗಾರಿ ಎ.ಬಿ. ಸುಬ್ಬಯ್ಯ, ವಿ.ಆರ್. ರಘು ನಾಥ್, ಶೂಟಿಂಗ್ ಪದಕ ವಿಜೇತ ಪ್ರಕಾಶ್ ನಂಜಪ್ಪ, ಛಾಯಾಚಿತ್ರಕಾರ ಗಿರಿ ಕವಾಳೆ ಅವರನ್ನು ಸನ್ಮಾನಿಸಲಾಯಿತು. ಎನ್‌ಎಸ್‌ಜಿ ಮಹಾ ನಿರ್ದೇಶಕ ಎಂ.ಎ. ಗಣಪತಿ, ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್, ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಹಾಗೂ ಎನ್‌ಎಸ್‌ಜಿ ಕಮಾಂಡೋಗಳು ಇದ್ದರು.
ಮನೆ ಬಾಗಿಲಿಗೆ ಪಿಂಚಣಿ-
ರಾಜ್ಯ ಸರ್ಕಾರ ಪ್ರತಿ ವರ್ಷ ಸಾಮಾಜಿಕ ಯೋಜನೆ ಅಡಿಯಲ್ಲಿ ವೃದ್ಧಾಪ್ಯ, ವಿಧವಾ ವೇತನ, ಅಂಗವಿಕಲರ ಪಿಂಚಣಿ ಯೋಜನೆಗಳಿಗೆ 10 ಸಾವಿರ ಕೋಟಿ ರೂ. ವೆಚ್ಚ ಮಾಡುತ್ತಿದೆ. ಆದರೆ, ಇದುವರೆಗೂ ಈ ಹಣ ಫಲಾನುಭವಿಗಳ ಕೈಗೆ ಸಿಗುತ್ತಿರುವ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ.
ಈಗ ಎಲ್ಲ ಫಲಾನುಭವಿಗಳ ಆಧಾರ್‌ಗೆ ಲಿಂಕ್ ಮಾಡಿದ್ದರಿಂದ ನೇರವಾಗಿ ಪ್ರತಿ ತಿಂಗಳೂ ಅವರ ಖಾತೆಗೆ ಪಿಂಚಣಿ ಹಣ ಜಮೆಯಾಗುತ್ತಿದೆ. ಇದರಿಂದ ಸುಮಾರು 400 ಕೋಟಿ ರೂ. ಉಳಿತಾಯವಾಗಿದೆ. 60 ವರ್ಷ ತುಂಬಿದವರ ಪಟ್ಟಿ ನೇರವಾಗಿ ಸರ್ಕಾರದ ಬಳಿ ಲಭ್ಯವಾಗುವುದರಿಂದ ಪ್ರತಿ ವರ್ಷ ಅವರ ಮನೆಗಳಿಗೇ ನೇರವಾಗಿ ಪಿಂಚಣಿ ತಲುಪಿಸಲಾಗುವುದು. ಈ ವರ್ಷ ಹೊಸದಾಗಿ 2.5 ಲಕ್ಷ ಜನರಿಗೆ ಹೊಸದಾಗಿ ಪಿಂಚಣಿ ನೀಡಲಾಗುತ್ತಿದೆ ಎಂದು ಅಶೋಕ್ ಹೇಳಿದರು.
ನಾನು ನಿರ್ವಹಿಸುವ ಖಾತೆಯಲ್ಲಿ ಶಾಶ್ವತವಾಗಿ ಜನರಿಗೆ ನೆರವಾಗುವ ಹೊಸ ಕಾರ್ಯಕ್ರಮ ರೂಪಿಸಬೇಕು ಎಂಬುದು ನನ್ನ ನಿಲುವು. ಕೊರೊನಾ ಸಂದರ್ಭದಲ್ಲಿ ಮೃತರಾದವರ ಅಸ್ಥಿ ಪಡೆಯಲು ವಾರಸುದಾರರು ಮುಂದಾಗದ ಕಾರಣ ಸರ್ಕಾರದ ಪರವಾಗಿ ನಾನೇ ಅವರ ಮನೆ ಮಗನಾಗಿ ಅಸ್ಥಿ ವಿಸರ್ಜಿಸಿ ನಂತರ ಆತ್ಮಕ್ಕೆ ಸದ್ಗತಿ ದೊರಕಲು ಪಿಂಡ ಪ್ರದಾನ ಮಾಡಿ ವಿಷ್ಣುಪಾದ ಪೂಜೆ ನೆರವೇರಿಸಿದೆ.
ಗ್ರಾಮಕ್ಕೊಂದು ಸ್ಮಶಾನ ಮಾಡುವ ಗುರಿ: ಸಚಿವ ●ಆರ್.ಅಶೋಕ್, ಕಂದಾಯ ಸಚಿವ-
ರಾಜ್ಯದ ಪ್ರತಿಯೊಂದು ಗ್ರಾಮದಲ್ಲಿ ಸ್ಮಶಾನ ಮಾಡಲು ತೀರ್ಮಾನ ಮಾಡಲಾಗಿದೆ. ಅದಕ್ಕಾಗಿ ಈಗಾಗಲೇ ಜಮೀನು ಗುರುತಿಸಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ನೀರಾವರಿ ವ್ಯಾಪ್ತಿಗೆ ಒಳಪಟ್ಟ ಜಿಲ್ಲೆಗಳಲ್ಲಿ ಸರ್ಕಾರಿ ಜಮೀನು ಇಲ್ಲದ ಕಾರಣ ಸ್ಮಶಾನ ಮಾಡಲು ಕಷ್ಟವಾಗುತ್ತಿದೆ. ಅದಕ್ಕಾಗಿ ಕನಿಷ್ಠ 1 ಎಕರೆ ಜಮೀನು ಖರೀದಿ ಮಾಡಿ ಸ್ಮಶಾನಕ್ಕೆ ಸ್ಥಳ ಗುರುತಿಸಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದ್ದು, ಅದಕ್ಕಾಗಿ ಎಲ್ಲ ಜಿಲ್ಲಾಧಿಕಾರಿಗಳು ತಲಾ 2 ಕೋಟಿ ರೂ. ನೀಡಲಾಗಿದೆ ಎಂದು ಸಚಿವ ಆರ್. ಅಶೋಕ್ ತಿಳಿಸಿದರು.