ಚುನಾವಣ ವೇಳಾಪಟ್ಟಿ ಪ್ರಕಟವಾದ 2023ರ ಮಾ. 29ರಿಂದ ಎ. 13ರ ವರೆಗೆ ವಿಚಕ್ಷಣ ದಳ, ಸ್ಥಿರ ಕಣ್ಗಾವಲು ತಂಡಗಳು, ಪೊಲೀಸರು ಮತ್ತು ಆದಾಯ ತೆರಿಗೆ ಅಧಿಕಾರಿಗಳು ಸೇರಿ 57.36 ಕೋಟಿ ರೂ. ನಗದು, 17.93 ಕೋಟಿ ರೂ. ಮೌಲ್ಯದ ಉಚಿತ ಉಡುಗೊರೆಗಳು, 21.27 ಕೋಟಿ ರೂ. ಮೌಲ್ಯದ 53.28 ಕೆ.ಜಿ. ಬಂಗಾರ, 2.55 ಕೋಟಿ ರೂ. ಮೌಲ್ಯದ 373.79 ಕೆ.ಜಿ. ಬೆಳ್ಳಿ ವಶಪಡಿಸಿಕೊಂಡಿವೆ.
Advertisement
ಈ ಸಂಬಂಧ 1,182 ಎಫ್ಐಆರ್‌ಗಳನ್ನು ದಾಖಲಿಸಲಾಗಿದೆ. ವಿಚಕ್ಷಣ ದಳ, ಸ್ಥಿರ ಕಣ್ಗಾವಲು ತಂಡಗಳು, ಪೊಲೀಸರು ಮತ್ತು ಅಬಕಾರಿ ಅಧಿಕಾರಿಗಳ ತಂಡ ಸೇರಿ 32 ಕೋಟಿ ರೂ. ಮೌಲ್ಯದ 6.88 ಲಕ್ಷ ಲೀಟರ್ ಮದ್ಯ ವಶಪಡಿಸಿಕೊಂಡಿವೆ. 13.20 ಕೋಟಿ ರೂ. ಮೌಲ್ಯದ 577.90 ಕೆ.ಜಿ. ಮಾದಕ ದ್ರವ್ಯಗಳನ್ನು ಜಪ್ತಿ ಮಾಡಿವೆ.