Advertisement

ಬಿಜೆಪಿಯಿಂದ ಚುನಾವಣ ಮಾಹಿತಿ ಕೈಪಿಡಿ: ಸುರೇಶ್‌ಕುಮಾರ್‌

12:01 AM Apr 08, 2024 | Team Udayavani |

ಬೆಂಗಳೂರು: ಚುನಾವಣ ನಿಯಮ ಹಾಗೂ ಚುನಾವಣೆಗೆ ಸಂಬಂಧಿಸಿದ ಕಾನೂನುಗಳ ಕೈಪಿಡಿಯನ್ನು ಬಿಜೆಪಿ ಬಿಡುಗಡೆ ಮಾಡಿದ್ದು, ಅದರಲ್ಲಿ ರಾಜಕೀಯ ಪಕ್ಷಗಳು, ಪ್ರಚಾರ, ಚುನಾವಣ ಆಯೋಗ, ನೀತಿ ಸಂಹಿತೆ ಹಾಗೂ ಮಾಧ್ಯಮಗಳ ಪಾತ್ರವನ್ನು ವಿವರಿಸಲಾಗಿದೆ ಎಂದು ಮಾಜಿ ಸಚಿವ ಎಸ್‌. ಸುರೇಶಕುಮಾರ್‌ ತಿಳಿಸಿದರು.

Advertisement

ಪಕ್ಷದ ಮಾಧ್ಯಮ ಕೇಂದ್ರದಲ್ಲಿ ಕೈಪಿಡಿ ಬಿಡುಗಡೆಗೊಳಿಸಿ ಮಾತನಾಡಿದ ಅವರು, 28 ಪುಟಗಳಿರುವ ಕೈಪಿಡಿಯಲ್ಲಿ ಕ್ಯುಆರ್‌ ಕೋಡ್‌ಗಳನ್ನು ಕೊಡಲಾಗಿದೆ. ಅವುಗಳನ್ನು ಸ್ಕ್ಯಾನ್‌ ಮಾಡಿದ ಕೂಡಲೇ ಚುನಾವಣೆಗೆಂದೇ ಇರುವ ಆಯೋಗದ ಪ್ರಮುಖ ವೀಡಿಯೋಗಳು, ಆ್ಯಪ್‌ಗ್ಳು, ಅರ್ಜಿ ನಮೂನೆಗಳು, 1951ರ ಪ್ರಜಾಪ್ರತಿನಿಧಿ ಕಾಯ್ದೆ, ಮಾದರಿ ನೀತಿ ಸಂಹಿತೆ, ಪಕ್ಷಗಳಿಗೆ ಚುಹ್ನೆ ನೀಡುವ ಪ್ರಕ್ರಿಯೆ, ತಾರಾ ಪ್ರಚಾರಕರ ನಿಯೋಜನೆ, ಅರ್ಹತೆ, ಅನರ್ಹತೆ, ನಾಮಪತ್ರ ಸಲ್ಲಿಕೆ, ಜನಪ್ರತಿನಿಧಿಗಳು, ರಾಜಕೀಯ ಪಕ್ಷ, ಅದರ ಕಾರ್ಯಕರ್ತರಿಗೆ ಇರುವ ನಿಬಂಧನೆ ಇತ್ಯಾದಿ ಇರಲಿವೆ ಎಂದರು.

ಇತ್ತೀಚೆಗೆ ರಾಜಾಜಿ ನಗರದ ಅಟಲ್‌ ಬಿಹಾರಿ ವಾಜಪೇಯಿ ಕ್ರೀಡಾಂಗಣ ದಲ್ಲಿದ್ದ ವಾಜಪೇಯಿ ಪ್ರತಿಮೆಗೆ ಬಟ್ಟೆ ಸುತ್ತಿ ಮುಚ್ಚಿದ್ದರು. ಗಾಂಧಿನಗರ ವಿಧಾನಸಭಾ ಕ್ಷೇತ್ರದ ರಾಜೀವ್‌ ಗಾಂಧಿ ವೃತ್ತದಲ್ಲಿದ್ದ ಬೃಹತ್‌ ಪ್ರತಿಮೆಗೆ ಮಾತ್ರ ಯಾವುದೇ ಬಟ್ಟೆಯನ್ನೂ ಸುತ್ತಿರಲಿಲ್ಲ. ಈ ಬಗ್ಗೆ ಚುನಾವಣ ಆಯೋಗದ ಗಮನ ಸೆಳೆದಾಗ ವಾಜಪೇಯಿ ಅವರ ಪ್ರತಿಮೆಗೆ ಮುಚ್ಚಿದ್ದ ಹೊದಿಕೆಯನ್ನು ತೆರವು ಮಾಡಲಾಯಿತು. ನೀತಿ ಸಂಹಿತೆ ಹೆಸರಿನಲ್ಲಿ ಇಂತಹ ಹಾಸ್ಯಾಸ್ಪದಗಳು ನಡೆಯುತ್ತಿವೆ. ಇಂತಹ ಸಂದರ್ಭಗಳಲ್ಲಿ ನಿಯಮಗಳು ಏನಿವೆ ಎಂಬುದು ಕಾರ್ಯಕರ್ತರಿಗೂ ಗೊತ್ತಿರಬೇಕು ಎಂಬುದಕ್ಕೆ ಈ ಕೈಪಿಡಿ ಸಹಾಯವಾಗಲಿದೆ ಎಂದು ವಿವರಣೆ ನೀಡಿದರು.

ಶನಿವಾರವಷ್ಟೇ ಬಿಜೆಪಿ ಸಂಸ್ಥಾಪನಾ ದಿನವನ್ನು ಆಚರಣೆ ಮಾಡಿದ್ದು ಪಕ್ಷದ ಕಾರ್ಯಕರ್ತರು, ಬೂತ್‌ ಅಧ್ಯಕ್ಷರ ಮನೆಗಳ ಮೇಲೆ ಬಿಜೆಪಿ ಚಿಹ್ನೆ ಹಾಗೂ ಬಾವುಟವನ್ನು ಅಳವಡಿಸಲಾಗಿದೆ. ಯಾವುದೇ ವ್ಯಕ್ತಿ ತನ್ನ ಖಾಸಗಿ ಸೊತ್ತು, ವಾಹನಗಳ ಮೇಲೆ ಪಕ್ಷದ ಚಿಹ್ನೆ, ಬಾವುಟವನ್ನು ಅಳವಡಿಸಿಕೊಳ್ಳಲು ನೀತಿ ಸಂಹಿತೆ ಅಡ್ಡಿ ಬರುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ನಾಮಪತ್ರ ಸಲ್ಲಿಸಿರುವ ಕಾಂಗ್ರೆಸ್‌ ಅಭ್ಯರ್ಥಿಗಳ ವಿರುದ್ಧ 18 ಮೊಕ ದ್ದಮೆಗಳಿದ್ದರೆ, ಬಿಜೆಪಿ ಅಭ್ಯರ್ಥಿಗಳ ವಿರುದ್ಧ 10 ಹಾಗೂ ಜೆಡಿಎಸ್‌ ಹುರಿಯಾಳುಗಳ ವಿರುದ್ಧ 5 ಪ್ರಕರಣಗಳಿವೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next