Advertisement

ಕಸಾಪ ಚುನಾವಣೆ: ಜಿಲ್ಲಾಧ್ಯಕರ ಪಟ್ಟ ಯಾರಿಗೆ?

05:33 PM Nov 21, 2021 | Team Udayavani |

 ರಾಮನಗರ: ಕನ್ನಡ ಸಾಹಿತ್ಯ ಪರಿಷತ್‌ ರಾಜ್ಯ ಹಾಗೂ ಜಿಲ್ಲಾ ಘಟಕದ ಅಧ್ಯಕ್ಷರ ಆಯ್ಕೆಗೆ ಭಾನುವಾರ ನಡೆಯಲಿದ್ದು, ಅಧಿಕಾರಿಗಳು ಅಗತ್ಯ ಸಿದ್ಧತೆ ಮಾಡಿಕೊಂಡಿದ್ದಾರೆ. ಭಾನುವಾರ ಬೆಳಗ್ಗೆ 8 ಗಂಟೆಯಿಂದ ಸಂಜೆ 4 ಗಂಟೆವರೆಗೆ ಕೇಂದ್ರ ಮತ್ತು ಜಿಲ್ಲಾ ಕಸಾಪ ಅಧ್ಯಕ್ಷ ಸ್ಥಾನಗಳಿಗೆ ಮತದಾನ ನಡೆಯಲಿದೆ.

Advertisement

ಒಟ್ಟು 9680 ಮತದಾರರು ಮತ ಚಲಾಯಿಸ ಬೇಕಾಗಿದೆ. ಜಿಲ್ಲೆಯಲ್ಲಿ ಒಟ್ಟು 10 ಮತಗಟ್ಟೆಗಳು ಸ್ಥಾಪನೆಯಾಗಿವೆ. ಜಿಲ್ಲಾ ಕೇಂದ್ರ ರಾಮನಗರದಲ್ಲಿರುವ ಮಿನಿ ವಿಧಾನಸೌಧ, ಕನಕಪುರ, ಚನ್ನಪಟ್ಟಣ ತಾಲೂಕು ಕಚೇರಿ ಯಲ್ಲಿ ತಲಾ ಎರಡು ಮತ ಕೇಂದ್ರಗಳು ಸ್ಥಾಪನೆಯಾಗಿವೆ.

ಚನ್ನಪಟ್ಟಣ ತಾಲೂಕು ಮಳೂರು ಮತ್ತು ಕೋಡಂಬಳ್ಳಿ ನಾಡಕಚೇರಿ ಗಳು ಹಾಗೂ ಮಾಗಡಿ ತಾಲೂಕು ಕಚೇರಿ, ಇದೇ ತಾಲೂಕಿನ ಕುದೂರು ನಾಡ ಕಚೇರಿಯಲ್ಲಿ ತಲಾ 1 ಮತಗಟ್ಟೆ ಗಳನ್ನು ಸ್ಥಾಪಿಸಲಾಗಿದೆ. ಕಸಾಪ ಜಿಲ್ಲಾ ಅಧ್ಯಕ್ಷ ಸ್ಥಾನದ ಸ್ಪರ್ಧೆಗೆ ಕಣದಲ್ಲಿ 5 ಅಭ್ಯರ್ಥಿಗಳು ಇದ್ದಾರೆ. ಬಿ.ಟಿ. ನಾಗೇಶ್‌, ಚಕ್ಕರೆ ಯೋಗೀಶ್‌, ವಿ. ಸಂದೇಶ್‌, ಪಾರ್ವತಿಶ್‌ ಬಿಳಿದಾಳೆ, ಡಿ. ಕೃಷ್ಣಮೂರ್ತಿ ನಡುವೆ ಸ್ಪರ್ಧೆ ನಡಯಲಿದೆ.

ನಿರಂತರವಾಗಿ ಸುರಿಯುತ್ತಿರುವ ಮಳೆ ಹಾಗೂ ಭಾನುವಾರ ಮದುವೆಗಳು ಅಧಿಕವಾಗಿದ್ದು ಮತದಾನದ ಪ್ರಮಾಣ ಕಡಿಮೆ ಆಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ ಎಂದು ಕೆಲವು ಸಾಹಿತ್ಯಾಸಕ್ತರು ಅಭಿಪ್ರಾಯ ಪಟ್ಟಿದ್ದಾರೆ. ಮತ ದಾನಕ್ಕೆ ಅರ್ಹರಾಗಿರುವ ಕಸಾಪ ಸದಸ್ಯರನ್ನು ಮತದಾನಕ್ಕೆ ಮನವೊಲಿಸುವ ಸವಾಲು ಸ್ಪರ್ಧಿಗಳ ಬೆಂಬಲಿತರಿಗೆ ಎದುರಾಗಿದೆ. ಆಯಾಯ ಮತ ಕೇಂದ್ರಗಳಲ್ಲಿಯೇ ಮತ ಎಣಿಕೆ ನಡೆಯಲಿದ್ದು, ನಿಗದಿತ ನಮೂನೆಯಲ್ಲಿ ಅಭ್ಯರ್ಥಿಗಳು ಗಳಿಸಿದ ಮತಗಳು ಜಿಲ್ಲಾ ಕೇಂದ್ರದ ಚುನ ವಣಾಧಿಕಾರಿ ಕೈಗೆ ಬಂದು ಸೇರಿದ ನಂತರ ಅಧಿಕೃತ ಘೋಷಣೆಯಾಗಲಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next