Advertisement

ಎಲೆಕ್ಷನ್‌ ಗ್ರಾಮ್‌ ಕೀ ಬಾತ್‌: “ನಮ್ಮ ಒಂದು ಓಟಿನ ಮೌಲ್ಯದ ಅರಿವಿತ್ತು”

12:09 AM Mar 31, 2023 | Team Udayavani |

ಕುಂದಾಪುರ: ಚುನಾವಣೆ ಅಂದರೆ ಅಲ್ಲಿ ಅಭಿವೃದ್ಧಿ, ಪ್ರಗತಿ, ಜನರ ಬೇಡಿಕೆಗಳು ಚರ್ಚೆಯಾಗಬೇಕು. ಅವುಗಳೇ ಸದ್ದು ಮಾಡಬೇಕು. ಆದರೆ ಈಗೀಗ ಬರೀ ಹಣ, ಆಫರ್‌ಗಳದ್ದೇ ಮಾತು ಹೆಚ್ಚಾಗಿದೆ.

Advertisement

ಇಂತಹ ಮನಃಸ್ಥಿತಿ ಮೊದಲು ಬದಲಾವಣೆಯಾದರೆ ನಮ್ಮ ಇಂದಿನ ವ್ಯವಸ್ಥೆ ಸುಧಾರಣೆಯಾಗಬಹುದು. ಇಲ್ಲವಾದರೆ ಇದು ಹೀಗೆಯೇ ಎನ್ನುವುದು ಬೈಂದೂರು ಮತ ಕ್ಷೇತ್ರದ ಸುತ್ತ ತಿರುಗಾಡಿ ದಾಗ ಜನರಿಂದ ವ್ಯಕ್ತವಾಗುವ ಅಭಿಪ್ರಾಯವಿದು.

ಮತದಾನದ ಸಂದರ್ಭ ದಲ್ಲಿ ಹಣ ಹಂಚುವ, ಆಮಿಷ, ಕೊಡುಗೆಗಳಿಗೆ ಮೊದಲು ಕಡಿವಾಣ ಹಾಕಲೇ ಬೇಕು. ಇಲ್ಲ ವಾದರೆ ಹೇಗೆ ನ್ಯಾಯವಾದವರು ಗೆಲ್ಲಲು ಸಾಧ್ಯ? ಎಂದು ಹಲವರು ಪ್ರಶ್ನಿಸುತ್ತಾರೆ.

ಮತದಾರರು ಅಭ್ಯರ್ಥಿಯು ಮಾಡಿರುವ ಕೆಲಸ ನೋಡಿ, ಅಭಿವೃದ್ಧಿ ಪರ ವಾದ ಚಿಂತನೆಗಳನ್ನು ನೋಡಿ ಮತ ಹಾಕುವಂತಾಗಬೇಕು. ಅಂಥದ್ದೊಂದು ವಾತಾವರಣ ನಿರ್ಮಿಸಬೇಕು ಹಾಗೂ ನಿರ್ಮಾಣವಾಗಬೇಕು. ಹಾಗಾಗಿ ಈಗಿನ ಪರಿಸ್ಥಿತಿ ಬದಲಾಗಲೇಬೇಕು ಎಂಬುದು ಗುಜ್ಜಾಡಿಯ ರಾಘವೇಂದ್ರ ಅವರ ಈಗಿನ ಚುನಾವಣೆ ಬಗೆಗಿನ ಅಭಿಪ್ರಾಯ.

ಹಣಕಾಸಿನ ಕಳ್ಳಾಟ, ಇನ್ನಿತರ ಅಕ್ರಮ ಚಟುವಟಿಕೆಗಳಿಗೆ ಆಧಾರ್‌, ಪಾನ್‌ ಕಾರ್ಡ್‌ ಕಡಿವಾಣ ಹಾಕುತ್ತಿದೆ. ಅದೇ ರೀತಿ ಚುನಾವಣೆಯ ಸಂದರ್ಭ ಆಗುವ ದುಂದು ವೆಚ್ಚ, ಕಳ್ಳಾಟಗಳಿಗೂ ಕಡಿವಾಣ ಬೀಳಬೇಕು. ಇಲ್ಲದಿದ್ದರೆ ಓಟಿಗೆ ಮೊದಲು ಗೆಲ್ಲುವುದಕ್ಕಾಗಿ ಬೇಕಾಬಿಟ್ಟಿ ಖರ್ಚು ಮಾಡಿ, ಆಮೇಲೆ ಗೆದ್ದ ಅನಂತರ ಖರ್ಚು ಮಾಡಿದ್ದನ್ನು ಪೂರ್ತಿ ವಸೂಲಿ ಮಾಡುವ ಪರಿಸ್ಥಿತಿ ಈಗಿನ ಬಹುತೇಕರದ್ದು. ಅದಕ್ಕೆ ಕಡಿವಾಣ ಹಾಕುವುದು ಬಹಳ ಮುಖ್ಯ ಎನ್ನುವುದು ರಾಘವೇಂದ್ರರ ಮಾರ್ಮಿಕ ನುಡಿ.

Advertisement

ಹಿಂದಿನ ಕಾಲದಲ್ಲಿ ತಮ್ಮ ಓಟಿನ ಮೌಲ್ಯ ಏನು ಎಂಬ ಅರಿವು ಜನರ ಲ್ಲಿತ್ತು. ಅದಕ್ಕಾಗಿ ಯಾವುದೋ ಆಸೆ, ಆಮಿಷಗಳಿಗೆ ಓಟನ್ನು ಮಾರಿ ಕೊಳ್ಳು ವುದು ಕಡಿಮೆ ಇರುತ್ತಿತ್ತು. ನಮ್ಮ ಓಟು ಒಬ್ಬ ಉತ್ತಮ ಜನಪ್ರತಿನಿಧಿಯನ್ನು ಆಯ್ಕೆ ಮಾಡು ವಂತಾಗಬೇಕು ಎನ್ನುವ ಭಾವನೆ ಬಹುತೇಕ ರಲ್ಲಿ ಇರುತ್ತಿತ್ತು ಎನ್ನುತ್ತಾರೆ ಹೊಸಂಗಡಿಯ ಕೃಷಿಕರಾದ ರಾಜೇಂದ್ರ ಬೆಚ್ಚಳ್ಳಿ.

ಯಾರು ಹೆಚ್ಚು ಹಣ ಕೊಡುತ್ತಾರೋ ಅವರಿಗೆ ಓಟು ಹಾಕುವ ಮನಃಸ್ಥಿತಿ ಕೆಲವರದ್ದೇ. ಆದರೆ ಎಲ್ಲರ ಮೇಲೂ ಕೆಟ್ಟ ಅಭಿಪ್ರಾಯ ಬರುತ್ತದೆ. ಈಗಿನ ಚುನಾವಣೆ ಜನರಿಗೆ ಒಂದು ರೀತಿಯ ಹಿಂಸೆಯ ಅನು ಭವ. ರಾಜಕೀಯ ವ್ಯವಸ್ಥೆಯೇ ಅಸಹ್ಯ ಮೂಡಿಸುವಂತಿದೆ. ಈ ಅವಸ್ಥೆ ಬಗ್ಗೆಯೇ ಜನರಿಗೆ ಬೇಸರ ಬಂದಿದೆ. ಹಣ, ಹೆಂಡ ಹಂಚುವ ಅನೀತಿಗೆ ಮೊದಲು ತಡೆ ಹಾಕಬೇಕು ಎಂದು ಹೇಳುತ್ತಾರೆ ಮತ್ತೂಬ್ಬ ಮತದಾರರು.

ಇಡೀ ಕ್ಷೇತ್ರದ ಹಲವರಲ್ಲಿ ಮಾತನಾಡಿ ದಾಗಲೂ ಚುನಾವಣೆಯ ಉತ್ಸಾಹಕ್ಕಿಂತಲೂ ನಿರುತ್ಸಾಹ ಕಂಡುಬರುತ್ತಿದೆ. ಹಾಗೆಂದು ಮತದಾನಕ್ಕಲ್ಲ. ಅದು ನಮ್ಮ ಜವಾಬ್ದಾರಿ ಎನ್ನುವ ಜನರು, ಇಷ್ಟಪಟ್ಟು ಖುಷಿಯಿಂದ ಮತ ಚಲಾಯಿಸುವ ಸ್ಥಿತಿ ಬಂದರೆ ನಮಗೂ ತೃಪ್ತಿ ಎನ್ನುತ್ತಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next